ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಸೋಮವಾರ ಮತ್ತೆ ಜೀವ ಬೆದರಿಕೆ ಸಂದೇಶ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಕಾರನ್ನು ಸ್ಫೋಟಿಸುವುದಾಗಿಯೂ ಹಾಗೂ ಅವರ ಮನೆಗೆ ನುಗ್ಗಿ ಥಳಿಸುವುದಾಗಿಯೂ ಮುಂಬೈ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಸಂದೇಶ ಬಂದಿತ್ತು. ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ಟ್ರಾಫಿಕ್ ಪೊಲೀಸರಿಗೆ ಸಲ್ಮಾನ್ ಖಾನ್ ಜೀವಕ್ಕೆ ಅಪಾಯ ಮಾಡುವ ಕುರಿತಾದ ಸಂದೇಶಗಳು ಬಂದಿದ್ದವು.

ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಸಲ್ಮಾನ್ ಖಾನ್ಗೆ ಹಲವು ಬಾರಿ ಜೀವ ಬೆದರಿಕೆ ಕರೆಗಳು ಬಂದಿವೆ. 2024ರ ಏಪ್ರಿಲ್ನಲ್ಲಿ ಎರಡು ಬೈಕ್ಗಳಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಮುಂಜಾನೆ 5 ಗಂಟೆ ವೇಳೆಗೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಎದುರು ನಾಲ್ಕು ಸುತ್ತು ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದರು. ಅದಾದ ಬಳಿಕ ಸಲ್ಮಾನ್ ಮನೆ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈದ್ ಉಲ್ ಫಿತ್ರ್ ಹಬ್ಬದಂದು ಸಂಪ್ರದಾಯದಂತೆ ತಮ್ಮ ಮುಂಬೈನ ಬಾಂದ್ರಾದ ಗ್ಯಾಲಾಕ್ಸಿ ಮನೆಯಿಂದ ಹೊರಗೆ ಬಂದು ಬುಲೆಟ್ ಪ್ರೂಫ್ ಗಾಜಿನ ಬಾಗಿಲೊಳಗೆ ನಿಂತು ಅಭಿಮಾನಿಗಳಿಗೆ ಕೈ ಬೀಸಿ ಶುಭಾಶಯ ತಿಳಿಸಿದ್ದರು.
.ಬುಲೆಟ್ ಪ್ರೂಫ್ ಗಾಜಿನ ಬಾಗಿಲೊಳಗೆ ನಿಂತು ಅಭಿಮಾನಿಗಳನ್ನು ನೋಡಿದ ಸಲ್ಮಾನ್ ಖಾನ್.ಬುಲೆಟ್ ಪ್ರೂಫ್ ಎಸ್ಯುವಿ ಕಾರು ಖರೀದಿಸಿದ ನಟ ಸಲ್ಮಾನ್ ಖಾನ್.ಜೀವ ಬೆದರಿಕೆ | ನಟ ಸಲ್ಮಾನ್ ಖಾನ್ ನಿವಾಸಕ್ಕೆ ಬುಲೆಟ್ ಪ್ರೂಫ್ ಗ್ಲಾಸ್!.ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ಸದ್ದು: ತನಿಖೆ ಚುರುಕುಗೊಳಿಸಿದ ಪೊಲೀಸರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.