ಭಾನುವಾರ, 9 ನವೆಂಬರ್ 2025
×
ADVERTISEMENT
ಆಳ–ಅಗಲ: ಘೋಷಣೆಯಾಗಿಯೇ ಉಳಿದ ಭರವಸೆ
ಆಳ–ಅಗಲ: ಘೋಷಣೆಯಾಗಿಯೇ ಉಳಿದ ಭರವಸೆ
ಫಾಲೋ ಮಾಡಿ
Published 9 ನವೆಂಬರ್ 2025, 19:30 IST
Last Updated 9 ನವೆಂಬರ್ 2025, 19:30 IST
Comments
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಯನ್ನು ಪರಾಮರ್ಶೆಗೆ ಒಳಪಡಿಸಿರುವ ಸಿವಿಕ್‌ ಸಂಸ್ಥೆ, ‘ನಮ್ಮ ಸರ್ಕಾರ, ನಮ್ಮ ರಿಪೋರ್ಟ್ ಕಾರ್ಡ್’ ಎಂಬ ವರದಿಯನ್ನು ಅಕ್ಟೋಬರ್‌ 30ರಂದು ಬಿಡುಗಡೆ ಮಾಡಿದೆ. ಚುನಾವಣೆಗೂ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ನೀಡಿದ್ದ ಭರವಸೆಗಳನ್ನು ಆಧರಿಸಿ, ಎರಡು ವರ್ಷಗಳಲ್ಲಿ ಎಷ್ಟು ಆಶ್ವಾಸನೆಗಳನ್ನು ಈಡೇರಿಸಿದೆ ಎಂಬುದನ್ನು ಅದು ಲೆಕ್ಕ ಹಾಕಿದೆ. ‘ಇದು ಸರ್ಕಾರದ ಕಾರ್ಯವೈಖರಿಯ ಬಗ್ಗೆ ನಾಗರಿಕರ ವಿಮರ್ಶೆ’ ಎಂದು ಸಂಸ್ಥೆ ಪ್ರತಿಪಾದಿಸಿದೆ.
ವರದಿ ತಯಾರಿ ಹೇಗೆ?
ಸಿವಿಕ್ ಸದಸ್ಯರು, ಸ್ವಯಂಸೇವಕರು ಮತ್ತು ಇಂಟರ್ನ್‌ಗಳ ನೆರವಿನಿಂದ ವರದಿ ತಯಾರಿಸಲಾಗಿದೆ. ಪ್ರಮುಖ ಕ್ಷೇತ್ರಗಳಲ್ಲಿನ ಉಪವಿಭಾಗಗಳನ್ನು ಆಯ್ಕೆ ಮಾಡಿ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಪರಿಶೀಲಿಸಲಾಯಿತು. ನಂತರ, ಎಲ್ಲಾ ಭರವಸೆಗಳ ಸ್ಥಿತಿಯನ್ನು ನಿರ್ಣಯಿಸಲು ಇಲಾಖೆಗಳಿಗೆ ಆರ್‌ಟಿಐ ಅರ್ಜಿ ಸಲ್ಲಿಸಲಾಯಿತು. ಎರಡು ವರ್ಷಗಳಲ್ಲಿ ಮುದ್ರಣ ಮತ್ತು ಆನ್‌ಲೈನ್ ಸುದ್ದಿ ಮೂಲಗಳನ್ನು ಸಹ ಪರಿಶೀಲಿಸಿತು. ಈ ಎರಡು ಮೂಲಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ, ತಂಡವು ಪ್ರತಿ ಭರವಸೆಯ ಸ್ಥಿತಿಗತಿ ಏನು ಎನ್ನುವುದನ್ನು ವರದಿಯಲ್ಲಿ ದಾಖಲಿಸಿದೆ.
ಭ್ರಷ್ಟಾಚಾರದ ಬಗ್ಗೆ ಕಳವಳ
ಭ್ರಷ್ಟಾಚಾರದ ಬಗ್ಗೆ ಜನರಿಂದ ದೂರು ಬಂದಿರುವುದು ಮತ್ತು ಸಿಎಜಿ ಕೂಡ ಇದರ ಬಗ್ಗೆ ಗಮನ ಸೆಳೆದ ಬಗ್ಗೆ ವರದಿ ಪ್ರಸ್ತಾಪಿಸಿದೆ. ಭ್ರಷ್ಟಾಚಾರ ತಡೆಯುವ ದಿಸೆಯಲ್ಲಿ ಲೋಕಾಯುಕ್ತದ ಪಾತ್ರವನ್ನೂ ಉಲ್ಲೇಖಿಸಲಾಗಿದೆ. ಲೋಕಾಯುಕ್ತದಲ್ಲಿ ಅಕ್ರಮ ಸಂಪತ್ತಿನ 218 ಪ್ರಕರಣಗಳ ವಿಚಾರಣೆ ನಡೆಸಲಾಗಿದೆ. ನಾಲ್ಕು ಪ್ರಕರಣಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. 82 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. 101 ಪ್ರಕರಣಗಳಲ್ಲಿ ಕಾನೂನಾತ್ಮಕ ಸವಾಲುಗಳು ಎದುರಾಗಿವೆ. 67 ಪ್ರಕರಣಗಳಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. 34 ಪ್ರಕರಣಗಳನ್ನು ರದ್ದುಪಡಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ, ಇಂಧನ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು: ಗೊತ್ತು ಗುರಿ ಇಲ್ಲದ ಯೋಜನೆಗಳು
ಕೃಷಿ ಕ್ಷೇತ್ರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಪ್ರಾಥಮಿಕ ಶಿಕ್ಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT