ತಂಪಾದ ವಾತಾವರಣವು ರಕ್ತನಾಳಗಳನ್ನು ಸಂಕುಚಿತಗೊಳಿಸಿ, ರಕ್ತದ ಒತ್ತಡ ಹೆಚ್ಚಿಸುತ್ತದೆ. ದೇಹವು ಅಂಗಗಳನ್ನು ಬೆಚ್ಚಗೆ ಇರಿಸಲು ಚರ್ಮದ ಸಮೀಪವಿರುವ ರಕ್ತನಾಳಗಳನ್ನು ಕುಗ್ಗಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹೃದಯಾಘಾತಗಳ ಪ್ರಮಾಣ ಹೆಚ್ಚಾಗುತ್ತದೆ.
.ಲಘು ಹೃದಯಾಘಾತ: ಗಂಭೀರವಾಗುವ ಮೊದಲೇ ಎಚ್ಚೆತ್ತುಕೊಳ್ಳಿ.
ಹೃದಯ ರೋಗಿಗಳಿಗೆ ಹೆಚ್ಚಿನ ಅಪಾಯ:

ಚಳಿಗಾಲದಲ್ಲಿ ಕರೋನರಿ ಅಪಧಮನಿ ಕಾಯಿಲೆ ಇರುವವರಿಗೆ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾಗುತ್ತದೆ. ದೈಹಿಕ ಒತ್ತಡ, ಶೀತದಿಂದಾಗಿ ಇದು ಹರಿದು ಹೋಗಬಹುದು ಅಥವಾ ಛಿದ್ರವಾಗಬಹುದು. ಎದೆ ನೋವು ಇರುವವರಲ್ಲಿ ಈ ರೋಗಲಕ್ಷಣಗಳು ತೀವ್ರಗೊಳ್ಳಬಹುದು. ಆದ್ದರಿಂದ ಹೃದಯ ಸಮಸ್ಯೆ ಇರುವವರು ಚಳಿಗಾಲದಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ.

ಋತುವಿನ ಇತರ ಸವಾಲುಗಳು:

ಚಳಿಗಾಲದಲ್ಲಿ ನಿದ್ರೆ, ಆಹಾರ ಮತ್ತು ವ್ಯಾಯಾಮದ ಅಭ್ಯಾಸಗಳಲ್ಲಿನ ಬದಲಾವಣೆಗಳು ಹೃದಯದ ಮೇಲೆ ಪರಿಣಾಮ ಬೀರಬಹುದು. ಅತಿಯಾದ ಆಹಾರ ಸೇವನೆ, ಮದ್ಯಪಾನ ಮತ್ತು ಭಾವನಾತ್ಮಕ ಒತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಒಳಾಂಗಣದಲ್ಲಿ ಕಿಕ್ಕಿರಿದ ಸಭೆಗಳು ಶ್ವಾಸಕೋಶ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತವೆ. ಇದು ಹೃದಯ ಕಾಯಿಲೆಯನ್ನು ತೀವ್ರಗೊಳಿಸಬಹುದು.

ಹೈಪೋಥರ್ಮಿಯಾದ ಗಂಭೀರ ಪರಿಣಾಮ:

ಹೈಪೋಥರ್ಮಿಯಾದ ಎಂದರೆ ದೇಹದ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ಗಿಂತ ಕೆಳಗೆ ಇಳಿಯುವುದು. ಇದು ಆಂತರಿಕ ದೇಹದ ತಾಪಮಾನವನ್ನು ಬೆಚ್ಚಗಿಡಲು, ದೇಹವು ಸಾಕಷ್ಟು ಶಕ್ತಿ ಉತ್ಪಾದಿಸಲು ಸಾಧ್ಯವಾಗದೆ ಇದ್ದಾಗ ಸಂಭವಿಸುತ್ತದೆ. ಹೈಪೋಥರ್ಮಿಯಾ ಹೃದಯ ಸ್ನಾಯುವಿಗೆ ಹಾನಿ ಮಾಡಬಹುದು ಮತ್ತು ಆರೋಗ್ಯಕರ ಹೃದಯದ ಲಯವನ್ನು ಅಸ್ತವ್ಯಸ್ತಗೊಳಿಸಬಹುದು.

ರಕ್ಷಣೆಯ ಮಾರ್ಗಗಳು:

ಚಳಿಗಾಲದಲ್ಲಿ ಹೃದಯವನ್ನು ರಕ್ಷಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.

ಬಹುಸ್ತರದ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ, ವಿಶೇಷವಾಗಿ ಟೋಪಿ, ಕೈಗವಸುಗಳು ಮತ್ತು ದಪ್ಪ ಸಾಕ್ಸ್ ಧರಿಸುವುದು ಅತ್ಯಗತ್ಯ.

ಹೊರಾಂಗಣದಲ್ಲಿ ದೀರ್ಘಕಾಲ ಇರುವುದನ್ನು ತಪ್ಪಿಸಿ.

ಮದ್ಯಪಾನವನ್ನು ತಪ್ಪಿಸಿ, ಏಕೆಂದರೆ ಅದು ವಾಸ್ತವವಕ್ಕಿಂತ ನೀವು ಹೆಚ್ಚು ಬೆಚ್ಚಗಿದ್ದೀರಾ ಎಂಬ ಭ್ರಮೆ ಸೃಷ್ಟಿಸಬಹುದು.

ನಿಯಮಿತ ವ್ಯಾಯಾಮವನ್ನು ಮುಂದುವರಿಸಿ, ಆದರೆ ಚಳಿಯಲ್ಲಿ ಮಧ್ಯಾಹ್ನದ ಸಮಯದಲ್ಲಿ ವ್ಯಾಯಾಮ ಮಾಡುವುದು ಉತ್ತಮ.

ಹೃದಯಕ್ಕೆ ಬೇಕಾದ ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸಿ. ಉಪ್ಪು, ಕೊಬ್ಬು ಮತ್ತು ಸಕ್ಕರೆ ಹೆಚ್ಚಿರುವ ಆಹಾರವನ್ನು ಮಿತಗೊಳಿಸಿ. ಆಗಾಗ್ಗೆ ಕೈ ತೊಳೆಯುವುದು ಸೋಂಕಿನಿಂದ ರಕ್ಷಿಸುತ್ತದೆ.

ಎದೆ ನೋವು, ಉಸಿರಾಟದ ತೊಂದರೆ, ಹೆಚ್ಚಿನ ಆಯಾಸ, ತೋಳು, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯಲ್ಲಿ ನೋವು, ತಲೆ ತಿರುಗುವಿಕೆ ಅಥವಾ ವಾಕರಿಕೆ ಕಾಣಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ರಕ್ತದೊತ್ತಡ, ಕೊಲೆಸ್ಟರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ. ಮೊದಲೇ ಹೃದಯ ಕಾಯಿಲೆ ಇದ್ದರೆ, ನಿಮ್ಮ ಚಿಕಿತ್ಸಾ ಯೋಜನೆಯನ್ನು ನಿಷ್ಠೆಯಿಂದ ಅನುಸರಿಸಿ ಮತ್ತು ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಿ.

(ಡಾ. ಸಂಜಯ್ ಭಟ್, ಹಿರಿಯ ಸಲಹೆಗಾರ - ಕೈಮೆದುರುವ ಹೃದಯವಿಜ್ಞಾನ - ಅಸ್ತರ್ ಸಿಎಂಐ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.