ಶನಿವಾರ, 6 ಡಿಸೆಂಬರ್ 2025
×
ADVERTISEMENT
ವಾರದ ವಿಶೇಷ | ಕಟಕಟೆಯಲ್ಲಿ ಪೊಲೀಸರು: ಬೇಲಿಯೇ ಹೊಲ ಮೇಯ್ದಾಗ
ವಾರದ ವಿಶೇಷ | ಕಟಕಟೆಯಲ್ಲಿ ಪೊಲೀಸರು: ಬೇಲಿಯೇ ಹೊಲ ಮೇಯ್ದಾಗ
ಫಾಲೋ ಮಾಡಿ
Published 5 ಡಿಸೆಂಬರ್ 2025, 23:30 IST
Last Updated 5 ಡಿಸೆಂಬರ್ 2025, 23:30 IST
Comments
ಕರ್ನಾಟಕದ ಪೊಲೀಸರು ತಮ್ಮ ದಕ್ಷತೆ ಮತ್ತು ವೃತ್ತಿಪರತೆಗೆ ದೇಶದಲ್ಲಿಯೇ ಹೆಸರಾಗಿದ್ದರು. ಕಾನೂನು ಮೀರಿದವರನ್ನು ಅತ್ಯಂತ ಕ್ಷಿಪ್ರವಾಗಿ ಬಂಧಿಸಿ ಕಟಕಟೆಯಲ್ಲಿ ನಿಲ್ಲಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪೊಲೀಸರೇ ಕಟಕಟೆಯಲ್ಲಿ ನಿಲ್ಲುತ್ತಿದ್ದಾರೆ; ಅತ್ಯಾಚಾರ, ಸುಲಿಗೆ, ದರೋಡೆ, ಬೆದರಿಕೆ ಮುಂತಾದ ಆರೋಪಗಳಿಂದ ಪೊಲೀಸರು ಅಮಾನತುಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗು‌ತ್ತಲೇ ಇವೆ. ಅನ್ಯಾಯಕ್ಕೆ ಒಳಗಾದವರು ರಕ್ಷಣೆಗಾಗಿ ಪೊಲೀಸರ ಬಳಿಗೆ ಬರುತ್ತಿದ್ದರು. ಅಂಥ ಪೊಲೀಸರೇ ಈಗ ಆರೋಪಿಗಳ ಸ್ಥಾನದಲ್ಲಿ ನಿಲ್ಲುತ್ತಿರುವ ಪ್ರವೃತ್ತಿ ಕಂಡು ಬರುತ್ತಿದೆ
ಬೆಂಗಳೂರಿನಲ್ಲಿ ಹೆಚ್ಚು:
ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ. ಉದ್ಯೋಗ, ಶಿಕ್ಷಣದ ಕಾರಣಕ್ಕೆ ನಗರಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು, ಜನರ ರಕ್ಷಣೆ, ಅಪರಾಧ ಪ್ರಕರಣಗಳನ್ನು ತಡೆಯುವುದು, ಪತ್ತೆಹಚ್ಚುವಿಕೆ ಪೊಲೀಸರ ಕರ್ತವ್ಯ. ಆದರೆ, ಅಪರಾಧ ತಡೆಯಬೇಕಾದ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇತರೆ ನಗರದ ಪೊಲೀಸರದ್ದೂ ಅದೇ ಕಥೆ. ದಾವಣಗೆರೆ, ಬೆಳಗಾವಿ, ಮೈಸೂರು, ಮಂಗಳೂರಿನಲ್ಲೂ ಇಂಥ ಉದಾಹರಣೆಗಳು ಇವೆ.
ಪಾರದರ್ಶಕತೆ ಮುಖ್ಯ:
ಕೆಲವು ವರ್ಷಗಳ ಹಿಂದೆ ನೇಮಕಾತಿ ವಿಭಾಗದ ಎಡಿಜಿಪಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಪಿಎಸ್‌ಐ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು (ಈ ಪ್ರಕರಣದಲ್ಲಿ ಮರು ಪರೀಕ್ಷೆ ನಡೆದಿದೆ). ಈ ರೀತಿ ವಾಮಮಾರ್ಗದಲ್ಲಿ ಇಲಾಖೆ ಸೇರಿದವರಿಂದ ನ್ಯಾಯ ನಿರೀಕ್ಷೆ ಸಾಧ್ಯವೇ ಎನ್ನುವ ಪ್ರಶ್ನೆಯಿದೆ. ನೇಮಕಾತಿಯಲ್ಲಿ ಪಾರದರ್ಶಕತೆ ತಂದರೆ ಮಾತ್ರ ಇಲಾಖೆಗೆ ಸೇರಿದವರ ನಡವಳಿಕೆಯೂ ಉತ್ತಮವಾಗಿರಲು ಸಾಧ್ಯ ಎಂದು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.
ಅಪರಾಧ ಕೃತ್ಯಗಳಲ್ಲಿ ಪೊಲೀಸರು ಭಾಗಿಯಾದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಫ್‌ಐಆರ್‌ ಆದ ತಕ್ಷಣವೇ ಸೇವೆಯಿಂದ ವಜಾ ಮಾಡುತ್ತಿದ್ದೇವೆ. ಇಬ್ಬರನ್ನು ಈಗಾಗಲೇ ವಜಾ ಮಾಡಿದ್ದೇವೆ
ಜಿ.ಪರಮೇಶ್ವರ, ಗೃಹ ಸಚಿವ
ಸುತ್ತೋಲೆಗೂ ಕಿಮ್ಮತ್ತಿಲ್ಲ
ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯ ನಿರ್ವಹಿಸುವಾಗ ಪಾರದರ್ಶಕತೆ, ಸೌಜನ್ಯದ ವರ್ತನೆ, ನಿಷ್ಠೆ ತೋರಬೇಕು. ಅಧಿಕಾರ ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರ ಮೇಲೆ ಅನಗತ್ಯ ಬಲ ಪ್ರಯೋಗ ಅಥವಾ ದರ್ಪದ ವರ್ತನೆ ಇಲಾಖೆ ಘನತೆಗೆ ತಕ್ಕುದಾದ ನಡವಳಿಕೆ ಅಲ್ಲ. ಸಿವಿಲ್‌ ವ್ಯಾಜ್ಯಗಳಲ್ಲಿ ಪೊಲೀಸರು ಮಧ್ಯಸ್ಥಿಕೆ ವಹಿಸುವಂತಿಲ್ಲ ಎಂದು ಡಿಜಿಪಿ ಸುತ್ತೋಲೆ ಹೊರಡಿಸಿದ್ದರು. ಆದರೆ, ಆದೇಶ ಪಾಲನೆ ಮಾತ್ರ ಆಗುತ್ತಿಲ್ಲ. ನಡವಳಿಕೆ ಬದಲಾಗುತ್ತಿಲ್ಲ.
ಪೋಸ್ಟಿಂಗ್‌: ಕೋಟಿ ಮೀರಿದ ‘ವ್ಯವಹಾರ’
‘ಪಿಎಸ್ಐ, ಇನ್‌ಸ್ಪೆಕ್ಟರ್‌, ಡಿವೈಎಸ್‌ಪಿ, ಎಸಿಪಿ, ಎಸ್‌.ಪಿಗಳ ವರ್ಗಾವಣೆಗೆ ಹಣದ ವ್ಯವಹಾರ ನಡೆಯುತ್ತಿದೆ. ಆಯಕಟ್ಟಿನ ಠಾಣೆಗೆ ಇನ್‌ಸ್ಪೆಕ್ಟರ್‌ ವರ್ಗಾವಣೆ ಆಗಬೇಕಿದ್ದರೆ ₹20 ಲಕ್ಷದಿಂದ ₹50 ಲಕ್ಷ ಕೊಡಬೇಕು. ಅದೇ ಎಸಿಪಿ ದರ್ಜೆಯ ಅಧಿಕಾರಿಯ ಪೋಸ್ಟಿಂಗ್‌ಗೆ ₹75 ಲಕ್ಷ, ಎಸ್‌ಪಿ ದರ್ಜೆಯ ಅಧಿಕಾರಿಗೆ ₹2 ಕೋಟಿಯಿಂದ ₹5 ಕೋಟಿವರೆಗೆ ಇದೆ. ಸ್ಥಳ, ಠಾಣೆಗೆ ಅನುಗುಣವಾಗಿ ಹಣದ ಮೊತ್ತದಲ್ಲಿ ವ್ಯತ್ಯಾಸ ಆಗುತ್ತದೆ. ಹಣಕೊಟ್ಟು ವರ್ಗಾವಣೆ ಮಾಡಿಸಿಕೊಂಡವರು ‘ಅಕ್ರಮ’ದ ಹಾದಿ ತುಳಿಯುತ್ತಿದ್ದಾರೆ’ ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳಿದರು.
ಕಾರು ಹತ್ತಿಸಲು ಯತ್ನಿಸಿದ್ದ ಡಿವೈಎಸ್‌ಪಿ
ಅಮಾನತು, ಬಂಧನಕ್ಕೆ ಒಳಗಾದವರು
ಅಪರಾಧ ಕೃತ್ಯಗಳಲ್ಲಿ ಪೊಲೀಸರು ಭಾಗಿಯಾದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಫ್‌ಐಆರ್‌ ಆದ ತಕ್ಷಣವೇ ಸೇವೆಯಿಂದ ವಜಾ ಮಾಡುತ್ತಿದ್ದೇವೆ. ಇಬ್ಬರನ್ನು ಈಗಾಗಲೇ ವಜಾ ಮಾಡಿದ್ದೇವೆ
–ಜಿ.ಪರಮೇಶ್ವರ, ಗೃಹ ಸಚಿವ
ಜಿ.ಪರಮೇಶ್ವರ

ಜಿ.ಪರಮೇಶ್ವರ

ಎಂ.ಎ.ಸಲೀಂ
ಎಂ.ಎ.ಸಲೀಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT