ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

Health: ಅಸಹಜ ವರ್ತನೆ; ಎಲ್ಲ ಮಕ್ಕಳೂ ಹೀಗೆನಾ?

ಸೌಜನ್ಯಾ ವಸಿಷ್ಠ
Published : 17 ಅಕ್ಟೋಬರ್ 2025, 23:30 IST
Last Updated : 17 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
‘ಕೌನ್‌ ಬನೇಗಾ ಕರೋಡ್‌ಪತಿ’ ಟಿ.ವಿ. ಶೋನಲ್ಲಿ ನಿರ್ವಾಹಕ ಅಮಿತಾಭ್‌ ಬಚ್ಚನ್‌ ಅವರೊಂದಿಗೆ ಗುಜರಾತ್‌ನ ಬಾಲಕನೊಬ್ಬ ನಡೆದುಕೊಂಡ ರೀತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ದುರಹಂಕಾರದ ನಡೆ, ಪೋಷಕರ ವೈಫಲ್ಯ, ಮಾನಸಿಕ ಅಸ್ವಾಸ್ಥ್ಯ ಎಂಬೆಲ್ಲ ದಿಕ್ಕಿನಲ್ಲಿ ಚರ್ಚೆಗಳು ಸಾಗಿವೆ. ಮಕ್ಕಳ ಅಸಹಜ ವರ್ತನೆ ‘ಮನೆ ಮನೆ ಕಥೆ’ಯಾಗಿರುವ ಈ ಹೊತ್ತಿನಲ್ಲಿ, ಅದರಲ್ಲಿ ಪೋಷಕರ ಪಾತ್ರವೆಷ್ಟು, ಕೈತಪ್ಪಿ ಹೋಗದಂತೆ ನಮ್ಮ ಮಕ್ಕಳನ್ನು ಕಾಪಿಟ್ಟುಕೊಳ್ಳುವುದು ಹೇಗೆ ಎನ್ನುವುದನ್ನು ವಿಶ್ಲೇಷಿಸಿದೆ ಈ ಲೇಖನ
ಬೀಳಲಿ ಬಿಡಿ
ನೈತಿಕ ಮೌಲ್ಯಗಳನ್ನು ಕಲಿಯುತ್ತಾ ಸ್ನೇಹಿತರ ಜೊತೆ ಕಲೆಯುತ್ತಾ ಎದ್ದು ಬಿದ್ದು ಮಣ್ಣಿನಲ್ಲಿ ಆಟವಾಡುತ್ತಾ ಕಾಲ ಕಳೆಯುವುದು ಮಗುವಿನ ಬೆಳವಣಿಗೆಗೆ ಪೂರಕ. ದೇಹಕ್ಕೆ ಸ್ನಾನ ಎಷ್ಟು ಮುಖ್ಯವೋ ಧ್ಯಾನವೂ ಅಷ್ಟೇ ಮುಖ್ಯ. ನಿರಾಕರಣೆ ಹತಾಶೆ ಬೆದರಿಕೆಗೆ ಒಳಗಾಗುವ ಸಂದರ್ಭಗಳನ್ನು ನಿರ್ವಹಿಸುವ ಬಗೆಯನ್ನು ನಾವು ಮಕ್ಕಳಿಗೆ ಹೇಳಿಕೊಡಬೇಕು. ಅದನ್ನೆಲ್ಲ ಕಲಿಸದಿರುವುದರ ಫಲವೇ ಕೆಲವು ಮಕ್ಕಳು ಆತ್ಮಹತ್ಯೆಯಂತಹ ಅತಿರೇಕಕ್ಕೆ ಹೋಗುತ್ತಿರುವುದು. ಕೂತಿದ್ದು ನಿಂತಿದ್ದನ್ನೆಲ್ಲ ದೊಡ್ಡವರೇ ಹುಚ್ಚುಚ್ಚಾಗಿ ವಿಡಿಯೊ ಮಾಡಿ ಹಾಕುತ್ತಿರುವುದನ್ನು ನೋಡುತ್ತಿದ್ದೇವೆ. ಅವರೆಲ್ಲ ಮಾನಸಿಕವಾಗಿ ಸ್ಥಿಮಿತದಲ್ಲಿ ಇರುತ್ತಾರೆ ಎಂಬುದು ಖಾತರಿಯಿಲ್ಲ. ಮೊದಲೆಲ್ಲ ಮನೋವೈದ್ಯರೇ ಇರಲಿಲ್ಲ. ಈಗ ಮನೋವೈದ್ಯರ ಬಳಿ ಎಷ್ಟೊಂದು ರೋಗಿಗಳು ದಾಂಗುಡಿ ಇಡುತ್ತಿದ್ದಾರೆ. ಇದು ಗಮನಾರ್ಹವಾದ ಸಂಗತಿ.
ಹೊಣೆಗಾರಿಕೆ ಕಲಿಸೋಣ
ನನಗೆ ಏನು ಸಿಗಲಿಲ್ಲವೋ ಅದು ನನ್ನ ಮಗನಿಗೆ ಸಿಗಬೇಕು ನಾನು ಏನೆಲ್ಲವನ್ನು ಕಲಿಯಲಿಲ್ಲವೋ ಅದೆಲ್ಲವನ್ನೂ ನನ್ನ ಮಗಳು ಕಲಿತುಬಿಡಬೇಕು ನನಗೆ ಯಾವ ಶಾಲೆಯಲ್ಲಿ ಓದಲಾಗಲಿಲ್ಲವೋ ಅಲ್ಲಿ ನನ್ನ ಮಕ್ಕಳು ಓದಲೇಬೇಕು ಎನ್ನುವ ಹಪಹಪಿ ಹೆಚ್ಚಿನ ಪೋಷಕರದು. ಹಾಗಾಗಿ ಮಕ್ಕಳು ಓದಿದರೆ ಸಾಕು ಬೇರೇನೂ ಮಾಡುವುದು ಬೇಡ ಎಂದುಕೊಂಡು ಅವರಿಗೆ ಹೊಣೆಗಾರಿಕೆ ಕಲಿಸುವುದನ್ನೇ ಮರೆಯುತ್ತಾರೆ. ತಮ್ಮ ಕೋಣೆಯನ್ನು ಸ್ವಚ್ಛ ಮಾಡಿಕೊಳ್ಳುವುದು ಊಟದ ಡಬ್ಬಿ ತೊಳೆದಿಡುವುದು ಅಡುಗೆಯಲ್ಲಿ ತಂದೆ– ತಾಯಿಗೆ ಸಹಾಯ ಮಾಡುವುದು ಎಲ್ಲವೂ ಮುಖ್ಯ. ಯಾವಾಗ ನಾವು ಜಗಳ ಗಲಾಟೆ ಮಾಡುತ್ತೇವೋ ಕೋಪ ತೋರಿಸುತ್ತೇವೋ ಮಕ್ಕಳೂ ಅದನ್ನೇ ಕಲಿಯುತ್ತಾ ಹೋಗುತ್ತಾರೆ. ಅದರ ಬದಲು ಹಿರಿಯರಲ್ಲಿ ಸಹನೆ ಶಾಂತಿ ಪ್ರೀತಿ ಮನೆಮಾಡಿದ್ದರೆ ಅದು ಮಕ್ಕಳಲ್ಲೂ ಪ್ರತಿಫಲಿಸದೆ ಇರುವುದೇ?
ಲೇಖಕಿ: ಆಪ್ತ ಸಮಾಲೋಚಕಿ, ವೆಲ್‌ನೆಸ್‌ ಕೋಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT