ಲಂಡನ್: ಟ್ರಂಪ್ ಸುಂಕ ನೀತಿಯಿಂದಾಗಿ ಜಾಗತಿಕ ಮಾರುಕಟ್ಟೆಗಳ ಮೇಲೆ ಹೊಡೆತ ಬಿದ್ದಿದ್ದು, ಏಷ್ಯಾದ ಷೇರುಪೇಟೆಗಳ ಮೇಲೂ ಪರಿಣಾಮ ಬೀರಿದೆ.

ಈ ಸಂಬಂಧ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆರೋಗ್ಯ ಸರಿಯಿಲ್ಲದ ವೇಳೆ ಗುಣಪಡಿಸಲು ಹೇಗೆ ಔಷಧಿಗಳನ್ನು ತೆಗೆದುಕೊಳ್ಳುತ್ತೇವೆಯೋ ಹಾಗೆ, ಕೆಲವೊಮ್ಮೆ ಏನನ್ನಾದರೂ ಸರಿಪಡಿಸುವ ಮೊದಲು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಮೂರ್ಖ ನಾಯಕತ್ವ ಇದ್ದ ಕಾರಣ ಬೇರೆ ದೇಶಗಳು ನಮ್ಮನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿವೆ ಎಂದು ಹಿಂದಿನ ಸರ್ಕಾರವನ್ನು ಗುರಿಯಾಗಿಸಿ ಟ್ರಂಪ್ ಕಿಡಿಕಾರಿದ್ದಾರೆ.
.ಟ್ರಂಪ್ ಸುಂಕ ನೀತಿ: ಅಮೆರಿಕದ ಷೇರುಪೇಟೆ ತಲ್ಲಣ.ಎಸ್.ಎಂ.ಕೃಷ್ಣ ಸ್ಮರಣಾರ್ಥ ಓಪನ್ ITF ಟೆನಿಸ್: ಕ್ರಾಫರ್ಡ್ಗೆ ಸಿಂಗಲ್ಸ್ ಕಿರೀಟ.
ಚೀನಾದೊಂದಿಗಿನ ವ್ಯಾಪಾರ ಕೊರತೆ ಪರಿಹರಿಸದ ಹೊರತು ಬೀಜಿಂಗ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಮಾರುಕಟ್ಟೆಗಳ ಬಗ್ಗೆ ಹೇಳಲಾರೆ, ಆದರೆ ನಮ್ಮ ದೇಶವು ಹೆಚ್ಚು ಬಲಿಷ್ಠವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ತಮ್ಮ ಸುಂಕ ನೀತಿಯಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ದೊಡ್ಡ ಕಂಪನಿಗಳ ಪೂರೈಕೆ ಸರಪಳಿಯು ವಿದೇಶಗಳಲ್ಲಿ ಹರಡಿಕೊಂಡಿದೆ. ಆ ರಾಷ್ಟ್ರಗಳು ಸುಂಕ ಹೆಚ್ಚಿಸಿದರೆ ಬಿಡಿಭಾಗ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಇದರಿಂದ ನಷ್ಟವಾಗುವ ಆತಂಕ ದೊಡ್ಡ ಕಂಪನಿಗಳಿಗೆ ಎದುರಾಗಿದೆ. ಇದು ಹೂಡಿಕೆದಾರರ ಬಲವನ್ನು ಕುಗ್ಗಿಸಿದೆ ಎಂದು ತಜ್ಞರು ಹೇಳಿದ್ದರು.
.ಭಾರತೀಯ ರಿಸರ್ವ್ ಬ್ಯಾಂಕ್ನ ಎಂಪಿಸಿ ಸಭೆ ಇಂದಿನಿಂದ ಆರಂಭ .ರಾಮನವಮಿ: ಮೆರವಣಿಗೆ ವೇಳೆ ಕಲ್ಲು ತೂರಾಟ; ಕಾನ್ಪುರದಲ್ಲಿ ಬಿಗಿ ಭದ್ರತೆ.ಆಳ–ಅಗಲ | ಸ್ಮಾರ್ಟ್ ಸಿಟಿ: ಈಡೇರಿತೇ ಆಶಯ?.ವಿಶ್ಲೇಷಣೆ | ಹೂಡಿಕೆ ವಂಚನೆ ತಡೆಗಿದೆ ಮಾರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.