ಬೆಂಗಳೂರು: ಭಾರತ ಕಮ್ಯೂನಿಸ್ಟ್ ಪಕ್ಷದ (ಸಿಪಿಎಂ) ಕರ್ನಾಟಕ ರಾಜ್ಯ ಸಮಿತಿಯ ಮಾಜಿ ಕಾರ್ಯದರ್ಶಿ, ಕೃಷಿಕೂಲಿಕಾರ ಸಂಘದ ಮಾಜಿ ರಾಜ್ಯ ಅಧ್ಯಕ್ಷರೂ ಆಗಿದ್ದ ನಿತ್ಯಾನಂದಸ್ವಾಮಿ (77) ಅವರು ಸೋಮವಾರ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ನಿತ್ಯಾನಂದ ಸ್ವಾಮಿ ಬೆಂಗಳೂರಿನ ಮದರ್ ತೆರೆಸಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿತ್ಯಾನಂದಸ್ವಾಮಿ ನಿಧನಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ರಾಜ್ಯ ಸಮಿತಿ ವಿಷಾದ ವ್ಯಕ್ತಪಡಿಸಿದೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಪಕ್ಷದ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ಗಂಟೆವರೆಗೆ ನಿತ್ಯಾನಂದಸ್ವಾಮಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ನಿತ್ಯಾನಂದಸ್ವಾಮಿ ಅವರು 1949ರ ಆಗಸ್ಟ್ 25ರಂದು ಉಡುಪಿಯ ಕಲ್ಯಾಣಪುರದಲ್ಲಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ್ದರು. ಕ್ರಿಶ್ಚಿಯನ್ ಪಂಥದ ಅನುಸಾರವಾಗಿಯೇ ಆರಂಭಿಕ ಮತ್ತು ಉನ್ನತ ಶಿಕ್ಷಣ ಪಡೆದಿದ್ದರು.

1980ರಲ್ಲಿ ಸರ್ಕಾರದ ತೆರಿಗೆ ಹೇರಿಕೆ ವಿರುದ್ಧ ಮಲಪ್ರಭಾ ಬಳಕೆದಾರ ರೈತರು ನಡೆಸಿದ ಐತಿಹಾಸಿಕ ನರಗುಂದ, ನವಲಗುಂದದ ರೈತ ಚಳವಳಿ ಪ್ರಭಾವಕ್ಕೆ ಒಳಗಾದ ಅವರು ಅಂತಿಮವಾಗಿ ತನ್ನ ಧರ್ಮ ಪ್ರಚಾರಕ ಹುದ್ದೆಯನ್ನು ತೊರೆದು ರೈತ ಕಾರ್ಮಿಕ ಚಳವಳಿಗೆ ಧುಮುಕಿದ್ದರು.

ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಪೂರ್ಣವಧಿ ಕಾರ್ಯಕರ್ತರಾಗಿದ್ದ ನಿತ್ಯಾನಂದಸ್ವಾಮಿ ಅವರು ಅವಿಭಜಿತ ಧಾರವಾಡ ಜಿಲ್ಲಾ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಹಲವು ದಶಕಗಳ ಕಾಲ ಹುಬ್ಬಳ್ಳಿ, ಹರಿಹರ, ಹಾನಗಲ್, ದಾಂಡೇಲಿ ಕೇಂದ್ರವಾಗಿಸಿಕೊಂಡು ಕೆಲಸ ಮಾಡಿದ್ದರು.

ಶಿಕ್ಷಣದಿಂದ, ಸಮಾಜದಿಂದ ವಂಚಿತರಾದ ಹತ್ತಾರು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ವಿದ್ಯಾರ್ಥಿ ಚಳವಳಿಯ ಸಕ್ರಿಯ ಕಾರ್ಯಕರ್ತರನ್ನಾಗಿ ಬೆಳೆಸುವಲ್ಲಿ ಮಾತ್ರವಲ್ಲ, ಹಲವು ಯುವ ಜನರಿಗೆ ಸಮಸಮಾಜ ಕಟ್ಟುವ ಕನಸಿನೊಂದಿಗೆ ಅಂತರ್ಜಾತಿ ಮದುವೆಗಳನ್ನು ಮಾಡಿಸಿ ಅವರ ಬದುಕಿಗೆ ಆಸರೆಯಾಗಿ ನಿಲ್ಲುವಲ್ಲಿ, ದೇವದಾಸಿ ಪದ್ಧತಿ ವಿರುದ್ಧದ ಚಳವಳಿಯಲ್ಲೂ ಅವರು ಅನುಕರಣೀಯ ಪಾತ್ರವಹಿಸಿದ್ದರು.

ಸಿಐಟಿಯು ರಾಜ್ಯ ಮುಖಂಡರಾಗಿ ರಾಜ್ಯದಲ್ಲಿ ನೇಕಾರರೂ ಸೇರಿದಂತೆ ಇತರೆ ಕಾರ್ಮಿಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ನಿತ್ಯಾನಂದಸ್ವಾಮಿ ಅವರು ಕರ್ನಾಟಕ ರಾಜ್ಯ ನೇಕಾರರ ಸಮನ್ವಯ ಸಮಿತಿ ಅಧ್ಯಕ್ಷರಾಗಿ ನೇಕಾರರ ಬದುಕನ್ನು ಉತ್ತಮಪಡಿಸಲು ಹಲವು ಹೋರಾಟಗಳನ್ನು ಮುನ್ನಡೆಸಿದ್ದರು.

ಇದಲ್ಲದೆ ಬೀಡಿ, ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಘನತೆಯ ಬದುಕಿಗಾಗಿ ಶ್ರಮಿಸಿದ್ದರು. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೃಷಿಕೂಲಿಕಾರರನ್ನು ಸಂಘಟಿಸಿ ಭೂಮಿಯ ಹಕ್ಕಿಗಾಗಿ ಹಲವು ವರ್ಷಗಳ ಕಾಲ ಹೋರಾಟ ನಡೆಸಿದ್ದರು. ಜತೆಗೆ, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಒಂದು ತಿಂಗಳು ಸೆರೆವಾಸ ಅನುಭವಿಸಿದ್ದರು.

ಕೃಷಿಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾಗಿ ನಿತ್ಯಾನಂದಸ್ವಾಮಿ ಅವರು ಗಂಗಾವತಿ ಸೇರಿ ರಾಜ್ಯದ ಹಲವಡೆ ಕೂಲಿಗಾಗಿ, ಉದ್ಯೋಗ ಖಾತ್ರಿ ಯೋಜನೆ ಜಾರಿಗಾಗಿ ಹೋರಾಟದ ನೇತೃತ್ವ ವಹಿಸಿದ್ದರು. ಇದೇ ಅವಧಿಯಲ್ಲಿ ಗಂಗಾವತಿಯ ಮರಕಾಂಬಿ ಗ್ರಾಮದ ದಲಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಅತ್ಯುತ್ತಮ ಕಾರ್ಯಕರ್ತರಾಗಿ, ಆದರ್ಶ ನಾಯಕರಾಗಿ, ಮಾರ್ಕ್ಸ್ ವಾದದಲ್ಲಿ ಅತ್ಯಂತ ದೃಢತೆ ಮತ್ತು ಬದ್ಧತೆ ಹಾಗೂ ಅಚಲವಾದ ನಂಬಿಕೆಯೊಂದಿಗೆ ನಾಲ್ಕುವರೆ ದಶಕಗಳಿಂದ ಪಕ್ಷ ಮತ್ತು ಜನಚಳವಳಿಯನ್ನೇ ತಮ್ಮ ಕುಟುಂಬವೆಂದು ಕೆಲಸ ಮಾಡಿದ್ದರು. ಪಕ್ಷದ ಶಿಕ್ಷಣ ಉಪಸಮಿತಿ ಸಂಚಾಲಕರಾಗಿಯೂ ಕೆಲಸ ಮಾಡಿದ್ದರು. ‘ಜನಶಕ್ತಿ’ ಕನ್ನಡ ವಾರ ಪತ್ರಿಕೆಯ ಸಂಪಾದಕರಾಗಿಯೂ ಅವರು ಕೆಲಸ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.