ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಐಶಾರಾಮಿ ಬಂಗಲೆಯಲ್ಲಿ ಭಾರತೀಯ ಮೂಲದ ದಂಪತಿ, ಪುತ್ರಿ ಶವ ಪತ್ತೆ

Published 30 ಡಿಸೆಂಬರ್ 2023, 13:59 IST
Last Updated 30 ಡಿಸೆಂಬರ್ 2023, 13:59 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದ ಮೆಸಾಚುಸೆಟ್ಸ್‌ನಲ್ಲಿ ನೆಲೆಸಿದ್ದ ಭಾರತೀಯ ಮೂಲದ ದಂಪತಿ ಮತ್ತು ಪುತ್ರಿಯ ಮೃತದೇಹಗಳು ಅವರ ಐಶಾರಾಮಿ ಬಂಗಲೆಯಲ್ಲಿ ಪತ್ತೆಯಾಗಿವೆ.

ರಾಕೇಶ್‌ ಕಮಲ್‌ (57), ಟೀನಾ (54) ಮತ್ತು  ಪುತ್ರಿ ಅರಿಯಾನಾ (18) ಎಂಬವರ ಮೃತದೇಹಗಳು ಬಾಸ್ಟನ್‌ ಸಮೀಪದ ಡೋವರ್‌ನಲ್ಲಿರುವ ಬಂಗಲೆಯಲ್ಲಿ ಪತ್ತೆಯಾಗಿರುವುದಾಗಿ ನಾರ್ಫೋಕ್ ಡಿಸ್ಟ್ರಿಕ್ಟ್ ಅಟಾರ್ನಿ (ಡಿ.ಎ) ಮೈಕೆಲ್‌ ಮೊರಿಸ್ಸೆ ತಿಳಿಸಿದ್ದಾರೆ.

ಟೀನಾ ಮತ್ತು ರಾಕೇಶ್‌ ಅವರು ಈ ಹಿಂದೆ ಶಿಕ್ಷಣಕ್ಕೆ ಸಂಬಂಧಿಸಿದ ‘ಎಡುನೋವಾ’ ಎಂಬ ಕಂಪನಿ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

‘ರಾಕೇಶ್‌ ಅವರ ಮೃತದೇಹದ ಬಳಿ ಬಂದೂಕು ಪತ್ತೆಯಾಗಿದ್ದು. ಕೌಟುಂಬಿಕ ಕಲಹದಿಂದ ಇವರು ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಮೈಕೆಲ್‌ ಮೊರಿಸ್ಸೆ ತಿಳಿಸಿದ್ದಾರೆ.

ಇದೊಂದು ಕೊಲೆ ಪ್ರಕರಣವೋ ಅಥವಾ ಅತ್ಮಹತ್ಯೆಯೋ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಲಿದೆ ಎಂದೂ ವಿವರಿಸಿದ್ದಾರೆ.

ಇವರು ಅಂದಾಜು ₹41.60 ಕೋಟಿ (ಐದು ಮಿಲಿಯನ್‌ ಅಮೆರಿಕ ಡಾಲರ್‌) ಮೌಲ್ಯದ ಬಂಗಲೆಯಲ್ಲಿ ವಾಸವಿದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT