ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಗುಡಿ ಡೇಸ್, ಮಹಾಭಾರತ ಕನ್ನಡದಲ್ಲಿ

Last Updated 5 ಮೇ 2020, 19:30 IST
ಅಕ್ಷರ ಗಾತ್ರ

ಬೇರೆ ಬೇರೆ ಭಾಷೆಗಳಲ್ಲಿ ಇರುವ ಒಳ್ಳೆಯ ಮನರಂಜನಾ ಕಾರ್ಯಕ್ರಮಗಳನ್ನು ಕನ್ನಡದಲ್ಲೇ ನೋಡಬೇಕು ಎಂದು ಬಯಸುವವರು ಮೇ 11ರಿಂದ ಟಿ.ವಿ. ಮುಂದೆ ಖುಷಿಯಿಂದ ಕುಳಿತುಕೊಳ್ಳಬಹುದು.

ಶಂಕರ್ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್‌’ ಧಾರಾವಾಹಿಯು ಕನ್ನಡದಲ್ಲಿ ಪ್ರಸಾರ ಆರಂಭಿಸಲಿದೆ. ಇದು ಜೀ ಕನ್ನಡ ವಾಹಿನಿಯಲ್ಲಿ ಮೇ 11ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ಅಷ್ಟೇ ಅಲ್ಲ, ಅದೇ ತಾರೀಕಿನಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಮಹಾಭಾರತ’ ಪೌರಾಣಿಕ ಧಾರಾವಾಹಿ ಪ್ರಸಾರ ಆಗಲಿದೆ.

‘ಮಹಾಭಾರತ’ವು ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಹಿಂದಿಯಲ್ಲಿ 2013ರಲ್ಲಿ ಪ್ರಸಾರ ಆಗಿದೆ. ಕನ್ನಡದಲ್ಲಿ ಇದು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ ಎಂಬ ಸುದ್ದಿ ಸಿಕ್ಕಿದೆ. ಅಂದಹಾಗೆ, ಏಪ್ರಿಲ್ 13ರಿಂದ ಇದು ತಮಿಳು, ಮಲಯಾಳ, ತೆಲುಗಿನಲ್ಲಿ ಪ್ರಸಾರ ಆರಂಭಿಸಿದೆ. ಕನ್ನಡದಲ್ಲಿ ಮೇ 11ರಿಂದ ಪ್ರಸಾರ ಆಗಲಿದೆ.

‘ಮುಂಬೈ ಮೂಲದ ಸ್ವಸ್ತಿಕ್ ಪ್ರೊಡಕ್ಷನ್ಸ್ ಈ ಧಾರಾವಾಹಿಯ ನಿರ್ಮಾಣ ಮಾಡಿದೆ. ಹಸ್ತಿನಾಪುರದ ಶಂತನು ಮಹಾರಾಜನ ಕಥೆಯಿಂದ ಆರಂಭವಾಗಿ ಕುರುಕ್ಷೇತ್ರ ಯುದ್ಧದವರೆಗಿನ ಕಥೆ ಇದರಲ್ಲಿ ಇದೆ. ಇಷ್ಟನ್ನೂ ಒಟ್ಟು 260 ಕಂತುಗಳಲ್ಲಿ ಹೇಳಲಾಗಿದೆ. ಅದ್ದೂರಿ ಸೆಟ್, ಅದ್ಭುತವಾದ ಗ್ರಾಫಿಕ್ಸ್ ಕೆಲಸ ಈ ಧಾರಾವಾಹಿಯ ವಿಶೇಷ’ ಎಂದು ಸುವರ್ಣ ವಾಹಿನಿ ಹೇಳಿದೆ.

ಸುರಭ್ ರಾಜ್ ಜೈನ್ ಕೃಷ್ಣನಾಗಿ, ಶಾಹೀರ್ ಶೇಖ್ ಅರ್ಜುನನಾಗಿ, ಪೂಜಾ ಶರ್ಮಾ ದೌಪದಿಯಾಗಿ, ಪ್ರಣೀತ್ ಭಟ್ ಶಕುನಿಯಾಗಿ ಇದರಲ್ಲಿ ನಟಿಸಿದ್ದಾರೆ.

ವರ್ಷಗಳ ಒತ್ತಾಯ: ಕನ್ನಡಿಗರೇ ಆದ ಶಂಕರ್ ನಾಗ್ ನಿರ್ದೇಶನ ಮಾಡಿದ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಬೇಕು ಎಂದು ಕನ್ನಡ ಡಬ್ಬಿಂಗ್ ಪರ ಕಾರ್ಯಕರ್ತರು ಆನ್‌ಲೈನ್‌ ಮೂಲಕ ಹಲವು ಬಾರಿ ಆಗ್ರಹಿಸಿದ್ದರು. ಹಾಗೆಯೇ, ಬೇರೆ ಬೇರೆ ಭಾಷೆಗಳಲ್ಲಿ ಪ್ರಸಾರ ಆಗುವ ಒಳ್ಳೆಯ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಬೇಕು ಎಂದೂ ಅವರು ಹಲವು ಬಾರಿ ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT