ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ | ಶರದ್ ಪವಾರ್ ಬಣಕ್ಕೆ ಹೊಸ ಹೆಸರು ‘ಎನ್‌ಸಿಪಿ-ಶರದ್‌ಚಂದ್ರ ಪವಾರ್’

Published 7 ಫೆಬ್ರುವರಿ 2024, 13:47 IST
Last Updated 7 ಫೆಬ್ರುವರಿ 2024, 13:47 IST
ಅಕ್ಷರ ಗಾತ್ರ

ನವದೆಹಲಿ: ಎನ್‌ಸಿಪಿಯ ಶರದ್‌ ಪವಾರ್‌ ಬಣಕ್ಕೆ ಚುನಾವಣಾ ಆಯೋಗವು ‘ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ– ಶರದ್‌ಚಂದ್ರ ಪವಾರ್‌’ ಎಂಬ ಹೆಸರನ್ನು ಬುಧವಾರ ಹಂಚಿಕೆ ಮಾಡಿದೆ.

ಮುಂಬರುವ ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಹೊಸ ಹೆಸರುಗಳನ್ನು ಸೂಚಿಸುವಂತೆ ಆಯೋಗವು ಸಲಹೆ ನೀಡಿತ್ತು. ಅದರಂತೆ ಶರದ್‌ ಬಣವು, ‘ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ–ಶರದ್‌ಚಂದ್ರ ಪವಾರ್‌’, ‘ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ–ಶರದ್‌ ರಾವ್‌ ಪವಾರ್’ ಮತ್ತು ‘ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ–ಶರದ್‌ ಪವಾರ್‌’ ಹೆಸರುಗಳನ್ನು ಸೂಚಿಸಿತ್ತು.

'ಆಲದ ಮರ’ ಚಿಹ್ನೆಯನ್ನು ತಮ್ಮ ಬಣಕ್ಕೆ ನೀಡಬೇಕು ಎಂದೂ ಪವಾರ್‌ ಬಣವು ಆಯೋಗವನ್ನು ಕೋರಿತ್ತು.

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್ ಅವರ ನೇತೃತ್ವದ ಎನ್‌ಸಿಪಿ ಬಣವನ್ನೇ ನೈಜ ಎನ್‌ಸಿಪಿ ಎಂದು ಮಂಗಳವಾರ ಪ್ರಕಟಿಸಿದ್ದ ಚುನಾವಣಾ ಆಯೋಗವು, ಪಕ್ಷದ ‘ಗೋಡೆ ಗಡಿಯಾರ’ ಚಿಹ್ನೆಯನ್ನೂ ಅದೇ ಬಣಕ್ಕೆ ಹಂಚಿಕೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT