ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ಮಕ್ಕಳ ಜನನದಲ್ಲಿ ಸಾರ್ವಕಾಲಿಕ ಹೆಚ್ಚಳ, 40ರಲ್ಲಿ ಒಂದು ಅವಳಿ: ಸಂಶೋಧನೆ

Last Updated 12 ಮಾರ್ಚ್ 2021, 10:48 IST
ಅಕ್ಷರ ಗಾತ್ರ

ಪ್ಯಾರಿಸ್: ಅವಳಿ ಮಕ್ಕಳು ಜನಿಸುವುದು ಅತ್ಯಂತ ಅಪರೂಪ. ಕೆಲವು ಸಾವಿರ ಮಕ್ಕಳಲ್ಲಿ ಅಲ್ಲೊಂದು ಇಲ್ಲೊಂದು ಅವಳಿ ಮಕ್ಕಳ ಜನನವಾಗುತ್ತೆ ಎಂಬ ಮಾತಿತ್ತು. ಆದರೆ, ಇದೀಗ ಕೃತಕ ಗರ್ಭಧಾರಣೆ ಹೆಚ್ಚುತ್ತಿರುವುದರಿಂದ ಅವಳಿ ಮಕ್ಕಳ ಜನನವೂ ಗಮನಾರ್ಹ ಮಟ್ಟದಲ್ಲಿ ಹೆಚ್ಚಿದೆ ಎನ್ನುತ್ತಿದೆ ಸಂಶೋಧನೆ.

ಶುಕ್ರವಾರ ಪ್ರಕಟವಾಗಿರುವ ಫ್ರೆಂಚ್ ಸಂಶೋಧನೆಯೊಂದರ ಪ್ರಕಾರ, ಅವಳಿ ಮಕ್ಕಳ ಜನನ ಪ್ರಮಾಣವು ಇತ್ತೀಚಿನ ವರ್ಷಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಪ್ರತಿ 40 ರಲ್ಲಿ ಒಂದು ಅವಳಿ ಕಂಡುಬರುತ್ತಿದೆ. ವೈದ್ಯಕೀಯ ನೆರವು ಪಡೆದು ಸಂತಾನೋತ್ಪತ್ತಿ ಮಾಡುತ್ತಿರುವುದರಿಂದ ಅವಳಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಂಶೋಧನೆ ಹೇಳಿದೆ.

ಪ್ರತಿ ವರ್ಷ 16 ಲಕ್ಷಕ್ಕೂ ಹೆಚ್ಚು ಅವಳಿಗಳು ಜನಿಸುತ್ತಿವೆ ಎಂದು ಸಂಶೋಧಕರು ‘ಹ್ಯೂಮನ್ ರಿಪ್ರೊಡಕ್ಷನ್’ ಎಂಬ ವೈಜ್ಞಾನಿಕ ಜರ್ನಲ್‌ನಲ್ಲಿ ವರದಿ ಪ್ರಕಟಿಸಿದ್ದಾರೆ.

"ಇತ್ತೀಚಿನ ವಿಶ್ವದ ಅವಳಿ ಮಕ್ಕಳ ಜನನದ ಸಂಖ್ಯೆಯು ಇಪ್ಪತ್ತನೇ ಶತಮಾನದ ಮಧ್ಯ ಭಾಗಕ್ಕೆ ಹೋಲಿಸಿದರೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಮತ್ತು ಇದು ಸಾರ್ವಕಾಲಿಕ ಗರಿಷ್ಠವಾಗಿದೆ" ಎಂದು ಈ ಅಧ್ಯಯನಕಾರರಲ್ಲಿ ಒಬ್ಬರಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ (ಬ್ರಿಟನ್) ಪ್ರೊಫೆಸರ್ ಕ್ರಿಸ್ಟಿಯಾನ್ ಮೊಂಡೆನ್ ಹೇಳಿದ್ದಾರೆ.

1970 ರ ದಶಕದಿಂದೀಚೆಗೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನದ (ಎಆರ್‌ಟಿ) ಏರಿಕೆಯು ಒಟ್ಟೊಟ್ಟಿಗೆ ಬಹುಮಕ್ಕಳ ಜನನಗಳ ಏರಿಕೆಗೆ ಕಾರಣವಾಗಿದೆ, ತಾಯಂದಿರು ವಯಸ್ಸಾದಾಗ ಮಕ್ಕಳಿಗೆ ಜನ್ಮ ನೀಡುತ್ತಿರುವುದೂ ಅವಳಿ ಜನನ ಪ್ರಮಾಣ ದರ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ.

ಗರ್ಭನಿರೋಧಕಗಳ ಬಳಕೆಯಲ್ಲಿ ಹೆಚ್ಚಳ, ಮಧ್ಯ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯುವುದು ಮತ್ತು ಒಟ್ಟಾರೆ ಫಲವತ್ತತೆ ಕಡಿಮೆ ಆಗಿರುವುದು ಅವಳಿ ಮಕ್ಕಳ ಜನನಕ್ಕೆ ಕಾರಣವಾಗುತ್ತಿದೆ.

ಸಂಶೋಧಕರು 2010-2015ರವರೆಗೆ 135 ದೇಶಗಳಿಂದ ಅಧ್ಯಯನಕ್ಕಾಗಿ ದತ್ತಾಂಶವನ್ನು ಸಂಗ್ರಹಿಸಿದ್ದು, ಆಫ್ರಿಕಾದಲ್ಲಿ ಅವಳಿ ಜನನದ ಪ್ರಮಾಣ ಹೆಚ್ಚು. ಅವಳಿ ಹೆಚ್ಚಳಕ್ಕೆ ಅವರ ಖಂಡ ಮತ್ತು ವಿಶ್ವದ ಇತರ ಭಾಗಗಳ ನಡುವಿನ "ಆನುವಂಶಿಕ ವ್ಯತ್ಯಾಸಗಳು" ಕಾರಣ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ.

ವಿಶ್ವದ ಬಡ ರಾಷ್ಟ್ರಗಳಲ್ಲಿ ಅವಳಿಗಳ ಜನನ ಸಂಖ್ಯೆ ಹೆಚ್ಚಾಗಿರುವುದು ಕಳವಳಕಾರಿಯಾಗಿದೆ ಎಂದು ಸಂಶೋಧಕರೊಬ್ಬರು ಹೇಳಿದ್ದಾರೆ.

"ಅವಳಿಗಳ ಹೆರಿಗೆಗೆ ಸಂಬಂಧಿಸಿದಂತೆ ಮಕ್ಕಳು ಮತ್ತು ತಾಯಿಯ ಸಾವಿನ ಪ್ರಮಾಣ ಹೆಚ್ಚಿದೆ. ಗರ್ಭಾವಸ್ಥೆಯಲ್ಲಿ ತಾಯಂದಿರು ಮತ್ತು ಮಕ್ಕಳಿಗೆ ತೊಡಕುಗಳು, ಹೆರಿಗೆಯ ಸಮಯದಲ್ಲಿ ಮತ್ತು ನಂತರದಲ್ಲೂ ಇಬ್ಬರಿಗೂ ತೊಡಕುಗಳು ಹೆಚ್ಚಾಗಿವೆ" ಎಂದು ಮೊಂಡೆನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT