ಗುರುವಾರ , ನವೆಂಬರ್ 26, 2020
21 °C

ಕಂಗನಾ ರನೌತ್ ಪ್ರಕರಣ : 9 ಜನ ಪತ್ರಕರ್ತರಿಗೆ ಪ್ರಯಾಣ ನಿಷೇಧಿಸಿದ ಇಂಡಿಗೊ!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ನಟಿ ಕಂಗಾನ ರನೌಟ್‌ ಅವರ ಪ್ರತಿಕ್ರಿಯೆಗಾಗಿ ವಿಮಾನದೊಳಗೆ ಪ್ರವೇಶಿಸಿದ್ದ 9 ಜನ ಮಾಧ್ಯಮ ಪ್ರತಿನಿಧಿಗಳಿಗೆ ಇಂಡಿಗೊ ವಿಮಾನಯಾನ ಸಂಸ್ಥೆ 2 ವಾರ ನಿಷೇಧ ಹೇರಿದೆ.

ಕಳೆದ ಸೆಪ್ಟೆಂಬರ್ 9ರಂದು ನಟಿ ಕಂಗಾನ ಚಂಡೀಗಢದಿಂದ ಮುಂಬೈಗೆ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲ ಪತ್ರಕರ್ತರು ಕ್ಯಾಮೆರಾಮೆನ್‌ಗಳ ಜೊತೆ ವಿಮಾನದಲ್ಲಿ ಅವರ ಪ್ರತಿಕ್ರಿಯೆಗಾಗಿ ದುಂಬಾಲು ಬಿದಿದ್ದರು. ಈ ಘಟನೆ ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದು ಡಿಜಿಸಿಎ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಡಿಜಿಸಿಎ ಇಂಡಿಗೊ ವಿಮಾನಯಾನ ಸಂಸ್ಥೆಗೆ ನೋಟಿಸ್‌ ನೀಡಿತ್ತು. 

ವಿಮಾನದೊಳಗೆ ಚಿತ್ರ ಮತ್ತು ವಿಡಿಯೊ ಮಾಡುವುದು ಕಾನೂನು ಬಾಹಿರವಾಗಿದೆ. ಹಾಗೇ ಪತ್ರಕರ್ತರು ಅನುಮತಿ ಇಲ್ಲದೆ ವಿಮಾನದೊಳಗೆ ಪ್ರವೇಶ ಪಡೆದಿದ್ದು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಇಂಡಿಗೊ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಸೂಚನೆ ನೀಡಿತ್ತು. 

ಡಿಜಿಸಿಎ ನಿರ್ದೇಶನದ ಅನ್ವಯ 9 ಜನ ಪತ್ರಕರ್ತರಿಗೆ ವಿಮಾನ ಪ್ರಯಾಣದಿಂದ 2 ವಾರ ನಿಷೇಧ ಹೇರಲಾಗಿದೆ ಎಂದು ಇಂಡಿಗೊ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು