ಬೆಂಗಳೂರು: ಗರ್ಭಧಾರಣೆಯ ಸಂಬಂಧ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವ ಐವಿಎಫ್ ತಂತ್ರಜ್ಞಾನದಲ್ಲಿಯೇ ಮತ್ತೊಂದು ಕ್ರಾಂತಿಕಾರಿ ಯಶಸ್ವಿ ತಂತ್ರಜ್ಞಾನವನ್ನು ಇಂಗ್ಲೆಂಡನ್ಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ವರದಿಯಾಗಿದೆ.

‘ಮೈಟೊಕಾಂಡ್ರಿಯಲ್ ಡಿಸೀಸಸ್’ ಎಂಬ ಅನುವಂಶಿಕ ಕಾಯಿಲೆಗಳಿಂದ ಬಳಲುತ್ತಿರುವವರಿಂದ ಆ ಕಾಯಿಲೆಗಳು ಅವರಿಗೆ ಹುಟ್ಟುವ ಮಕ್ಕಳಿಗೆ ಸಂಪೂರ್ಣವಾಗಿ ವರ್ಗಾವಣೆ ಆಗದಿರುವಂತೆ ಮಾಡುವ ತಂತ್ರಜ್ಞಾನವೇ mitochondrial donation ಆಗಿದೆ.

ವಿಶೇಷ ಎಂದರೆ ಈ ತಂತ್ರಜ್ಞಾನ ಯಶಸ್ವಿಯಾಗಬೇಕಾದರೆ ಮೂವರ ಡಿಎನ್ಎ ಬೇಕಾಗುತ್ತದೆ!

ಇಂಗ್ಲೆಂಡ್ನ Newcastle Fertility Centre ಅಭಿವೃದ್ಧಿಪಡಿಸಿದ ಈ ವೈದ್ಯಕೀಯ ವಿಧಾನದ ಬಗ್ಗೆ The New England Journal of Medicine ಸಂಶೋಧನಾ ವರದಿಯನ್ನು ಇತ್ತೀಚೆಗೆ ಪ್ರಕಟಿಸಿದೆ.

ಪ್ರಪಂಚದಲ್ಲಿ ಹುಟ್ಟುವ ತಲಾ 5,000 ಮಕ್ಕಳಲ್ಲಿ ಒಂದು ಮಗುವಿಗೆ ಮೈಟೊಕಾಂಡ್ರಿಯಲ್ ಡಿಸೀಸ್ ಕಂಡು ಬರುತ್ತದೆ. ಇದರಿಂದ ಆ ಮಗುವಿನಲ್ಲಿ ಸಹಜವಾಗಿ ಉಸಿರಾಟ ನಡೆಯುತ್ತಿರುವುದಿಲ್ಲ, ಮೂಳೆ–ಮಾಂಸಖಂಡಗಳು ತೀರಾ ದುರ್ಬಲವಾಗಿರುವುದು, ಹೃದಯ, ಮಿದುಳಿನ ಕಾರ್ಯಕ್ಷಮತೆ ಸರಿಯಾಗಿ ಇಲ್ಲದಿರುವುದು ಕಂಡು ಬರುತ್ತದೆ. ಒಂದೇ ಮಗುವಿನಲ್ಲಿ ಈ ಎಲ್ಲ ಲಕ್ಷಣಗಳು ಕಂಡು ಬರಬಹುದು ಅಥವಾ ಬಿಡಿಬಿಡಿಯಾಗಿರಬಹುದು.

ಇದರಿಂದ ಮುಂದುವರೆದ ಅನೇಕ ದೇಶಗಳಲ್ಲಿ ಮೈಟೊಕಾಂಡ್ರಿಯಲ್ ಡಿಸೀಸಸ್ಗಳಿಂದ ಬಳಲುತ್ತಿರುವ, ಮಕ್ಕಳು ಬೇಕೆನ್ನುವ ದಂಪತಿ ಚಿಂತೆಗೀಡಾಗುತ್ತಿದ್ದರು. ಇದನ್ನು ತಪ್ಪಿಸಲು ಬಂದಿರುವ ಹೊಸ ಆವಿಷ್ಕಾರ ವೈದ್ಯಕೀಯ ಲೋಕದಲ್ಲಿ ಮೈಲುಗಲ್ಲು ಎಂದೇ ಹೇಳಾಗುತ್ತಿದೆ.

mitochondrial donation ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಸಂತಾನೋತ್ಪತ್ತಿಗೆ ಸಿದ್ದವಿರುವ ಮೈಟೊಕಾಂಡ್ರಿಯಲ್ ಡಿಸೀಸ್ ಇರುವ ಮಹಿಳೆಯ ಅಂಡಾಣು ಹಾಗೂ ಆಕೆಯ ಸಂಗಾತಿಯ ವಿರ್ಯಾಣು ಮತ್ತು ದಾನಿ ಮಹಿಳೆಯ ಅಂಡಾಣು ಪಡೆದು ಐವಿಎಫ್ ತಂತ್ರಜ್ಞಾನದಂತೆ ಪ್ರಯೋಗಾಲಯದಲ್ಲಿ ಇಡಲಾಗುತ್ತದೆ. ಎರಡೂ ಪ್ರತ್ಯೇಕ ಭ್ರೂಣ ರಚನೆಯಾದ ನಂತರ ಸೂಕ್ತ ಸಮಯದಲ್ಲಿ ಮೂಲ ತಾಯಿ ಭ್ರೂಣದಲ್ಲಿನ ಅನಾರೋಗ್ಯಕರ ಮೈಟೊಕಾಂಡ್ರಿಯಲ್ ಡಿಎನ್ಎ ಕೋಶವನ್ನು (mt DNA) ಮಾತ್ರ ತೆಗೆದು ದಾನಿ ಮಹಿಳೆಯಿಂದ ರಚನೆಯಾದ ಭ್ರೂಣದಿಂದ ಆರೋಗ್ಯಕರ ಮೈಟೊಕಾಂಡ್ರಿಯಲ್ ಡಿಎನ್ಎ ಕೋಶವನ್ನು ಇರಿಸಲಾಗುತ್ತದೆ. ಇಲ್ಲಿ ಮೂವರ ಡಿಎನ್ಎ ಕೂಡಿಕೊಂಡು ಒಂದು ಆರೋಗ್ಯಕರ ಭ್ರೂಣ ಬೆಳೆದಂತಾಗುತ್ತದೆ. ಹೀಗೆ ಹುಟ್ಟುವ ಮಕ್ಕಳಲ್ಲಿ ತಂದೆ ಅಥವಾ ತಾಯಿಯ ಅನುವಂಶೀಯ ಮೈಟೊಕಾಂಡ್ರಿಯಲ್ ಡಿಸೀಸ್ ಕಂಡು ಬರುವುದಿಲ್ಲ ಎಂದು ಸಂಶೋಧನಾ ವರದಿ ಹೇಳುತ್ತದೆ. ದಾನಿ ಮಹಿಳೆಯಿಂದ ರಚನೆಯಾದ ಭ್ರೂಣದ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.

ಈ ಹೊಸ ತಂತ್ರಜ್ಞಾನದ ಮೂಲಕ Newcastle Fertility Centreನಲ್ಲಿ 4 ಗಂಡು 4 ಹೆಣ್ಣು ಸೇರಿದಂತೆ 8 ಮಕ್ಕಳು ಜನಿಸಿವೆ. ಇದರಲ್ಲಿ ಅವಳಿ ಜನನವಾಗಿದೆ. ಜನಿಸಿರುವ ಮಕ್ಕಳಲ್ಲಿ ಅವರ ಪೋಷಕರಲ್ಲಿ ಕಂಡು ಬಂದಿದ್ದ ಮೈಟೊಕಾಂಡ್ರಿಯಲ್ ಡಿಸೀಸ್ ಕಂಡು ಬಂದಿಲ್ಲ. ನಿರಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪ್ರಯೋಗ ಯಶಸ್ವಿಯಾಗಿದೆ. ಮಕ್ಕಳೆಲ್ಲ ಆರೋಗ್ಯವಾಗಿವೆ ಎಂದು ವೈದ್ಯರು ಹೇಳಿದ್ದಾರೆ.

ಬ್ರಿಟನ್ನಲ್ಲಿ 2015ರಲ್ಲಿ mitochondrial donation ಎಂಬ ವಿಧಾನಕ್ಕೆ ಕಾನೂನು ಮಾನ್ಯತೆಯನ್ನು ನೀಡಲಾಗಿತ್ತು. ಈ ವಿಧಾನಕ್ಕೆ ಮಾನ್ಯತೆ ನೀಡಿರುವ ಪ್ರಥಮ ರಾಷ್ಟ್ರ ಬ್ರಿಟನ್ ಆಗಿದೆ. ಪ್ರಪಂಚದ ಹಲವು ದೇಶಗಳಲ್ಲಿ ಇದಕ್ಕೆ ಇನ್ನೂ ಮಾನ್ಯತೆ ಸಿಕ್ಕಿಲ್ಲವಾದರೂ ಇತ್ತೀಚೆಗೆ ಕೆಲವು ಬಿಗಿ ಕ್ರಮಗಳೊಂದಿಗೆ ಆಸ್ಟ್ರೇಲಿಯಾದಲ್ಲಿ ಮಾನ್ಯತೆ ನೀಡಲಾಗಿದೆ ಎನ್ನಲಾಗಿದೆ. ಭಾರತದಲ್ಲಿ ಇದಕ್ಕೆ ಸದ್ಯ ಅವಕಾಶ ಇಲ್ಲ, ಇಂಡಿಯನ್ ಮೆಡಿಕಲ್ ಕೌನ್ಸಿಲ್ ಈ ಬಗ್ಗೆ ಕಾಯ್ದೆ ರೂಪಿಸಲು ತಜ್ಞರ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುತ್ತಿದೆ ಎಂದು ಹೇಳಲಾಗಿದೆ.

ಮಾನವನ ಶರೀರದ ಜೀವಕೋಶಗಳಲ್ಲಿ ಆಮ್ಲಜನಕ ಪಡೆದು ಶಕ್ತಿ ಉತ್ಪಾದನೆಯಾಗಲು ಮೈಟೊಕಾಂಡ್ರಿಯಾ ಕೋಶಗಳು (organelles) ಕಾರಣವಾಗುತ್ತವೆ. ಇವುಗಳು ಮಾನವನ ಶರೀರದ ಶಕ್ತಿ ಕೇಂದ್ರಗಳು ಎಂದೇ ಕರೆಯಲಾಗುತ್ತದೆ.

ಆಧಾರ– ಪಿಟಿಐ ಹಾಗೂ ಏಜನ್ಸಿಸ್
.ಒಂದು ಹೊಸ ಅಧ್ಯಾಯ, ಹೊಸ ಲಯ... IVF ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ.ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು..ತಾಯ್ತನದ ಸಂಭ್ರಮದಲ್ಲಿರುವ ಭಾವನಾ ರಾಮಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.