‘ರಾಹುಲ್ರಿಂದ ಇನ್ನಷ್ಟು ಮಾಹಿತಿ ಸ್ಫೋಟ’
ಮತಕಳವಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಒಂದು ತಿಂಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಬಹಿರಂಗಪಡಿಸಲಿದ್ದಾರೆ. ಅದು ‘ಹೈಡ್ರೋಜನ್ ಬಾಂಬ್’ ‘ಮಿನಿ ಹೈಡ್ರೋಜನ್ ಬಾಂಬ್’ ಮತ್ತು ‘ಪ್ಲುಟೋನಿಯಂ ಬಾಂಬ್’ಗಳ ಸ್ಫೋಟದಂತಿರುತ್ತವೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಎನ್ಡಿಎ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ’ ಎಂದ ಅವರು ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆಯಾಗಲಿದೆ ಎಂದು ಪ್ರತಿಪಾದನೆ ಮಾಡಿದರು. ‘ಮತಕಳ್ಳತನ ಮತ್ತು ಮತದಾರರ ಪಟ್ಟಿಯಲ್ಲಿನ ಅಕ್ರಮಗಳು ಪ್ರಜಾಪ್ರಭುತ್ವದ ಅಡಿಪಾಯವನ್ನು ಮತ್ತು ಸಾರ್ವಜನಿಕರ ನಂಬಿಕೆಗಳನ್ನು ಅಲುಗಾಡಿಸಿವೆ. ಈ ಕೃತ್ಯವನ್ನು ಧೈರ್ಯದಿಂದ ಬಹಿರಂಗಪಡಿಸಿ ಹೋರಾಡಿದ್ದಕ್ಕಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಸಿಡಬ್ಲ್ಯುಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು’ ಎಂದು ಅವರು ವಿವರಿಸಿದರು.