ಮಕ್ಕಳ ಆರೋಗ್ಯದ ಮೂಲವೇ ಜೀರ್ಣಶಕ್ತಿ (ಜಠರಾಗ್ನಿ). ಆಯುರ್ವೇದದ ಪ್ರಕಾರ, ಮಗುವಿನ ಬೆಳವಣಿಗೆ, ಬುದ್ಧಿವಿಕಾಸ, ರೋಗ ನಿರೋಧಕ ಶಕ್ತಿ ಎಲ್ಲವೂ ಜೀರ್ಣಶಕ್ತಿಯ ಮೇಲೆಯೇ ಅವಲಂಬಿತವಾಗಿದೆ. ಆದರೆ ಇಂದಿನ ಪೋಷಕರಲ್ಲಿ ಹಲವರಿಗೆ ಒಂದು ಪ್ರಶ್ನೆ ಸಾಮಾನ್ಯ - “ಮಗು ಸರಿಯಾಗಿ ತಿನ್ನುತ್ತಿಲ್ಲ, ಜೀರ್ಣವಾಗುತ್ತಿಲ್ಲ, ಏನು ಮಾಡಬೇಕು?” ಈ ಗೊಂದಲಗಳಿಗೆ ಉಪಯುಕ್ತ ಮಾಹಿತಿ ಇಲ್ಲಿವೆ.

ಮಕ್ಕಳಲ್ಲಿ ಜೀರ್ಣಶಕ್ತಿಯ ಬೆಳವಣಿಗೆಯ ಹಂತಗಳು

⦁ 1–6 ತಿಂಗಳು : ಕೇವಲ ತಾಯಿ ಹಾಲು (Exclusive breastfeeding) – ಇದು ಸುಲಭವಾಗಿ ಜೀರ್ಣವಾಗುವ, ಸಂಪೂರ್ಣ ಆಹಾರ.

⦁ 6 ತಿಂಗಳ ನಂತರ : ಅರ್ಧಘನ (Semisolid) ಆಹಾರವನ್ನು ನಿಧಾನವಾಗಿ ಪರಿಚಯಿಸಬೇಕು.

⦁ 1 ವರ್ಷಕ್ಕೆ : ಮನೆಯ ಆಹಾರಕ್ಕೆ (Family pot) ಮಗು ಹೊಂದಿಕೊಳ್ಳುವ ಹಂತ.

⦁ 1–2 ವರ್ಷ (ಕ್ಷೀರಾನ್ನದ ಅವಸ್ಥೆ) : ಈ ವಯಸ್ಸಿನಲ್ಲಿ ಜಠರಾಗ್ನಿ ಸ್ವಾಭಾವಿಕವಾಗಿ ದುರ್ಬಲವಾಗಿರುತ್ತದೆ. ಈ ಹಂತದಲ್ಲಿ ಹೊಸ ಆಹಾರಗಳ ಪರಿಚಯ, ಹಲ್ಲು ಮೂಡುವಿಕೆ (Teething) ಬಾಯಿಗೆ ಎಲ್ಲವನ್ನೂ ಹಾಕಿಕೊಳ್ಳುವ ಅಭ್ಯಾಸ(Mouthing), ಹೊಸ ಸೋಂಕುಗಳು, ಲಿವರ್ ಎನ್ಜೈಮ್ಗಳ ಅಪೂರ್ಣತೆ ಇವೆಲ್ಲವೂ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತವೆ.

ಮಗುವಿನ ಆಹಾರ ನಡವಳಿಕೆ – ಸಹಜವೇ ಅಥವಾ ಸಮಸ್ಯೆಯೇ? ಗುರುತಿಸುವುದು ಹೇಗೆ

ಮಂದಾಗ್ನಿ (ದುರ್ಬಲ ಜೀರ್ಣಶಕ್ತಿ) ಲಕ್ಷಣಗಳು ಪೋಷಕರು ಗಮನಿಸಬೇಕಾದ ಸೂಚನೆಗಳು:

1 ರಿಂದ 3 ವರ್ಷದೊಳಗಿನ ಮಕ್ಕಳನ್ನು ಟಾಡ್ಲರ್ ಗಳು ಎಂದು ಕರೆಯಲಾಗುತ್ತದೆ. ಈ ವಯಸ್ಸಿನ ಮಕ್ಕಳ ಆಹಾರ ನಡವಳಿಕೆ ದೊಡ್ಡವರಂತಿಲ್ಲ. ಬಹುತೇಕ ಪೋಷಕರು ಇದನ್ನು ಸಮಸ್ಯೆ ಎಂದು ಭಾವಿಸಿದರೂ, ಬಹಳಷ್ಟು ಸಂದರ್ಭಗಳಲ್ಲಿ ಇದು ಸಹಜ ಬೆಳವಣಿಗೆಯ ಭಾಗ.

ಟಾಡ್ಲರ್ ಗಳು:

ಒಂದೇ ಆಹಾರವನ್ನು ಮತ್ತೆಮತ್ತೆ ತಿರಸ್ಕರಿಸಬಹುದು – ಇದು ರುಚಿ ಅರಿವಿನ ಬೆಳವಣಿಗೆಯ ಸೂಚನೆ, ಹಠವಲ್ಲ

ಆಟವಾಡುತ್ತಾ ತಿನ್ನಲು ಇಷ್ಟಪಡುತ್ತಾರೆ – ಆಟ ಚಟುವಟಿಕೆ ಪರಿಸರದ ಮೇಲೆ ಗಮನ ಹೆಚ್ಚು

ತಮ್ಮ ಹಸಿವು–ತೃಪ್ತಿಯ ಸಂಕೇತವನ್ನು ತಾವೇ ಸೂಚಿಸುತ್ತಾರೆ – ಹಸಿವಾದಾಗ ತಿನ್ನುತ್ತಾರೆ, ತೃಪ್ತಿಯಾದಾಗ ನಿಲ್ಲಿಸುತ್ತಾರೆ. ಈ ಹಂತದಲ್ಲಿ ಮಗು ಎಷ್ಟು ತಿನ್ನುತ್ತಿದೆ ಎಂಬುದಕ್ಕಿಂತ, ಎಷ್ಟು ಜೀರ್ಣಿಸಿಕೊಳ್ಳುತ್ತಿದೆ ಎಂಬುದು ಮುಖ್ಯ.

ಯಾವಾಗ ಸಮಸ್ಯೆ ಎಂದು ಪರಿಗಣಿಸಬೇಕು?

⦁ ಆಹಾರಕ್ಕೆ ಆಸಕ್ತಿ ಇಲ್ಲ, ಮಗು ಪ್ರತಿಬಾರಿಯೂ ಆಹಾರ ತಿರಸ್ಕರಿಸುತ್ತಿದ್ದರೆ

⦁ ತಿನ್ನುವ ಪ್ರತಿಸಾರಿ ವಾಂತಿ ಅಥವಾ ಅಜೀರ್ಣವಾಗುತ್ತಿದ್ದರೆ

⦁ ವಯಸ್ಸಿಗೆ ಅನುಗುಣವಾಗಿ ತೂಕ ಹೆಚ್ಚಾಗದೆ ಇದ್ದರೆ

⦁ ಮಗು ಸದಾ ಸುಸ್ತಾಗಿದ್ದರೆ

⦁ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತೆ ಭಾಸ

⦁ ಹೊಟ್ಟೆ ಉಬ್ಬರ

⦁ ಗ್ಯಾಸು

⦁ ಮಲಬದ್ಧತೆ ಅಥವಾ ಅತಿಸಾರ

⦁ ಬಾಯಿ ದುರ್ವಾಸನೆ

⦁ ಪದೇಪದೇ ಶೀತ, ಕೆಮ್ಮು

ಇವು ನಿರಂತರವಾಗಿದ್ದರೆ ವೈದ್ಯರ ಸಲಹೆ ಅಗತ್ಯ.

ಪೋಷಕರಿಗೆ ಮುಖ್ಯ ಸಂದೇಶ:

ಮನೆಮಟ್ಟದ ಸರಳ ತಿದ್ದುಪಡಿಗಳು

⦁ ಸಮಯಕ್ಕೆ ಸರಿಯಾಗಿ ಮಗುವಿನ ಜೀರ್ಣಶಕ್ತಿಗೆ ಅನುಗುಣವಾಗಿ ಪೌಷ್ಠಿಕಾಂಶವುಳ್ಳ ತಾಜಾ ಸಾತ್ವಿಕ ಆಹಾರ ತಿನ್ನಿಸಿ. ಮಕ್ಕಳಿಗೆ ಜಂಕ್ ಫುಡ್ ತಿನ್ನಿಸಬೇಡಿ. ಮೊಬೈಲ್/ಟಿವಿ ನೋಡಿಸುತ್ತಾ ತಿನ್ನಿಸಬೇಡಿ ಆಹಾರ ತಿನ್ನಿಸಿದ ನಂತರ ತಕ್ಷಣ ಮಲಗಿಸಬೇಡಿ.

⦁ ಒಂದು ವರ್ಷದ ಹೊತ್ತಿಗೆ ಮಗುವಿನ ಜೀರ್ಣಶಕ್ತಿ ಮನೆಯ ಆಹಾರಕ್ಕೆ ಹೊಂದಿಕೊಳ್ಳುವ ಹಂತದಲ್ಲಿರುತ್ತದೆ. ಈ ಸಮಯದಲ್ಲಿ ಮನೆಯ ಆಹಾರವನ್ನು(ಉಪ್ಪು ಹುಳಿ ಮತ್ತು ಖಾರ ಕಡಿಮೆ ಪ್ರಮಾಣ) ಮೃದು ರೂಪದಲ್ಲಿ ಪರಿಚಯಿಸುವುದು ಜೀರ್ಣಶಕ್ತಿಯನ್ನು ಬಲಪಡಿಸುತ್ತದೆ.

⦁ ಮನೆಯ ಆಹಾರ

⦁ ಮಗು ಮನೆಯ ಸಂಪ್ರದಾಯಬದ್ಧ ಆಹಾರ ಪದ್ಧತಿ ಹಾಗು ರುಚಿಗೆ (ಷಡ್ರಸಕ್ಕೆ) ಹೊಂದಿಕೊಳ್ಳುತ್ತದೆ

⦁ ಆಹಾರ ಆಯ್ಕೆಮಾಡುವ ಹಠ ತಪ್ಪುತ್ತದೆ

⦁ ಹಸಿವು–ತೃಪ್ತಿಯ ಅರಿವು ಬೆಳೆಯುತ್ತದೆ

⦁ ಕುಟುಂಬದೊಂದಿಗೆ ತಿನ್ನುವ ಸಂಸ್ಕಾರ ಬೆಳೆದು ಮನಸ್ಸಿಗೆ ನೆಮ್ಮದಿ ಹಾಗೆ ಜೀರ್ಣಶಕ್ತಿ ಬಲವಾಗುತ್ತದೆ

ಅಡುಗೆ ಆಟವಾಗಲಿ – ಆಹಾರ ಪ್ರೀತಿಯಾಗಲಿ

ಮಗುವನ್ನು ವಯಸ್ಸಿಗೆ ತಕ್ಕಂತೆ, ಸುರಕ್ಷಿತ ಅಡುಗೆ ಚಟುವಟಿಕೆಗಳಲ್ಲಿ (ತರಕಾರಿ– ತರಕಾರಿಗಳನ್ನು ತೊಳೆಯುವುದು, ಜೋಡಿಸುವುದು, ಮಿಕ್ಸಿಗೆ ಪದಾರ್ಥ ಹಾಕುವುದು) ಇತರೆ ಚಟುವಟಿಗೆ.

ಇದರಿಂದ ಆಗುವ ಪ್ರಯೋಜನಗಳು
⦁ ಆಹಾರದ ಮೇಲೆ ಸಹಜ ಆಸಕ್ತಿ ಬೆಳೆಯುತ್ತದೆ

⦁ ಹಸಿವು ತಾನಾಗಿಯೇ ಬರುತ್ತದೆ

⦁ ಆಹಾರದ ಮೌಲ್ಯ ಅರಿಯಲು ಸಹಾಯವಾಗುತ್ತದೆ

⦁ ತಿನ್ನುಲು ಹಠ ಹಾಗೂ ಆಹಾರ ತಿರಸ್ಕಾರ ಕಡಿಮೆಯಾಗುತ್ತದೆ

⦁ ತಾನೇ ಕೈ ಹಾಕಿ ಮಾಡಿದ ಆಹಾರವನ್ನು ಮಗು ಹೆಚ್ಚು ಸಂತೋಷದಿಂದ ತಿನ್ನುತ್ತದೆ.

(ಲೇಖಕರು: ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು, ಹುಬ್ಬಳ್ಳಿಯ ಆಯುರ್ವೇದ ಕಾಲೇಜು ಆಸ್ಪತ್ರೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.