ಕಲಬುರಗಿಯ ನಂದೂರ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್ ಎಸೆಯುತ್ತಿರುವುದು
ಚಿತ್ರ: ತಾಜುದ್ದೀನ್ ಆಜಾದ್
ಮಂಗಳೂರಿನ ಗಂಜಿಮಠದಲ್ಲಿ ಕೆಐಎಡಿಬಿ
ಚಿತ್ರ: ಫಕ್ರುದ್ದೀನ್ ಎಚ್
ಡಾಂಬರ್ ಕಾಣದ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಫೈನ್ ಕಾಂಪ್ ರಸ್ತೆ
ರಾಜ್ಯದಲ್ಲಿ ಎಂಎಸ್‌ಎಂಇ ವಲಯದಲ್ಲಿ ಹಲವು ತೊಂದರೆಗಳಿರುವುದು ಗಮನದಲ್ಲಿದೆ. ದೊಡ್ಡ ಉದ್ಯಮಕ್ಕೆ ಬ್ಯಾಂಕ್‌ಗಳು ಮನೆ ತನಕ ಹೋಗಿ ಸಾಲ ನೀಡುತ್ತವೆ. ಆದರೆ, ಸಣ್ಣ ಕೈಗಾರಿಕೆಗಳಿಗೆ ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದುಶರಣಬಸಪ್ಪ ದರ್ಶನಾಪುರ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ಸಚಿವ
ಶರಣಬಸಪ್ಪಗೌಡ ದರ್ಶನಾಪುರ
ರಾಜ್ಯದಲ್ಲಿ ವಿಶೇಷವಾಗಿ ಟೈರ್–2 ಮತ್ತು ಟೈರ್–3 ನಗರಗಳಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾಲ ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಹಣಕಾಸು ಸಂಸ್ಥೆಗಳ ಕಠಿಣ ಅಡಮಾನ ನಿಯಮಗಳು ಮತ್ತು ಸೀಮಿತ ಆರ್ಥಿಕ ಸಾಕ್ಷರತೆಯಿಂದಾಗಿ ಉದ್ಯಮಗಳು ತೊಂದರೆ ಎದುರಿಸುತ್ತಿವೆ. ಎಂಎಸ್ಎಂಇಗಳ ಅಗತ್ಯಗಳಿಗೆ ಅನುಸಾರ ಸಾಲ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಹಣಕಾಸು ಸಂಸ್ಥೆಗಳು ನೀತಿಗಳನ್ನು ರೂಪಿಸಬೇಕು. ಇದರೊಂದಿಗೆ, ಗ್ರಾಮೀಣ ಪ್ರದೇಶಗಳಲ್ಲಿ ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳಿಗೆ ವಿಧಿಸುತ್ತಿರುವ ಬಡ್ಡಿ ದರ, ನಿರ್ವಹಣಾ ಶುಲ್ಕ ಮತ್ತು ನವೀಕರಣ ಶುಲ್ಕಗಳು ದುಬಾರಿಯಾಗಿದ್ದು, ಇದು ಉದ್ಯಮಿಗಳಿಗೆ ಆರ್ಥಿಕವಾಗಿ ಹೆಚ್ಚಿನ ಹೊರೆ ಉಂಟುಮಾಡುತ್ತಿದೆ. ಈ ಶುಲ್ಕಗಳನ್ನು ಕನಿಷ್ಠ ಮಟ್ಟಕ್ಕೆ ನಿಗದಿಪಡಿಸಿದರೆ ಅನುಕೂಲವಾಗುತ್ತದೆ.ಎಂ.ಜಿ.ರಾಜಗೋಪಾಲ್, ಕಾಸಿಯಾ ಅಧ್ಯಕ್ಷ
ರಾಜಗೋಪಾಲ್
ಭಾರತೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ನಿಯಮ ಮತ್ತು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದ ನಿಯಮಗಳ ಪ್ರಕಾರ, ಕಾರ್ಮಿಕರಿಗೆ ವೈಜ್ಞಾನಿಕವಾದ ಕನಿಷ್ಠ ವೇತನ ನೀಡಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ವೇತನವನ್ನು ಪರಿಷ್ಕರಿಸಬೇಕು. ಈ ಹಿಂದೆ 2017ರಲ್ಲಿ ಪರಿಷ್ಕರಣೆ ಆಗಿತ್ತು. ನಿಯಮದ ಪ್ರಕಾರ, 2022ರಲ್ಲಿ ವೇತನ ಪರಿಷ್ಕರಿಸಬೇಕಾಗಿತ್ತು. ಆದರೆ, ಆಗಿರಲಿಲ್ಲ. ಮೂರು ವರ್ಷ ಮುಂದಕ್ಕೆ ಹೋಗಿದೆ. 2021ರ ಡಿಸೆಂಬರ್‌ನಲ್ಲಿದ್ದ ಗ್ರಾಹಕರ ಬೆಲೆ ಸೂಚ್ಯಂಕದ ಆಧಾರದಲ್ಲಿ ಕನಿಷ್ಠ ವೇತನ ನಿಗದಿ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಆದರೆ, ಸರ್ಕಾರ ಈಗ ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ 2024ರ ಬೆಲೆ ಗ್ರಾಹಕರ ಬೆಲೆ ಸೂಚ್ಯಂಕದ ಆಧಾರದಲ್ಲಿ ಕನಿಷ್ಠ ವೇತನ ನಿಗದಿ ಪಡಿಸಲಾಗಿದೆ. ಅದು ನಮ್ಮ ಬೇಡಿಕೆಗೆ ಸಮನಾಗಿ ಇಲ್ಲ.ಮೀನಾಕ್ಷಿ ಸುಂದರಂ, ಎಐಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ
ಮೀನಾಕ್ಷಿ ಸುಂದರಂ
ರಾಜ್ಯದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಉದ್ಯಮಿಗಳನ್ನು ಗುರುತಿಸಿ ಅವರಿಗೆ ಹಣಕಾಸಿನ ನೆರವು ನೀಡುವಂತಹ ಕ್ರಮ ರೂಪಿಸುವ ಅಗತ್ಯವಿದೆ. ಬಹಳಷ್ಟು ಎಂಎಸ್‌ಎಂಇಗಳಿಗೆ ಆಧುನಿಕ ತಂತ್ರಜ್ಞಾನ ಸೌಲಭ್ಯ ಕಲ್ಪಿಸಬೇಕಿದೆ. ಉದ್ದಿಮೆಗಳ ಸ್ಥಾಪನೆಗೆ ಅನುಮತಿ ಪಡೆಯಲು ಹರಸಾಹಸ ನಡೆಸಬೇಕು. ಪರವಾನಗಿ ಹಾಗೂ ಇತರೆ ಸೌಲಭ್ಯ ನೀಡಲು ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸಬೇಕಿದೆ. ಟೈರ್ 2 ಮತ್ತು 3 ನಗರಗಳಲ್ಲೂ ಎಂಎಸ್‌ಎಂಇ ವಲಯ ಸ್ಥಾಪಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ನೆರವಾಗಲಿದೆ. ಜೊತೆಗೆ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಅಸಮಾನತೆಯ ಅಂತರ ಕಡಿಮೆಯಾಗಲಿದೆ. ಸರ್ಕಾರವು ಎಂಎಸ್‌ಎಂಇ ನೀತಿ ರೂಪಿಸಿದರಷ್ಟೆ ಸಾಲದು. ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲ ಕಲ್ಪಿಸಬೇಕು.ಎಂ.ಜಿ.ಬಾಲಕೃಷ್ಣ, ಅಧ್ಯಕ್ಷ, ಎಫ್‌ಕೆಸಿಸಿಐ
ಎಂ.ಜಿ. ಬಾಲಕೃಷ್ಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.