ಸಾಗಾಟ ಮಾರಾಟ ಬಳಕೆದಾರರ ಮೇಲೆ ನಿಗಾ
ಮೊದಲು ಮಾದಕ ವಸ್ತುಗಳ ಸಾಗಾಟ ತಡೆಯುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಮ್ಮ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಗಡಿಭಾಗವಾಗಿರುವ ಕಾರಣ ಹೆಚ್ಚು ನಿಗಾ ಇಟ್ಟಿದ್ದೇವೆ. ಕೆಲ ದಿನಗಳ ಹಿಂದೆ ನಮ್ಮ ಪೊಲೀಸರು ಹರಿಯಾಣ ರಾಜಸ್ಥಾನದ ಎಂಟು ಮಂದಿಯನ್ನು ಆಂಧ್ರದ ಮದನಪಲ್ಲಿಯ ವ್ಯಕ್ತಿಯನ್ನು ಬಂಧಿಸಿದೆ. ಮಾರಾಟಗಾರರನ್ನು ಪತ್ತೆ ಹಚ್ಚುವುದಲ್ಲದೇ ಮಾದಕ ವಸ್ತು ಖರೀದಿಸಿ ಬಳಕೆ ಮಾಡುವವರ ಮೇಲೂ ನಿಗಾ ಇಡಲಾಗಿದೆ. ಈಚೆಗೆ ವೇಮಗಲ್ ಮಾಲೂರಿನಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದೇವೆ. ಕೈಗಾರಿಕಾ ಪ್ರದೇಶದ ಮೇಲೂ ನಿಗಾ ಇಟ್ಟಿದ್ದೇವೆ. ಮತ್ತಷ್ಟು ಶೋಧ ಕಾರ್ಯ ನಡೆಸುತ್ತೇವೆ ನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ