ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯೂ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ನಿರ್ಮಾಪಕಿ ಸುಪ್ರಿತಾ ಶೆಟ್ಟಿ ಹಾಗೂ ನಿರ್ದೇಶಕ ರಾಜೇಶ್ ಮಾವಳ್ಳಿ ಪರಿಕಲ್ಪನೆಯಲ್ಲಿ ಅಣ್ಣಯ್ಯ ಧಾರಾವಾಹಿಯೂ ಮೂಡಿಬರುತ್ತಿದೆ. ಇದೀಗ ಅಣ್ಣಯ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ಪಾರು ಹಾಗೂ ಶಿವುಗೆ ನೆಚ್ಚಿನ ಜೋಡಿ ಪ್ರಶಸ್ತಿ ಸಿಕ್ಕಿದೆ.
.ಜೀ ಕುಟುಂಬ ಅವಾರ್ಡ್ಸ್: ಒಂದೇ ವೇದಿಕೆ ಮೇಲೆ ತಾರೆಯರ ಸಮಾಗಮ.Telugu Kutumbam Awards: ವೇದಿಕೆ ಮೇಲೆ ಮಂಡ್ಯ ರಮೇಶ್ ಪಾದಪೂಜೆ ಮಾಡಿದ ಕನ್ನಡತಿ.
ಜೀ ಕನ್ನಡ ವಾಹಿನಿಯಲ್ಲಿ 'ಜೀ ಕನ್ನಡ ಕುಟುಂಬ ಅವಾರ್ಡ್ಸ್- 2025' ಕಾರ್ಯಕ್ರಮ ಇದೇ ತಿಂಗಳ (ಅಕ್ಟೋಬರ್) 17, 18 ಮತ್ತು 19ರಂದು ಸಂಜೆ 6:30ಕ್ಕೆ ಪ್ರಸಾರವಾಗಲಿದೆ. ಹೀಗಾಗಿ ಜೀ ಕನ್ನಡ ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋಗಳನ್ನು ಬಿಡುಗಡೆ ಮಾಡುತ್ತಿದೆ. ಹೀಗೆ ಬಿಡುಗಡೆಯಾದ ಪ್ರೊಮೋ ಒಂದರಲ್ಲಿ ಪಾರು ಹಾಗೂ ಶಿವುಗೆ ನೆಚ್ಚಿನ ಜೋಡಿ ಪ್ರಶಸ್ತಿ ಬಂದಿದೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಪಾತ್ರದಲ್ಲಿ ನಟ ವಿಕಾಶ್ ಉತ್ತಯ್ಯ ಅಭಿನಯಿಸುತ್ತಿದ್ದು, ಪಾರು ಪಾತ್ರದಲ್ಲಿ ನಟಿ ನಿಶಾ ರವಿಕೃಷ್ಣನ್ ನಟಿಸುತ್ತಿದ್ದಾರೆ. ಈಗಾಗಲೇ ಈ ಇಬ್ಬರ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು, ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಶಿವು ಅವರು ಪಾರುಗಾಗಿ ಸುಂದರವಾರದ ಹಾಡು ಹಾಡಿದ್ದಾರೆ.

ಶಿವು ಪಾತ್ರಧಾರಿ ನಟ ವಿಕಾಶ್ ಉತ್ತಯ್ಯ ಅವರು ನಿಶಾ ರವಿಕೃಷ್ಣನ್ಗಾಗಿ ಎರಡು ಹಾಡುಗಳನ್ನು ತಮ್ಮ ಶೈಲಿಯಲ್ಲಿ ಹಾಡಿದ್ದಾರೆ. ‘ಪಾರುಗೋಸ್ಕರ ಹಾಡುತ್ತಿದ್ದೇನೆ. ಓ ಪ್ರೀತಿ ಹೆಣ್ಣೆ ಮನಸ್ಸೆಲ್ಲಾ ನೀನೇ’ ಎಂಬ ಸಾಲುಗಳನ್ನು ಹಾಡಿದ್ದಾರೆ. ವಿಕಾಶ್ ಉತ್ತಯ್ಯ ಹಾಡು ಕೇಳಿಸಿಕೊಳ್ಳುತ್ತಿದ್ದಂತೆ ನಟಿ ನಿಶಾ ರವಿಕೃಷ್ಣನ್ ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.