ಸೋಮವಾರ, ಆಗಸ್ಟ್ 8, 2022
24 °C
ಮೊದಲ ಪ್ರೀತಿಯ ಬಗ್ಗೆ ಹೇಳಿಕೊಂಡ ಬಾಲಿವುಡ್ ನಟ

ಟೆನಿಸ್ ಕ್ಲಬ್‌ನಲ್ಲಿ ಹುಡುಗಿಯೊಬ್ಬಳನ್ನು ಇಷ್ಟಪಟ್ಟಿದ್ದೆ: ಅಮೀರ್ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

dh file

ಬೆಂಗಳೂರು: ‘ಲಾಲ್ ಸಿಂಗ್ ಛಡ್ಡಾ‘ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ನಟ ಅಮೀರ್ ಖಾನ್, ತಮ್ಮ ಮೊದಲ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಆರಂಭದ ದಿನಗಳಲ್ಲಿ ನಾನು ಟೆನಿಸ್ ಆಟಗಾರನಾಗಿದ್ದೆ. ಆಕೆಯೂ ಟೆನಿಸ್ ಕ್ಲಬ್‌ಗೆ ಬರುತ್ತಿದ್ದಳು, ದಿನವೂ ನಾನು ಆಕೆಯನ್ನು ನೋಡುತ್ತಿದೆ. ಆಕೆ ನನಗೆ ಇಷ್ಟವಾಗಿದ್ದಳು, ಆದರೆ ನನ್ನ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ. ಅದೊಂದು ದಿನ ಆಕೆ ತನ್ನ ಕುಟುಂಬದ ಜತೆಗೆ ವಿದೇಶಕ್ಕೆ ಹೋಗಿರುವ ಬಗ್ಗೆ ತಿಳಿಯಿತು. ಆ ಸಂದರ್ಭದಲ್ಲಿ ಮನಸ್ಸಿಗೆ ತುಂಬಾ ನೋವಾಯಿತು ಎಂದು ಅಮೀರ್ ಖಾನ್ ತಿಳಿಸಿದ್ದಾರೆ.

ಅದು ನನ್ನ ಮೊದಲ ಪ್ರೀತಿ.. ಆದರೆ ಆಕೆಗೆ ಆ ಬಗ್ಗೆ ತಿಳಿದಿಲ್ಲ. ಮುಂದೆ ನಾನು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಟೆನಿಸ್ ಆಟದಲ್ಲಿ ಪ್ರಶಸ್ತಿ ಪಡೆದುಕೊಂಡೆ ಎಂದು ಅಮೀರ್ ಹೇಳಿದ್ದಾರೆ.

ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಸಿನಿಮಾ ಆಗಸ್ಟ್ 11ರಂದು ತೆರೆಕಾಣಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು