ಪ್ಯಾರಿಸ್ : ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ(ಎಐ)ಯ ನಿರ್ವಹಣಾ ವ್ಯವಸ್ಥೆ ಮತ್ತು ಮಾನದಂಡಗಳನ್ನು ರಚಿಸಲು ಜಾಗತಿಕ ಮಟ್ಟದಲ್ಲಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರತಿಪಾದಿಸಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಜೊತೆ ‘ಎಐ ಆ್ಯಕ್ಷನ್’ ಶೃಂಗದ ಸಹ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ರಾಜಕೀಯ, ಆರ್ಥಿಕತೆ, ಭದ್ರತೆ ಮತ್ತು ಸಮಾಜಕ್ಕೆ ಎಐ ದೊಡ್ಡ ಸವಾಲಾಗಿದೆ. ಈ ಶತಮಾನದಲ್ಲಿ ಎಐ ಮಾನವಿಯತೆಯ ನಿಯಮಗಳನ್ನು (ಕೋಡಿಂಗ್) ಬರೆಯುತ್ತಿದೆ’ ಎಂದು ಹೇಳಿದರು.

ಎಐ ತಂತ್ರಜ್ಞಾನದಿಂದಾಗಿ ಉದ್ಯೋಗ ನಷ್ಟವಾಗುತ್ತಿದೆ ಎಂಬ ಆತಂಕಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ ಅವರು, ‘ತಂತ್ರಜ್ಞಾನದಿಂದ ಉದ್ಯೋಗಗಳ ನಷ್ಟವಾಗುವುದಿಲ್ಲ. ಬದಲಾಗಿ ಉದ್ಯೋಗದ ಸ್ವರೂಪ ಬದಲಾಗುತ್ತದೆ ಮತ್ತು ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ’ ಎಂದರು.

‘ಎಐ ಚಾಲಿತ ಭವಿಷ್ಯಕ್ಕಾಗಿ ನಮ್ಮ ಜನರನ್ನು ಕೌಶಲಯುತರನ್ನಾಗಿ ಮಾಡಬೇಕಿದೆ’ ಎಂದೂ ಅವರು ಪ್ರತಿಪಾದಿಸಿದರು.

ಅನ್ವೇಷಣೆ ಮತ್ತು ಆಡಳಿತದ ಬಗ್ಗೆ ನಾವು ಆಳವಾಗಿ ಚರ್ಚಿಸಬೇಕು. ವಿಶೇಷವಾಗಿ, ಭೌಗೋಳಿಕವಾಗಿ ದಕ್ಷಿಣದಲ್ಲಿರುವ ರಾಷ್ಟ್ರಗಳಲ್ಲಿ ಕಂಪ್ಯೂಟರ್, ಶಕ್ತಿ, ಪ್ರತಿಭೆ ಮತ್ತು ಆರ್ಥಿಕ ಸಂಪನ್ಮೂಲಗಳಿದ್ದರೂ ಸಾಮರ್ಥ್ಯದ ಕೊರತೆ ಇದೆ’ ಎಂದು ವಿಶ್ಲೇಷಿಸಿದರು.

ಮೋದಿ ಸಲಹೆಗಳು

ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು ಮತ್ತು ಜನ ಕೇಂದ್ರಿತ ಅಪ್ಲಿಕೇಷನ್ಗಳನ್ನು ನಿರ್ಮಿಸಬೇಕು

ಸೈಬರ್ ಸುರಕ್ಷತೆ ನಕಲಿ ಮಾಹಿತಿ ಮತ್ತು ‘ಡೀಪ್ ಪೇಕ್’ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಬೇಕು

ಆರೋಗ್ಯ ಶಿಕ್ಷಣ ಕೃಷಿ ಇನ್ನಿತರ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಮೂಲಕ ‘ಎಐ’ ಲಕ್ಷಾಂತರ ಜನರ ಜೀವನವನ್ನು ಬದಲಾಯಿಸಿದೆ. ಇದು ಸುಸ್ಥಿರ ಅಭಿವೃದ್ಧಿಯನ್ನು ಸರಳ ಮತ್ತು ಕ್ಷಿಪ್ರಗೊಳಿಸುತ್ತದೆ. ಅದಕ್ಕಾಗಿ ನಾವು ಸಂಪನ್ಮೂಲ ಮತ್ತು ಪ್ರತಿಭೆಗಳನ್ನು ಒಗ್ಗೂಡಿಸಬೇಕು

‘ಎಐ’ ತಂತ್ರಜ್ಞಾನದಲ್ಲಿ ಭಾರತ ದಾಪುಗಾಲು

ಭಾರತದಲ್ಲಿನ ‘ಎಐ’ ಕ್ರಾಂತಿಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು ‘ಭಾರತದ 140 ಕೋಟಿ ಜನರಿಗೆ ಕಡಿಮೆ ವೆಚ್ಚದಲ್ಲಿ ಡಿಜಿಟಲ್ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ನಮ್ಮ ಆರ್ಥಿಕತೆಯ ಆಧುನೀಕರಣ ಆಡಳಿತ ಸುಧಾರಣೆ ಮತ್ತು ಜನಜೀವನದ ಉನ್ನತಿಗೆ ‘ಎಐ’ ಸಹಾಯ ಮಾಡುತ್ತಿದೆ’ ಎಂದು ಹೇಳಿದ್ದಾರೆ. ‘ರಾಷ್ಟ್ರೀಯ ‘ಎಐ’ ಮಿಷನ್’ನ ಅಡಿಪಾಯವಾಗಿ ವಾಣಿಜ್ಯ ಡಿಜಿಟಲೀಕರಣವು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದೇವೆ. ಪ್ರಸ್ತುತ ಭಾರತವು ‘ಎಐ’ ಅಳವಡಿಕೆ ಮತ್ತು ದತ್ತಾಂಶ ಸುರಕ್ಷತೆಗೆ ತಾಂತ್ರಿಕ–ಕಾನೂನು ಪರಿಹಾರ ನೀಡುವಲ್ಲಿ ಅಗ್ರಸ್ಥಾನದಲ್ಲಿದೆ. ಜನೋಪಯೋಗಕ್ಕಾಗಿ ‘ಎಐ’ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು. ‘ವಿಶ್ವದಲ್ಲೇ ಭಾರತವು ಹೆಚ್ಚು ಎಐ ಪರಿಣಿತರನ್ನು ಹೊಂದಿದೆ. ನಮ್ಮ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಾವು ‘ಎಐ’ನಲ್ಲಿ ಸ್ವದೇಶಿ ಭಾಷಾ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಹೇಳಿದರು.

ಶೃಂಗದ ಘೋಷಣೆಗೆ ಸಹಿ ಹಾಕದ ಅಮೆರಿಕ ಬ್ರಿಟನ್

‘ಎಲ್ಲರನ್ನು ಒಳಗೊಂಡ ಮತ್ತು ಸುಸ್ಥಿರ ಕೃತಕ ಬುದ್ಧಿಮತ್ತೆ’ ಎಂಬ ಪ್ಯಾರಿಸ್ ‘ಎಐ’ ಶೃಂಗದ ಘೋಷಣೆಗೆ ಅಮೆರಿಕ ಮತ್ತು ಬ್ರಿಟನ್ ಸಹಿ ಮಾಡಿಲ್ಲ. ‘‘ಎಐ’ ಅನ್ನು ಮುಕ್ತ ಪಾರದರ್ಶಕ ನೈತಿಕ ಸುರಕ್ಷಿತ ಮತ್ತು ನಂಬಿಕಾರ್ಹ ವ್ಯವಸ್ಥೆಯನ್ನಾಗಿಸುವುದು. ‘ಎಐ’ ಅಭಿವೃದ್ಧಿಯ ವೇಳೆ ಅಂತರರಾಷ್ಟ್ರೀಯ ಚೌಕಟ್ಟುಗಳನ್ನು ಪರಿಗಣಿಸುವುದು. ಜನರಿಗೆ ಮತ್ತು ಜಗತ್ತಿಗಾಗಿ ಎಐ ಅನ್ನು ಸುಸ್ಥಿರಗೊಳಿಸುವುದು’ ಶೃಂಗದ ಘೋಷಣೆಯಾಗಿದೆ. ಈ ಬಗ್ಗೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಎಐ ಶೃಂಗದ ಘೋಷಣೆ ಕುರಿತು ಚರ್ಚೆ ನಡೆಸುತ್ತಿದ್ದೇವೆ’ ಎಂದು ಬ್ರಿಟನ್ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.