ತೆಲುಗು ಬಿಗ್ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿ ಹೋಗಿರುವ ಕನ್ನಡತಿ ಸಂಜನಾ ಗಲ್ರಾನಿ ಅವರನ್ನು ನೋಡಲು ಅವರ ಕುಟುಂಬ ಆಗಮಿಸಿದೆ. ತೆಲುಗು ಬಿಗ್ ಬಾಸ್ನಲ್ಲಿ ಉತ್ತಮವಾಗಿ ಆಡುತ್ತಿರುವ ಅವರು ತಪ್ಪು ಕಂಡು ಬಂದಲ್ಲಿ ಹಾಗೂ ಅಗತ್ಯವಿದ್ದಾಗ ಮಾತ್ರ ಧ್ವನಿ ಎತ್ತುತ್ತಿದ್ದಾರೆ. ಟಾಸ್ಕ್ಗಳಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
.ಬಿಗ್ಬಾಸ್ನಲ್ಲಿ ಸಂಜನಾ ಗಲ್ರಾನಿ ಆರ್ಭಟ: ಕನ್ನಡತಿ ಆಟಕ್ಕೆ ದಂಗಾದ ಮನೆಮಂದಿ.ತೆಲುಗು Bigg Boss 9: ಸಂಜನಾ ಗಲ್ರಾನಿ ಎಂಟ್ರಿ; ಕನ್ನಡದ ಇಬ್ಬರು ನಟಿಯರು.
ಇದರ ಮಧ್ಯೆ 75 ದಿನಗಳನ್ನು ಪೂರೈಸಿದ ತೆಲುಗು ಬಿಗ್ಬಾಸ್ ಮನೆಗೆ ನಟಿ ಸಂಜನಾ ಗಲ್ರಾನಿ ಅವರ ಪತಿ ಹಾಗೂ ಇಬ್ಬರು ಪುಟಾಣಿ ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. ಇದೇ ಪ್ರೊಮೋವನ್ನು ಸಂಜನಾ ಅವರ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಾಗಿದೆ. ಅದರ ಜೊತೆಗೆ ‘ತಾಯಿಯ ಹೃದಯವು ಜಗತ್ತಿಗೆ ಗಟ್ಟಿಯಾಗಿ ಉಳಿಯಬಹುದು. ಆದರೆ ಅವಳ ಮಕ್ಕಳಿಗಾಗಿ ಮನಸ್ಸು ಕರಗಲು ಒಂದು ಸೆಕೆಂಡ್ ಸಾಕು. ಇಂದು ಸಂಜನಾಳ ಕಣ್ಣೀರು ಶುದ್ಧ ಪ್ರೀತಿಯಾಗಿತ್ತು’ ಎಂದು ಬರೆದುಕೊಂಡಿದ್ದಾರೆ.

ಇನ್ನು, ಬಿಗ್ಬಾಸ್ ಮನೆಗೆ ಬಂದ ಪತಿ ಅಜೀಜ್ ಪಾಶಾ ಹಾಗೂ ಮಗ ಅಲಾರಿಕ್ ಮತ್ತು ಮಗಳನ್ನು ನೋಡುತ್ತಿದ್ದಂತೆ ನಟಿ ಸಂಜನಾ ಭಾವುಕರಾದರು. ಬಳಿಕ ಮಕ್ಕಳ ಜೊತೆಗೆ ಆಟವಾಡಿದ್ದಾರೆ. ನಂತರ ಪತಿಯ ಜೊತೆಗೆ ತಾವು ಆಡುತ್ತಿರುವ ಬಗ್ಗೆ ವಿಚಾರಿಸಿದ್ದಾರೆ. ಇದಕ್ಕೂ ಮುನ್ನ ಸಂಜನಾ ಅವರು ಕುಟುಂಬಸ್ಥರನ್ನು ನೆನೆದು ಕಣ್ಣೀರಿಟ್ಟಿದ್ದರು. ಈಗ ಮುದ್ದಾದ ಮಕ್ಕಳನ್ನು ನೋಡಿ ಖುಷಿ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.