ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್ ಮಹೀಂದ್ರಾ ಹೆಸರಿನಲ್ಲಿ ನಕಲಿ ಟ್ವೀಟ್: ಕಾನೂನು ಕ್ರಮದ ಎಚ್ಚರಿಕೆ

Last Updated 22 ನವೆಂಬರ್ 2021, 5:55 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹೀಂದ್ರಾ, ಮತ್ತೊಮ್ಮೆ ತಮ್ಮ ಬಗೆಗೆ ಹರಿದಾಡಿರುವ ಕೋಟ್ ಒಂದರ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

ಖ್ಯಾತನಾಮರ ಹೆಸರಿನಲ್ಲಿ ನಕಲಿ ಟ್ವೀಟ್ ಮತ್ತು ಹೇಳಿಕೆ ಇರುವ ಕೋಟ್ ಪೋಸ್ಟ್‌ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುತ್ತವೆ.

ಅದೇ ರೀತಿಯಲ್ಲಿ, ಆನಂದ್ ಮಹೀಂದ್ರಾ ಅವರ ಹೆಸರಿನಲ್ಲೂ ನಕಲಿ ಹೇಳಿಕೆಯೊಂದು ಹರಿದಾಡಿದೆ.

ಇದನ್ನು ಗಮನಿಸಿದ ಅವರು, ಕೋಟ್ ಪೋಸ್ಟ್ ಮಾಡಿದ್ದ ಇನ್‌ಸ್ಟಾಗ್ರಾಂ ಖಾತೆಯ ಸ್ಕ್ರೀನ್‌ಶಾಟ್ ಆನ್ನು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜತೆಗೆ, ಇಂತಹ ಹಲವಾರು ನಕಲಿ ಕೋಟ್ ಇರುವ ಪೋಸ್ಟ್‌ಗಳು ಇದ್ದು, ಅವುಗಳನ್ನು ನಾವೇ ಸ್ವತಃ ಹೇಳಿರುವಂತೆ ಬಿಂಬಿಸಲಾಗುತ್ತಿದೆ. ಆದರೆ ಅವುಗಳಿಗೂ ನಮಗೂ ಸಂಬಂಧವೇ ಇರುವುದಿಲ್ಲ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.

ಅಲ್ಲದೆ, ಸೂಕ್ತ ಕಾನೂನು ಕ್ರಮದ ಎಚ್ಚರಿಕೆಯನ್ನೂ ಆನಂದ್ ಮಹೀಂದ್ರಾ ನೀಡಿದ್ದು, ನಮ್ಮದಲ್ಲದ ಹೇಳಿಕೆಗಳನ್ನು ಪ್ರಕಟಿಸಿ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT