ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್‌ ಸಂಭ್ರಮ: ಸುರುಳಿ ಬಟಾರ್, ಮಟನ್ ಸುಖಾಪಾಲ್‌

Last Updated 21 ಜುಲೈ 2021, 14:08 IST
ಅಕ್ಷರ ಗಾತ್ರ

ಬಕ್ರೀದ್‌ಗೆ ವರ್ಕಿ ಮೀಠಾ (ಸುರುಳಿ ಬಟಾರ್) ಮತ್ತು ಮಟನ್ ಸುಖಾಪಾಲ್ ತಯಾರಿಸುವ ವಿಧಾನ ಇಲ್ಲಿದೆ...

ವರ್ಕಿ ಮೀಠಾ (ಸುರುಳಿ ಬಟಾರ್)

ಬೇಕಾಗುವ ಸಾಮಗ್ರಿಗಳು:ವರ್ಕಿ – 25 ತುಂಡು, ಹಾಲು – 2 ಲೀಟರ್, ಸಕ್ಕರೆ – ಒಂದೂಕಾಲು ಕೆ.ಜಿ., ಏಲಕ್ಕಿ – 10 ಗ್ರಾಂ, ಗೋಡಂಬಿ – 50 ಗ್ರಾಂ, ಬಾದಾಮಿ – 10 ಗ್ರಾಂ, ಸಿರೆಂಜಿ – 50 ಗ್ರಾಂ, ತುಪ್ಪ – 1/4 ಕೆ.ಜಿ.,ಸಿಹಿ ಖೋವ – 1/2 ಕೆ.ಜಿ.

ಮಾಡುವವಿಧಾನ:ಖೋವವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದು ಪಾತ್ರೆಯಲ್ಲಿಹಾಲು ಕುದಿಸಿ. ಅದಕ್ಕೆ ಸಕ್ಕರೆ ಮತ್ತು ಖೋವ ಮಿಶ್ರಣವನ್ನು ಹಾಕಿ.ಹಾಲು ಕುದಿಯುವಾಗ ವರ್ಕಿ ಹಾಕಿ ಚೆನ್ನಾಗಿ ಕೈ ಆಡಿಸಿ. ಅದಕ್ಕೆಏಲಕ್ಕಿ ಪುಡಿ ಹಾಕಿ ಕೈ ಆಡಿಸುತ್ತಾ ಇರಬೇಕು. ನಂತರ 100 ಗ್ರಾಮ್ ತುಪ್ಪ ಹಾಕಿ ಚೆನ್ನಾಗಿ ಕುದಿಸಿ ಪಾಯಸದ ಹದಕ್ಕೆ ಬಂದಾಗ ಗ್ಯಾಸ್ ಆಫ್ ಮಾಡಿ.

ಮಟನ್ ಸುಖಾಪಾಲ್‌

ಬೇಕಾಗುವ ಸಾಮಗ್ರಿಗಳು:ಮಟನ್ -1 ಕೆ.ಜಿ., ಶುಂಠಿ–ಬೆಳ್ಳುಳ್ಳಿ ಪೇಸ್ಟ್-3 ಟೇಬಲ್ ಚಮಚ, ಮೆಣಸಿನಪುಡಿ - 4 ಟೇಬಲ್ ಚಮಚ, ಟೊಮೆಟೊ - 1/4 ಕೆ.ಜಿ., ಅರಿಸಿನ- 1 1/2 ಟೀ ಚಮಚ, ಎಣ್ಣೆ - 200ಮಿಲಿ ಲೀಟರ್‌.

ತಯಾರಿಸುವ ವಿಧಾನ:ಕುಕ್ಕರ್‌ಗೆ ಮಟನ್ ಹಾಕಿ ಅದಕ್ಕೆ ಉಪ್ಪು, ಅರಿಸಿನ ಸೇರಿಸಿ ಮಧ್ಯಮ ಉರಿಯಲ್ಲಿ 4 ವಿಷಲ್ ತೆಗೆದು ಇಡಿ. ಟೊಮೆಟೊವನ್ನು ಮಿಕ್ಸಿಯಲ್ಲಿ ಅರೆದು ಇಟ್ಟುಕೊಳ್ಳಿ. ದೊಡ್ಡ ಪ್ಯಾನ್‌ಗೆ ಎಣ್ಣೆ ಹಾಕಿ ಬೇಯಿಸಿದ ಮಾಂಸ ಹಾಕಿ ದೂರ ದೂರಕ್ಕೆ ಹರಡಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಹುಡಿ, ಅರಿಸಿನ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅರೆದ ಟೊಮೆಟೊ ಸೇರಿಸಿ ಚೆನ್ನಾಗಿ ತಿರುಗಿಸಿ. ಆಗಾಗ ಎಣ್ಣೆ ಸೇರಿಸುತ್ತಾ ಕೈ ಆಡಿಸುತ್ತಿರಿ.ಗ್ರೇವಿ ಬೇಕಾದಲ್ಲಿ ಗ್ಯಾಸ್ ಆಫ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT