ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ವರದಿಯಲ್ಲಿ ಕುರುಬ ಮತ್ತು ಉಪಜಾತಿಗಳು, ಸವಿತ, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಗಳನ್ನು ‘ಅತ್ಯಂತ ಹಿಂದುಳಿದ’ ಎಂದು ಮರುವರ್ಗೀಕರಣ ಮಾಡಿ, ಪ್ರವರ್ಗ 1ಬಿ ಎಂದು ಗುರುತಿಸಿದೆ.

ಈ ಪ್ರವರ್ಗದಲ್ಲಿ ಒಟ್ಟು 387 ಜಾತಿಗಳನ್ನು ಆಯೋಗವು ಪಟ್ಟಿ ಮಾಡಿದೆ. ಈ ಹಿಂದೆ ಕುರುಬ ಮತ್ತು ಉಪ ಜಾತಿಗಳು ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಗಳು ‘ಪ್ರವರ್ಗ 2ಎ’ ಪಟ್ಟಿಯಲ್ಲಿ ಇದ್ದವು. ಆಯೋಗವು ತನ್ನ ವರದಿಯಲ್ಲಿ ಪ್ರತಿಯೊಂದು ಜಾತಿ, ಸಮುದಾಯಗಳ ಜನಸಂಖ್ಯೆ ಮತ್ತು ಪ್ರವರ್ಗವಾರು ವರ್ಗೀಕರಣ ಪಟ್ಟಿಯನ್ನು ನೀಡಿದೆ.

ಜಾತಿ, ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ವಿವಿಧ ಮಾನದಂಡಗಳನ್ನು ಆಯೋಗ ಬಳಸಿದೆ. ಸಾಮಾಜಿಕ ಸೂಚಕಗಳು (ಸಾಮಾಜಿಕವಾಗಿ ಹಿಂದುಳಿದವರು), ಸಾಂಪ್ರದಾಯಿಕ ಕಸುಬುಗಳು, ವಾಸಸ್ಥಳ, ವಸತಿಸೌಕರ್ಯಗಳು, ಅಸಂಘಟಿತ ವಲಯಗಳಲ್ಲಿ ಕೆಲಸದಲ್ಲಿ ಭಾಗವಹಿಸುವಿಕೆ, ವಿವಾಹ ಸಮಯದ ವಯಸ್ಸು, ಅಡುಗೆಗೆ ಬಳಸುವ ಇಂಧನ, ಶೌಚಾಲಯ, ಬೆಳಕಿನ ವ್ಯವಸ್ಥೆ, ಅಲೆಮಾರಿ, ಅರೆ ಅಲೆಮಾರಿ ಜನಸಂಖ್ಯೆ ಈ ಎಲ್ಲವುಗಳಿಗೆ ಒಟ್ಟು 100 ಅಂಕ ನಿಗದಿ ಮಾಡಲಾಗಿದೆ.

ಶೈಕ್ಷಣಿಕ ಸೂಚಕಗಳು (ಸಾಕ್ಷರತಾ ಪ್ರಮಾಣ, ಶಿಕ್ಷಣ ಸಂಸ್ಥೆ, ಶಾಲೆ ಬಿಟ್ಟಿರುವ ಪ್ರಮಾಣ, ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ, ಸಾಮಾನ್ಯ ಶಿಕ್ಷಣ) ಜೀವನೋಪಾಯ (ಭೂರಹಿತ ಕುಟುಂಬಗಳು, ಜೀವನೋಪಾಯ, ಸರ್ಕಾರಿ ಉದ್ಯೋಗ, ಸಂಘಟಿತ ಖಾಸಗಿ ವಲಯ ಈ ಎಲ್ಲವುಗಳಿಗೆ ಒಟ್ಟು 100, ಹೀಗೆ ಒಟ್ಟು 200 ಅಂಕಗಳಿಗೆ ಮೌಲ್ಯಾಂಕ ಹಂಚಿಕೆ ಮಾಡಲಾಗಿದೆ.

200 ಅಂಕಗಳಲ್ಲಿ 90 ಅಂಕವನ್ನು ಕಟ್ ಆಫ್ ಪಾಯಿಂಟ್ ಎಂದು ತೆಗೆದುಕೊಂಡು, 90 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಜಾತಿಗಳು ಅತ್ಯಂತ ಹಿಂದುಳಿದ (ಪ್ರವರ್ಗ 1), 50ರಿಂದ 89 ಅಂಕ ಗಳಿಸಿದ ಜಾತಿಗಳು ಅತಿ ಹಿಂದುಳಿದ (ಪ್ರವರ್ಗ 2), 20ರಿಂದ 49 ಅಂಕ ಪಡೆದ ಜಾತಿಗಳು ಹಿಂದುಳಿದ (ಪ್ರವರ್ಗ 3), 20ಕ್ಕಿಂತ ಕಡಿಮೆ ಅಂಕ ಪಡೆದ ಜಾತಿಗಳು ಸಾಮಾನ್ಯ ಎಂದು ವರ್ಗೀಕರಣ ಮಾಡಲಾಗಿದೆ.

ಆ ಬಳಿಕ ಪ್ರತಿ ಪ್ರವರ್ಗಗಳಲ್ಲಿ ‘ಎ’ ಮತ್ತು ‘ಬಿ’ ಎಂದು ಉಪ ವರ್ಗೀಕರಣ ಮಾಡಲಾಗಿದೆ. 125 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಜಾತಿಗಳು (ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳು ಸೇರಿದಂತೆ) ಪ್ರವರ್ಗ–1ಎ, 90ರಿಂದ 124 ಅಂಕಗಳ ವ್ಯಾಪ್ತಿಯಲ್ಲಿ ಅಂಕಗಳನ್ನು ಪಡೆದ ಜಾತಿಗಳು ಹಾಗೂ ಸರ್ಕಾರಿ ಆದೇಶದ ಪ್ರವರ್ಗ–1ರಲ್ಲಿ ‘ಅತ್ಯಂತ ಹಿಂದುಳಿದ’ ಎಂದು ಗುರುತಿಸಿದ ಜಾತಿಗಳು ಪ್ರವರ್ಗ–1ಬಿ ಎಂದು ವರ್ಗೀಕರಿಸಲಾಗಿದೆ.

50ರಿಂದ 89ರ ವ್ಯಾಪ್ತಿಯಲ್ಲಿ ಅಂಕಗಳನ್ನು ಪಡೆದ ಜಾತಿಗಳು ಮತ್ತು 20ರಿಂದ 49 ಅಂಕಗಳನ್ನು ಪಡೆದಿದ್ದು ಸರ್ಕಾರಿ ಆದೇಶದ ಪ್ರವರ್ಗ–2ಎಯಲ್ಲಿ ಈಗಾಗಲೇ ‘ಅತಿ ಹಿಂದುಳಿದ’ ಎಂದು ಗುರುತಿಸಿದ ಜಾತಿಗಳನ್ನು ಪ್ರವರ್ಗ–2ಎಯಲ್ಲೇ ಉಳಿಸಲಾಗಿದೆ. ಮುಸ್ಲಿಂ ಮತ್ತು ಉಪ ಜಾತಿಗಳನ್ನು ಪ್ರವರ್ಗ–2ಬಿಯಲ್ಲಿ ಪಟ್ಟಿ ಮಾಡಲಾಗಿದೆ.

ಇನ್ನು 20ರಿಂದ 49 ಅಂಕಗಳನ್ನು ಪಡೆದಿದ್ದು ಸರ್ಕಾರಿ ಆದೇಶದ ಪ್ರವರ್ಗ–3ಎಯಲ್ಲಿ ಪಟ್ಟಿ ಮಾಡಿರುವ ಜಾತಿಗಳನ್ನು ಪ್ರವರ್ಗ–3ಎಯಲ್ಲಿ, 20ರಿಂದ 49 ಅಂಕಗಳನ್ನು ಪಡೆದಿದ್ದು, ಸರ್ಕಾರಿ ಆದೇಶ ಪ್ರವರ್ಗ–3ಬಿಯಲ್ಲಿ ಪಟ್ಟಿ ಮಾಡಿರುವ ಜಾತಿಗಳನ್ನು ಪ್ರವರ್ಗ–3ಬಿಯಲ್ಲಿಯೇ ಉಳಿಸಿ ಆಯೋಗವು ಮರುವರ್ಗೀಕರಣ ಮಾಡಿದೆ.

ಇದೇ ಕಾರಣಕ್ಕೆ ಕುರುಬ ಮತ್ತು ಇತರ ಕೆಲ ಸಮುದಾಯಗಳನ್ನು ‘2ಎ’ಯಿಂದ ತೆಗೆದು ಹೊಸತಾಗಿ ಮಾಡಿದ ‘ಅತ್ಯಂತ ಹಿಂದುಳಿದ’ ಪ್ರವರ್ಗ 1 ‘ಬಿ’ಗೆ ಸೇರಿಸಲಾಗಿದೆ. ಹೀಗೆ ವಿವಿಧ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯನ್ನು ಗುರುತಿಸಿ ಮರು ವರ್ಗೀಕರಣ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.