ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಮೂವರು ಕ್ರಿಕೆಟಿಗರೂ ಸೇರಿ ಹಲವರು ಮೃತಪಟ್ಟಿದ್ದಾರೆ. 132 ವರ್ಷಗಳ ಹಿಂದೆ ಬ್ರಿಟಿಷರು ರಚಿಸಿದ ಡ್ಯುರಾಂಡ್ ಗಡಿ ರೇಖೆಯ ವಿವಾದವು ಈಗ ಎರಡು ರಾಷ್ಟ್ರಗಳ ಮಧ್ಯೆ ಸಂಘರ್ಷದ ಮೂಲವಾಗಿದೆ.

ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ನಡುವಿನ ಸಂಘರ್ಷ ಉಲ್ಬಣಗೊಂಡಿದೆ. ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಮೂವರು ಕ್ರಿಕೆಟಿಗರೂ ಸೇರಿ ಹಲವರು ಮೃತಪಟ್ಟಿದ್ದಾರೆ. ಭಾರತದೊಂದಿಗೆ ಸಂಘರ್ಷಕ್ಕಿಳಿದು ಕೈಸುಟ್ಟುಕೊಂಡ ಪಾಕಿಸ್ತಾನ, ಇದೀಗ ಅಫ್ಗಾನಿಸ್ತಾನ ಮೇಲೆ ಮುಗಿಬಿದ್ದಿದೆ.

ಅಷ್ಟಕ್ಕೂ ಅಫ್ಗಾನಿಸ್ತಾನ ಮೇಲಿನ ದಾಳಿಗೆ 132 ವರ್ಷಗಳ ಹಿಂದೆ ಬ್ರಿಟಿಷರು ರಚಿಸಿದ 2,640 ಕಿ.ಮೀ. ಉದ್ದದ ಡುರಾಂಡ್ ಗಡಿ ರೇಖೆ ವಿವಾದವೇ ಕಾರಣ.

ಭಾರತದಲ್ಲಿ ಬ್ರಿಟಿಷ್ ವಸಾಹತು ಇದ್ದ ಸಂದರ್ಭದಲ್ಲಿ 1893ರಲ್ಲಿ ಭಾರತ ಮತ್ತು ಅಫ್ಗಾನಿಸ್ತಾನ ನಡುವೆ 2,640 ಕಿ.ಮೀ. ಉದ್ದದ ರೇಖೆಯನ್ನು ಬ್ರಿಟಿಷರು ರಚಿಸಿದರು. ಇದು ಫಕ್ತೂನ್ ಬುಡಕಟ್ಟು ಪ್ರದೇಶವನ್ನು ಸೀಳಿ ಹಾದು ಹೋಗುತ್ತದೆ. ಈ ರೇಖೆಯಿಂದಾಗಿ ಕುಟುಂಬಗಳು ಪ್ರತ್ಯೇಕಗೊಂಡಿವೆ. ಶತಮಾನಗಳಿಂದ ಜತೆಗೂಡಿ ಬದುಕುತ್ತಿದ್ದ ಇಡೀ ಸಮುದಾಯ ಇಬ್ಭಾಗವಾಗುವಂತಾಯಿತು. ಆರ್ಥಿಕ ವಲಯವೇ ಬದಲಾಯಿತು.

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ ಪಾಕಿಸ್ತಾನವು ಈ ಡುರಾಂಡ್ ಗಡಿ ರೇಖೆಯನ್ನು ಪರಿಗಣಿಸುವುದಾಗಿ ಹೇಳಿತು. ಆದರೆ, ಅಫ್ಗಾನಿಸ್ತಾನವು ಈ ರೇಖೆಯನ್ನು ಎಂದಿಗೂ ಒಪ್ಪಲಿಲ್ಲ ಹಾಗೂ ಅದರ ನ್ಯಾಯಸಮ್ಮತತೆಯನ್ನೂ ಗುರುತಿಸಲಿಲ್ಲ. ಅನಿಯಂತ್ರಿತ ಮತ್ತು ವಸಾಹತುಶಾಹಿ ಹೇರಿಕೆ ಎಂದು ವಾದಿಸುತ್ತಲೇ ಬಂದಿದೆ.

ಡುರಾಂಡ್ ರೇಖೆ ಎಂದೇಕೆ ಕರೆಯುತ್ತಾರೆ?

ಅಫ್ಗಾನಿಸ್ತಾನವನ್ನು ಆಕ್ರಮಿಸಲು ಬ್ರಿಟಿಷರು ತೀವ್ರ ಪ್ರಯತ್ನ ನಡೆಸಿದರು. ಬ್ರಿಟಿಷರ ಆಕ್ರಮಣ ಮತ್ತು ಆಫ್ಗಾನಿಸ್ತಾನದ ರಕ್ಷಣಾತ್ಮಕ ಕಾರ್ಯಾಚರಣೆ ಹಲವು ಕಾಲ ನಡೆಯಿತು. ಅಂತಿಮವಾಗಿ ಅಫ್ಗಾನಿಸ್ತಾನವನ್ನು ಆಕ್ರಮಿಸಿಕೊಳ್ಳಲು ವಿಫಲರಾದ ಬ್ರಿಟಿಷರು ಭಾರತದಿಂದ ಪ್ರತ್ಯೇಕವಾಗಿಡಲು ನಿರ್ಧರಿಸಿದರು. ಇದರ ಪರಿಣಾಮ 1893ರಲ್ಲಿ ಬ್ರಿಟಿಷ್ ರಾಜತಾಂತ್ರಿ ಸರ್ ಮಾರ್ಟಿಮರ್ ಡುರಾಂಡ್ ಮತ್ತು ಅಫ್ಗಾನಿಸ್ತಾನದ ಆಡಳಿತಗಾರ ಅಮೀರ್ ಅಬ್ದುರ್ ರಹಮಾನ್ ಖಾನ್ ಅವರ ನಡುವೆ ನಡೆದ ಒಪ್ಪಂದ ನಡೆಯಿತು. ಡುರಾಂಡ್ ರೇಖೆ ರಚನೆಗೊಂಡಿತು.
.ಪಾಕ್–ಅಫ್ಗನ್ ಸಂಘರ್ಷ: ತಾತ್ಕಾಲಿಕ ಕದನ ವಿರಾಮದ ಬಳಿಕವೂ 12 ಜನರ ಹತ್ಯೆ.ಪಾಕ್ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್.
ವಿವಾದ ಸಾಗಿ ಬಂದ ಹಾದಿ

ಈ ಬಗೆಹರಿಯದ ವಿವಾದವು ಆಫ್ಗನ್ನರು ಮತ್ತ ಫಕ್ತೂನ್ಗಳಲ್ಲಿ ಒಂದು ರೀತಿಯ ಐತಿಹಾಸಿಕ ಬೇಗುದಿಯ ಭಾವನೆಯನ್ನು ಸೃಷ್ಟಿಸಿದೆ. ಅಸ್ಪಷ್ಟವಾದ ಗಡಿಯ ಸ್ವರೂಪವು ನಿರಂತರ ವಿವಾದಗಳನ್ನು ಹುಟ್ಟುಹಾಕುತ್ತಲೇ ಬಂದಿದೆ. ಗಡಿ ಬೇಲಿ ನಿರ್ಮಾಣ, ಪೋಸ್ಟ್ಗಳ ನಾಶ ಮತ್ತು ಹಿಂಸಾತ್ಮಕ ಘರ್ಷಣೆಗಳನ್ನೂ ಒಳಗೊಂಡಂತೆ ಪದೇ ಪದೇ ಘಟನೆಗಳು ನಡೆಯುತ್ತಲೇ ಇವೆ. ಡುರಾಂಡ್ ರೇಖೆಯ ಗುರುತಿಸುವಿಕೆಗೆ ಸಂಬಂಧಿಸಿದ ಉದ್ವಿಗ್ನತೆ ಕೇವಲ ಸಾಂಕೇತಿಕವಲ್ಲ. ಬದಲಿಗೆ, ಎರಡೂ ರಾಷ್ಟ್ರಗಳು ಇದನ್ನು ಪ್ರತಿಷ್ಠೆ ಮತ್ತು ಆತ್ಮಗೌರವವಾಗಿ ಸ್ವೀಕರಿಸಿರುವುದು ಈಗ ಸಂಘರ್ಷದ ಹಾದಿ ಹಿಡಿದಿದೆ.

ಗಡಿ ಭದ್ರತೆ ಮತ್ತು ಭಯೋತ್ಪಾದನೆ

ಈ ಗಡಿರೇಖೆಯ ವಿವಾದವು ಎರಡೂ ರಾಷ್ಟ್ರಗಳು ಮತ್ತು ಅಲ್ಲಿನ ಜನರಿಗೆ ನಿತ್ಯ ಸಂಕಟವನ್ನುಂಟು ಮಾಡಿದರೆ, ಈ ಜಾಗ ಭಯೋತ್ಪಾದಕರಿಗೆ ಪ್ರಶಸ್ತಭೂಮಿಯಾಗಿದೆ. ಅದರಲ್ಲೂ ವಿಶೇಷವಾಗಿ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ (TTP) ಆಶ್ರಯ ತಾಣ ಈ ಪ್ರದೇಶವೇ ಆಗಿದೆ. ಇಲ್ಲಿ ಭಯೋತ್ಪಾದಕರಿಗೆ ತರಬೇತಿ, ಆಶ್ರಯ ಮತ್ತು ದಾಳಿ ನಡೆಸಲು ಗಡಿಯುದ್ದಕ್ಕೂ ಸಂಚರಿಸುವ ಅವಕಾಶ ಮುಕ್ತವಾಗಿ ಸಿಕ್ಕಿದೆ.

ಅಫ್ಗಾನಿಸ್ತಾನದಲ್ಲಿ 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ನ ಭಯೋತ್ಪಾದಕರಿಗೆ ಆಶ್ರಯ ನೀಡಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಈ ಆರೋಪವನ್ನು ಅಲ್ಲಗಳೆದಿರುವ ಅಫ್ಗಾನಿಸ್ತಾನವು, ಗಡಿಯಾಚೆಗಿನ ಹೋರಾಟಗಾರರು ಮತ್ತು ನುಸುಳುಕೋರರನ್ನು ಪಾಕಿಸ್ತಾನ ಪ್ರೋತ್ಸಾಹಿಸುತ್ತಿದೆ ಎಂದು ದೂರಿದೆ. ಈ ಸಮಸ್ಯೆಯಿಂದಾಗಿ ಮಿಲಿಟರಿ ಕಾರ್ಯಾಚರಣೆ, ವೈಮಾನಿಕ ದಾಳಿ ಮತ್ತು ಪ್ರತೀಕಾರದ ದಾಳಿಗಳು ಗಡಿಯಲ್ಲಿ ಸದಾ ಅಭದ್ರ ಸ್ಥಿತಿ ನಿರ್ಮಾಣ ಮಾಡಿದೆ.
.Pakistan-Afghanistan Clashes: ಗಡಿಯಲ್ಲಿ ಮತ್ತೆ ಪಾಕ್-ಅಫ್ಗನ್ ಸಂಘರ್ಷ.ಅಫ್ಗಾನ್ ವಿದೇಶಾಂಗ ಸಚಿವರೊಂದಿಗೆ ಸಚಿವ ಜೈಶಂಕರ್ ಮಾತುಕತೆ.
ಮಾನವೀಯ ಮತ್ತು ಆರ್ಥಿಕ ಪರಿಣಾಮಗಳು

ಈ ವಿವಾದಿತ ರಾಜತಾಂತ್ರಿಕ ಸಮಸ್ಯೆ ಉಲ್ಬಣದಿಂದಾಗಿ ಗಡಿ ಭಾಗದಲ್ಲಿ ನೆಲೆಸಿರುವ ಸಮುದಾಯಗಳು ನಿರಂತರ ಸಮಸ್ಯೆ ಎದುರಿಸುತ್ತಿವೆ. ಗಡಿಯಲ್ಲಿ ಆಗಾಗ್ಗ ಉಂಟಾಗುವ ಸಂಘರ್ಷಗಳು ಮತ್ತು ಗಡಿ ಮುಚ್ಚುವುದರಿಂದ ವ್ಯಾಪಾರಕ್ಕೆ ತೀವ್ರ ತೊಡಕಾಗಿದೆ. ಕುಟುಂಬಗಳನ್ನು ವಿಭಜಿಸುತ್ತವೆ ಮತ್ತು ಮಾನವೀಯ ಸಂಘರ್ಷಕ್ಕೆ ಹಾದಿಯಾಗಿದೆ ಎಂದು ಇಲ್ಲಿನ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಭಾಗದ ಲಕ್ಷಾಂತರ ಜನರು ಉಪಜೀವನಕ್ಕಾಗಿ ಗಡಿಯಾಚೆಗಿನ ಅವಕಾಶಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಹಿಂಸಾಚಾರಗಳು ಇಲ್ಲಿನ ಜನರ ಜೀವನ ಮಟ್ಟವನ್ನೇ ಸಂಕಷ್ಟಕ್ಕೆ ನೂಕಿವೆ. ಜತೆಗೆ ಸ್ಥಳಾಂತರಕ್ಕೆ ನಿರಂತರವಾಗಿ ಪ್ರೇರೇಪಿಸುತ್ತಲೇ ಇರುತ್ತದೆ.

ಶಾಂತಿ ಸ್ಥಾಪನೆಗೆ ಇರುವ ಅಡೆತಡೆಗಳು

ಗಡಿಯಲ್ಲಿ ಶಾಂತಿ ನೆಲೆಸುವಂತೆ ಮಾಡುವ ಎಲ್ಲಾ ಪ್ರಯತ್ನಗಳಿಗೂ ಡುರಾಂಡ್ ರೇಖೆಯ ವಿವಾದ ಅಡ್ಡಿಯಾಗುತ್ತಲೇ ಸಾಗಿದೆ. ಇದು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಸಂಕೀರ್ಣಗೊಳಿಸಿದೆ. ಏಕೆಂದರೆ ಎರಡೂ ರಾಷ್ಟ್ರದವರು ತಮ್ಮ ಸಾರ್ವಭೌಮತ್ವವನ್ನು ಔಪಚಾರಿಕವಾಗಿ ಒಪ್ಪಿಕೊಳ್ಳಲು ಅಥವಾ ಪ್ರದೇಶ ಮತ್ತು ಜನರ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಹೀಗಾಗಿ ಹಿಂಸಾಚಾರ ಮರುಕಳಿಸುತ್ತಲೇ ಇದೆ. ಪರಸ್ಪರ ಸಂದೇಹಗಳು ಮತ್ತು ಎಲ್ಲಾ ಹಂತಗಳ ಮಾತುಕತೆಗಳು ವಿಫಲವಾಗಿದ್ದರ ಪರಿಣಾಮ ಗಡಿ ಕುರಿತ ಸಂಘರ್ಷ ಮುಂದುವರಿದಿದೆ. ಇದಕ್ಕೆ ಕಾನೂನಿನ ತೊಡಕು ಮತ್ತು ರಾಜಕೀಯ ಸ್ಪಷ್ಟತೆಯ ಕೊರತೆಯೂ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, ಡುರಾಂಡ್ ರೇಖೆಯು ನಕ್ಷೆಯಲ್ಲಿ ಕೇವಲ ಒಂದು ರೇಖೆಯಷ್ಟೇ ಅಲ್ಲ. ಬದಲಿಗೆ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನವನ್ನು ಭದ್ರತೆ, ಅನನ್ಯತೆ ಮತ್ತು ರಾಜಕೀಯ ವಾಸ್ತವಗಳ ದೃಷ್ಟಿಕೋನದಲ್ಲಿ ದೋಷಪೂರಿತ ರೇಖೆಯಾಗಿದೆ. ವಸಾಹತುಶಾಹಿ ಸೃಷ್ಟಿಸಿದ ಐತಿಹಾಸಿಕ ಸಮಸ್ಯೆ ಮತ್ತು ಆಳವಾಗಿ ಬೇರೂರಿರುವ ಈ ಭಾಗದ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳದಿದ್ದರೆ ಅರ್ಥಪೂರ್ಣ ಪರಿಹಾರ ಅಸಾಧ್ಯ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.