ಮಂಗಳವಾರ, ಜನವರಿ 18, 2022
15 °C

ವಿಡಿಯೊ: ಕ್ಯಾಮೆರಾ ಮುಂದೆ ಟವೆಲ್‌ ಕಿತ್ತೆಸೆದ ನಟಿ ನಿವೇದಿತಾ ಗೌಡ: ಮುಂದೆನಾಯ್ತು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಹಾಗೂ ಗಾಯಕ ಚಂದನ್‌ ಶೆಟ್ಟಿ ಪತ್ನಿ ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಹೊಸ ವಿಡಿಯೊ ಅಪ್ಡೇಟ್‌ ಮಾಡಿದ್ದಾರೆ. ಇದರಿಂದ ಕೆಲ ನೆಟ್ಟಿಗರು ಗರಂ ಆಗಿದ್ದಾರೆ. 

ನಿವೇದಿತಾ ಗೌಡ ಆಗಾಗ ಪ್ರಾಂಕ್‌ ವಿಡಿಯೊಗಳನ್ನು ಕೂಡ ಮಾಡುತ್ತಾರೆ. ಈ ಸಲ ಪತಿಯ ಎದುರೇ ವಿಡಿಯೊ ಮಾಡಿದ್ದಾರೆ. ಕ್ಯಾಮೆರಾ ಮುಂದೆ ನೃತ್ಯ ಮಾಡುತ್ತ ಮೈಮೇಲೆ ಇದ್ದ ಟವೆಲ್‌ ಅನ್ನು ಕಿತ್ತು ಎಸೆಯುತ್ತಾರೆ. ಇದನ್ನು ಗಮನಿಸಿದ ಚಂದನ್‌ ಶೆಟ್ಟಿ, ಒಳಗಡೆ ಬಟ್ಟೆ ಇಲ್ಲ ಎಂದು ಭಾವಿಸಿ ಅವರನ್ನು ತಬ್ಬಿಕೊಳ್ಳುತ್ತಾರೆ. ಆದರೆ ನಿವೇದಿತಾ ಶಾರ್ಟ್‌ ಬಟ್ಟೆ ಹಾಕಿರುತ್ತಾರೆ. 

ತಮಾಷೆಗಾಗಿ ಮಾಡಿದ ಈ ವಿಡಿಯೊವನ್ನು ಕೆಲ ನೆಟ್ಟಿಗರು ಗಂಭೀರವಾಗಿ ಪರಿಗಣಿಸಿ, ಈ ರೀತಿ ಮಾಡಬಾರದು ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನು ನಿವೇದಿತಾ ಅಭಿಮಾನಿಗಳು ವಿಡಿಯೊ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ವಿಡಿಯೊ ಅಪ್ಲೋಡ್‌ ಮಾಡಿ 24 ಗಂಟೆಯಲ್ಲಿ 7 ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಕೆಲವರು ನಿವೇದಿತಾ ಅವರ ವರ್ತನೆ ಸರಿ ಇಲ್ಲ ಎಂದು ಟೀಕಿಸಿದ್ದಾರೆ. ನೆಗೆಟಿವ್‌ ಕಾಮೆಂಟ್‌ಗಳ ಬಗ್ಗೆ ಈ ಜೋಡಿ ತಲೆಕೆಡಿಸಿಕೊಂಡಿಲ್ಲ. 

ಬಿಗ್​ ಬಾಸ್​ ರಿಯಾಲಿಟಿ ಶೋ ಮೂಲಕ ನಿವೇದಿತಾ ಗೌಡ ಜನಪ್ರಿಯರಾದರು. ನಂತರದ ದಿನಗಳಲ್ಲಿ ಕಿರುತೆರೆಯಲ್ಲಿ ಸಕ್ರಿಯರಾದರು. ಚಂದನ್ ಶೆಟ್ಟಿ ಅವರನ್ನು ಮದುವೆಯಾಗಿರುವ ನಿವೇದಿತಾ ಗೌಡ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು