ವಾರಾಂತ್ಯ ಬಂತು ಅಂದರೆ ಸಾಕು ಅನೇಕರು ರುಚಿ ರುಚಿಯಾದ ಮಾಂಸಹಾರ ಸೇವಿಸಬೇಕೆಂದು ಪ್ಲಾನ್ ಮಾಡುತ್ತಾರೆ. ಮಾತ್ರವಲ್ಲ, ಏನಾದರು ವಿಶೇಷವಾಗಿ ತಯಾರಿಸಬೇಕೆಂದು ಕೂಡ ಯೋಚಿಸುತ್ತಾರೆ. ಪ್ರತಿನಿತ್ಯ ಒಂದೇ ತರದ ಟೇಸ್ಟ್ ತಿಂದು ಬೇಸರವಾಗಿದ್ದರೆ, ನಾವಿಂದು ನಿಮಗಾಗಿ ವಿಶೇಷ ನಾಟಿ ಸ್ಟೈಲ್ನಲ್ಲಿ ಕೋಳಿ ಸಾರು ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ ನೋಡಿ.

ನಾಟಿ ಸ್ಟೈಲ್ ಕೋಳಿ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು

1/2 kg ಚಿಕನ್

ಅಗತ್ಯಕ್ಕೆ ತಕ್ಕಷ್ಟು ಚಕ್ಕೆ, ಲವಂಗ

ಶುಂಠಿ, ಬೆಳ್ಳುಳ್ಳಿ

ಅರಶಿಣ ಪುಡಿ

ಉಪ್ಪು

ಹುಣಸೆ ಅಥವಾ ನಿಂಬೆ ಹುಳಿ

ಕೊತ್ತಂಬರಿ ಸೊಪ್ಪು

ಪುದೀನಾ ಸೊಪ್ಪು

ಈರುಳ್ಳಿ

ಟೊಮೆಟೊ

ಅಡುಗೆ ಎಣ್ಣೆ

ಒಣಮೆಣಸು

ಜೀರಿಗೆ

ಕಾಳು ಮೆಣಸು

ಕೊತ್ತಂಬರಿ

ತೆಂಗಿನಕಾಯಿ

ಮಾಡುವ ವಿಧಾನ

ಹಂತ 1: ಮೊದಲನೆಯದಾಗಿ 2 ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಟೊಮೆಟೊ ತೊಳೆದು ಕತ್ತರಿಸಿಕೊಳ್ಳಿ

ಹಂತ 2: ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ತೊಳೆದು ಹೆಚ್ಚಿಕೊಂಡ ಈರುಳ್ಳಿ, ಪುದೀನಾ, ಕೊತ್ತಂಬರಿ ಸೊಪ್ಪು, ಚಕ್ಕೆ, ಲಂವಂಗ, ಟೊಮೆಟೊ, ತೆಂಗಿನಕಾಯಿ ತುರಿ, ಒಂದೆರಡು ಕಾಳು ಮೆಣಸು, ಹಾಗೂ ಅಗತ್ಯಕ್ಕೆ ತಕ್ಕಷ್ಟು ಕೆಂಪು ಮೆಣಸಿನಕಾಯಿ ಸೇರಿಸಿ ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ.

ಹಂತ 3: ಫ್ರೈ ಮಾಡಿಕೊಂಡ ಮಾಸಲೆಗೆ 1 ಹಿಡಿ ಬೆಳ್ಳುಳ್ಳಿ, ತೊಳೆದು ಹೆಚ್ಚಿಕೊಂಡ ಶುಂಠಿ, 1/2 ಚಮಚ ಅರಶಿಣ ಪುಡಿ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಹಂತ 4: ಬಳಿಕ ಒಂದು ಬಾಣಲೆಗೆ 2 ಚಮಚ ಅಡುಗೆ ಎಣ್ಣೆ ಹಾಕಿ ಅದರಲ್ಲಿ ಕಟ್ ಮಾಡಿಕೊಂಡ ಈರುಳ್ಳಿ, ಬೇಕಾದರೇ ಚಕ್ಕೆ– ಲವಂಗ ಒಂದೊಂದು, 1 ಹಸಿರು ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ ಅದಕ್ಕೆ ತೊಳೆದುಕೊಂಡ ಚಿಕನ್, ಅರಶಿಣ ಪುಡಿ, 1 ಚಮಚ ಉಪ್ಪು ಹಾಕಿ ಫ್ರೈ ಮಾಡಿ ನಂತರ 3 ಲೋಟ ನೀರು ಹಾಕಿ ಮುಚ್ಚಿಟ್ಟು 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

ಹಂತ 5 : ಚಿಕನ್ ಬೆಂದ ಬಳಿಕ ರುಬ್ಬಿಕೊಂಡ ಮಸಾಲೆ, ಹುಳಿ ಹಾಕಿ ಮತ್ತೆ 5– 10 ನಿಮಿಷ ಕುದಿಸಿಕೊಳ್ಳಿ.

ಹಂತ 6 : ಚಿಕನ್ ಸಾಂಬರು ಆದ ಮೇಲೆ ತೊಳೆದು ಹೆಚ್ಚಿಕೊಂಡ ಕೊತ್ತಂಬರಿ, ಪುದೀನಾ ಸೊಪ್ಪು ಮೇಲೆ ಉದುರಸಿ. ಈಗ ನಾಟಿ ಸ್ಟೈಲ್ ಚಿಕನ್ ಸಾಂಬರ್ ರೆಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.