ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಗೆ ಹಾಲು ಪೊಂಗಲ್‌, ಎಳ್ಳಿನ ಲಡ್ಡು

Last Updated 12 ಜನವರಿ 2021, 19:30 IST
ಅಕ್ಷರ ಗಾತ್ರ

ಎಳ್ಳಿನ ಉಂಡೆ
ಬೇಕಾಗುವ ಸಾಮಗ್ರಿಗಳು:
ಬಿಳಿಎಳ್ಳು – 1 ಕಪ್‌, ಬೆಲ್ಲ – 1/2 ಕಪ್‌, ತುಪ್ಪ – 2 ಚಮಚ, ಏಲಕ್ಕಿ ಪುಡಿ – ಪರಿಮಳಕ್ಕೆ, ಪಿಸ್ತಾ – 10 ರಿಂದ 12 (ಹುರಿದು ಪುಡಿ ಮಾಡಿದ್ದು).

ತಯಾರಿಸುವ ವಿಧಾನ: ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೂ ಎಳ್ಳನ್ನು ಹುರಿದುಕೊಳ್ಳಿ. ಎಳ್ಳು ಹುರಿಯುತ್ತಿರುವಾಗಲೇ ಅದು ಬಣ್ಣ ಬದಲಾಗುವುದು, ಸಿಡಿಯುವುದು ತಿಳಿಯುತ್ತದೆ. ಅದನ್ನು ಬೇರೆ ಪಾತ್ರೆಯಲ್ಲಿ ತೆಗೆದಿರಿಸಿ. ಈಗ ಅದೇ ಪಾತ್ರೆಗೆ ತುಪ್ಪ ಹಾಗೂ ಬೆಲ್ಲ ಸೇರಿಸಿ ಕರಗಿಸಿ. ಅದಕ್ಕೆ ಹುರಿದುಕೊಂಡ ಎಳ್ಳು, ಪಿಸ್ತಾ ಪುಡಿ, ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾಗಿರಬೇಕು. ಅದರ ಮೇಲೆ ಸ್ವಲ್ಪ ತುಪ್ಪ ಹಾಕಿ. ಅದನ್ನು ತಕ್ಷಣಕ್ಕೆ ಬೇಕಾದ ಆಕಾರಕ್ಕೆ ಉಂಡೆ ಕಟ್ಟಿ ತಣ್ಣಗಾದ ಮೇಲೆ ತಿನ್ನಲು ಕೊಡಿ.

ಹಾಲಿನ ಪೊಂಗಲ್‌
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1ಕಪ್‌, ಹೆಸರುಬೇಳೆ – 2 ಟೇಬಲ್ ಚಮಚ, ನೀರು – 4 ಕಪ್‌, ಹಾಲು – 1 1/2ಕಪ್‌, ತುಪ್ಪ – 1 ಚಮಚ, ಗೋಡಂಬಿ

ತಯಾರಿಸುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಿ. ತೊಗರಿಬೇಳೆಯನ್ನು ಕಮ್ಮಗೆ ಸುವಾಸನೆ ಬರುವವರೆಗೂ ಹುರಿದುಕೊಳ್ಳಿ. ಕುಕ್ಕರ್‌ನಲ್ಲಿ ಅಕ್ಕಿ, ತೊಗರಿಬೇಳೆ ಹಾಗೂ ನೀರು ಸೇರಿಸಿ 3 ವಿಶಲ್ ಕೂಗಿಸಿ. ಪ್ರೆಶರ್ ಇಳಿದ ಮೇಲೆ ಮುಚ್ಚಳ ತೆಗೆದು ಎಲ್ಲವನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ. ಪುನಃ ಕುಕ್ಕರ್‌ ಅನ್ನು ಸ್ಟೌವ್ ಮೇಲಿಟ್ಟು ಹಾಲು ಸೇರಿಸಿ ನಿಧಾನಕ್ಕೆ ಕುದಿಸಿ. ಗಂಟಾಗದಂತೆ ನೋಡಿಕೊಳ್ಳಿ. ಮತ್ತೆ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಗ್ಯಾಸ್‌ ಆಫ್ ಮಾಡಿ. ನಂತರ ಸಣ್ಣ ಪಾತ್ರೆಯಲ್ಲಿ ತುಪ್ಪ ಬಿಸಿಮಾಡಿ, ಅದರಲ್ಲಿ ಗೋಡಂಬಿ ಹುರಿದುಕೊಳ್ಳಿ. ಅದನ್ನು ಪೊಂಗಲ್ ಸೇರಿಸಿ ಮಿಶ್ರಣ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT