ಗುರುವಾರ, 3 ಜುಲೈ 2025
×
ADVERTISEMENT
ಅಮೆರಿಕ ನೆರವು ಸ್ಥಗಿತ: ಬಡ, ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಾಗುವ ಪರಿಣಾಮಗಳೇನು?
ಅಮೆರಿಕ ನೆರವು ಸ್ಥಗಿತ: ಬಡ, ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಾಗುವ ಪರಿಣಾಮಗಳೇನು?
ಫಾಲೋ ಮಾಡಿ
Published 4 ಫೆಬ್ರುವರಿ 2025, 12:52 IST
Last Updated 4 ಫೆಬ್ರುವರಿ 2025, 12:52 IST
Comments
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ನೆರವು ಸ್ಥಗಿತ’ ಆದೇಶವು ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಸ್ಥಿರತೆ ಸೃಷ್ಟಿಸಿದೆ. ಹಿಂಸಾಚಾರದ ಕರಿನೆರಳು ಮತ್ತೆ ಆವರಿಸಿದೆ. ಅಭಿವೃದ್ಧಿ ಹಿಂದಕ್ಕೆ ಸರಿದು, ಭಯೋತ್ಪಾದನೆ ಮತ್ತೆ ಮುನ್ನೆಲೆಗೆ ಬರುತ್ತಿರುವುದು ಇಲ್ಲಿನ ಜನರ ನೆಮ್ಮದಿ ಕೆಡಿಸಿದೆ.
ಡೊನಾಲ್ಡ್ ಟ್ರಂಪ್ ಮತ್ತು ಮಾರ್ಕೊ ರುಬಿಯೊ

ಡೊನಾಲ್ಡ್ ಟ್ರಂಪ್ ಮತ್ತು ಮಾರ್ಕೊ ರುಬಿಯೊ

ರಾಯಿಟರ್ಸ್ ಚಿತ್ರ

‘ನಾವು ಖರ್ಚು ಮಾಡುವ ಪ್ರತಿಯೊಂದು ಡಾಲರ್‌, ನೆರವು ನೀಡುವ ಪ್ರತಿಯೊಂದು ಕಾರ್ಯಕ್ರಮಗಳು ಹಾಗೂ ನಾವು ಮುಂದುವರಿಸುವ ಪ್ರತಿಯೊಂದು ನೀತಿಗಳನ್ನೂ ನಾವು ಸಮರ್ಥಿಸಿಕೊಳ್ಳುವಂತಿರಬೇಕು. ಈ ಕಾರ್ಯಕ್ರಮಗಳನ್ನು ಬೆಂಬಲಿಸುವ ಮೊದಲು ಇದು ಅಮೆರಿಕಕ್ಕೆ ಸುರಕ್ಷಿತವೇ? ಅಮೆರಿಕವನ್ನು ಮತ್ತಷ್ಟು ಬಲಶಾಲಿಯನ್ನಾಗಿಸುವುದೇ? ಕಾರ್ಯಕ್ರಮಗಳು ಅಮೆರಿಕವನ್ನು ಹೆಚ್ಚು ಶ್ರೀಮಂತಗೊಳಿಸುವುದೇ? ಎಂಬ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದಿದ್ದಾರೆ.
ಮಾರ್ಕೊ ರೂಬಿಯೊ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ
ಅಮೆರಿಕ ನೆರವಿನ ಕ್ಷೇತ್ರವಾರು ಹಂಚಿಕೆ
ಆರ್ಥಿಕ ಅಭಿವೃದ್ಧಿಗೆ 19 ಶತಕೋಟಿ ಅಮೆರಿಕನ್ ಡಾಲರ್‌, ಆರೋಗ್ಯಕ್ಕೆ 16 ಶತಕೋಟಿ ಮತ್ತು ಮಾನವೀಯ ನೆರವಾಗಿ ₹15.6 ಶತಕೋಟಿ ಡಾಲರ್‌ ನೆರವನ್ನು ಅಮೆರಿಕ ನೀಡುತ್ತಿತ್ತು. ಇದರೊಂದಿಗೆ ಸೇನಾ ನೆರವಿಗಾಗಿ 8.2 ಶತಕೋಟಿ ನೆರವನ್ನು ಅಮೆರಿಕ ನೀಡುತ್ತಿತ್ತು. ಸೇನಾ ನೆರವನ್ನು ಅತಿ ಹೆಚ್ಚು ಪಡೆದಿರುವುದು ಇಸ್ರೇಲ್ ಮತ್ತು ಈಜಿಪ್ಟ್‌.
ಈಜಿಪ್ಟ್‌ ಪ್ರವಾಸೋದ್ಯಮ ಇಲಾಖೆ ಮತ್ತು ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ (USAID) ಸಹಯೋಗದಲ್ಲಿ ಈಜಿಪ್ಟ್‌ನ ಬಿಮಾರಿಸ್ತಾನ್‌ ಅಲ್ ಮುಯ್ಯಾದ್‌ ಶೇಖ್‌ ಪಾರಂಪರಿಕ ತಾಣದ ಪುನರುತ್ತಾನ ಯೋಜನೆಗೆ ಯುಎಸ್‌ಏಡ್‌ ಬೆಂಬಲ

ಈಜಿಪ್ಟ್‌ ಪ್ರವಾಸೋದ್ಯಮ ಇಲಾಖೆ ಮತ್ತು ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ (USAID) ಸಹಯೋಗದಲ್ಲಿ ಈಜಿಪ್ಟ್‌ನ ಬಿಮಾರಿಸ್ತಾನ್‌ ಅಲ್ ಮುಯ್ಯಾದ್‌ ಶೇಖ್‌ ಪಾರಂಪರಿಕ ತಾಣದ ಪುನರುತ್ತಾನ ಯೋಜನೆಗೆ ಯುಎಸ್‌ಏಡ್‌ ಬೆಂಬಲ

ರಾಯಿಟರ್ಸ್ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT