ಮೈಸೂರು: ‘ಮುಡಾ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ಚಿಟ್ ಕೊಡುವುದು ನಿಶ್ಚಿತ. ಪಾರದರ್ಶಕವಾಗಿ ತನಿಖೆ ನಡೆದಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದರು.

ಸೋಮವಾರ ಹೈಕೋರ್ಟ್ನಲ್ಲಿ ಮುಡಾ ಪ್ರಕರಣದ ಅರ್ಜಿ ವಿಚಾರಣೆ ನಡೆಯಲಿರುವ ಕುರಿತು ಇಲ್ಲಿ ಭಾನುವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಅಧಿಕಾರಿಗಳಿಗೆ ಬಡ್ತಿ ಬೇಕು. ಹೀಗಾಗಿ ಮುಖ್ಯಮಂತ್ರಿ ಪರವಾಗಿಯೇ ವರದಿ ಕೊಡುತ್ತಾರೆ. ಎಲ್ಲಿಂದಲೋ ಬಂದ ಇ.ಡಿ. ಅಧಿಕಾರಿಗಳು ಇಲ್ಲಿನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಆದರೆ ಇಲ್ಲೇ ಇರುವ ಲೋಕಾಯುಕ್ತ ಸುಮ್ಮನೆ ಕುಳಿತಿದೆ. ಪ್ರಕರಣ ಸಿಬಿಐಗೆ ವಹಿಸುವಂತೆ ಬಿಜೆಪಿ ಹೋರಾಟ ಮಾಡಿದ್ದು, ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

‘ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಅರಮನೆ ಆಸ್ತಿ ಮೇಲೆ ಕಣ್ಣು ಹಾಕುತ್ತಾರೆ. ಸರ್ಕಾರದ ಸ್ವಾಧೀನಕ್ಕೆ ಯತ್ನ ಮಾಡುತ್ತಾರೆ. ಇದು ಪಕ್ಕಾ ಟಾರ್ಗೆಟ್ ರಾಜಕಾರಣ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.