ಪ್ರತಿ ಬಾರಿ ಮುಟ್ಟಾದಾಗಲೂ ಏಳೆಂಟು ದಿನ ಸ್ರಾವವಾಗುತ್ತದೆ. 25 ಮೈಕ್ರೋಗ್ರಾಂ ಥೈರಾಯ್ಡ್ ಮಾತ್ರೆ ತೆಗೆದುಕೊಳ್ಳುತ್ತಿದ್ದೆ. ಗರ್ಭಿಣಿಯಾಗಿದ್ದಾಗ ನಿಲ್ಲಿಸಿಬಿಟ್ಟೆ. ಈಗ ಮಗುವಿಗೆ ಮೂರು ವರ್ಷಗಳು. ಸ್ಕ್ಯಾನಿಂಗ್ ಮಾಡಿಸಿದ್ದೇನೆ. ಗರ್ಭಕೋಶದಲ್ಲಿ ಏನೂ ತೊಂದರೆ ಇಲ್ಲವೆಂದು ಹೇಳಿದ್ದಾರೆ. ಈಚೆಗೆ ತುಂಬಾ ದಪ್ಪಗಾಗುತ್ತಿದ್ದೇನೆ. ಸುಸ್ತು, ಆಯಾಸ ಉಂಟಾಗಿದ್ದು, ಗರ್ಭಕೋಶವನ್ನೇ ತೆಗೆಸಿಬಿಡಬೇಕೇ?