ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಘರ್ಷಣೆ ವೇಳೆ ಯುದ್ಧನೌಕೆಗಳು ಮುಂಚೂಣಿ ನೆಲೆಯಲ್ಲಿದ್ದವು: ನೌಕಾಪಡೆ ಮುಖ್ಯಸ್ಥ

Last Updated 3 ಡಿಸೆಂಬರ್ 2021, 13:23 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯಲ್ಲಿ ಚೀನಾದೊಂದಿಗಿನ ಗಡಿ ಘರ್ಷಣೆಯ ವೇಳೆ ಭಾರತೀಯ ಯುದ್ಧನೌಕೆಗಳನ್ನು ಮುಂಚೂಣಿ ಜಾಗಗಳಲ್ಲಿ ನಿಯೋಜನೆ ಮಾಡಲಾಗಿತ್ತು ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ, ಅಡ್ಮಿರಲ್ ಆರ್. ಹರಿಕುಮಾರ್ ಶುಕ್ರವಾರ ಹೇಳಿದ್ದಾರೆ. ಉತ್ತರದ ಗಡಿಗಳಲ್ಲಿನ ಭದ್ರತಾ ಪರಿಸ್ಥಿತಿಯು ಭಾರತಕ್ಕೆ ಸವಾಲುಗಳನ್ನು ಹೆಚ್ಚಿಸಿವೆ ಎಂದೂ ಅವರು ತಿಳಿಸಿದ್ದಾರೆ.

ನಮ್ಮ ನೌಕಾಪಡೆಯು ಭಾರತದ ಸಾಗರ ಪ್ರದೇಶವನ್ನು ರಕ್ಷಿಸುವ ಸಂಪೂರ್ಣ ವಿಶ್ವಾಸವನ್ನು ಹೊಂದಿದೆ. ದೇಶದ ಮುಂದಿರುವ ಸಂಭವನೀಯ ಭದ್ರತಾ ಸವಾಲುಗಳನ್ನು ಪರಿಗಣಿಸಿ ಸಕಲ ಸಿದ್ಧತೆಳಲ್ಲೂ ತೊಡಗಿದೆ ಎಂದು ಅಡ್ಮಿರಲ್ ಕುಮಾರ್ ಹೇಳಿದರು.

ಭಾರತೀಯ ನೌಕಾಪಡೆಯು 2007 ರಿಂದಲೂ ಹಿಂದೂ ಮಹಾಸಾಗರದಲ್ಲಿ ಚೀನಾದ 'ಪೀಪಲ್ಸ್ ಲಿಬರೇಶನ್ ಆರ್ಮಿ (ನೌಕಾಪಡೆ)ಯ' ಉಪಸ್ಥಿತಿ ಮೇಲೆ ಕಣ್ಣಿಟ್ಟಿದೆ ಎಂದರು.

ಹಿಂದೂ ಮಹಾಸಾಗರದಲ್ಲಿನ ಚೀನಾ ಯುದ್ಧನೌಕೆಗಳ ಉಪಸ್ಥಿತಿಯ ವಿವರಗಳನ್ನೂ ಹರಿಕುಮಾರ್‌ ಹಂಚಿಕೊಂಡಿದ್ದಾರೆ. ಸುಮಾರು ಏಳು ಚೀನೀ ಯುದ್ಧನೌಕೆಗಗಳು ಈ ಪ್ರದೇಶದಲ್ಲಿವೆ ಎಂದು ಅವರು ಹೇಳಿದರು. ಚೀನಾ ಕೆಲವೊಮ್ಮೆ ಜಲಾಂತರ್ಗಾಮಿ ನೌಕೆಗಳನ್ನು ಕಳುಹಿಸುತ್ತದೆ ಎಂದು ಅವರು ವಿವರಿಸಿದರು.

'ನಾವು ಅವರ (ಚೀನಾದ) ಹಡಗುಗಳ ನಿಯೋಜನೆಯ ಬಗ್ಗೆ ಅರಿವು ಹೊಂದಿದ್ದೇವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ಕಾರ್ಯತಂತ್ರವನ್ನು ಯೋಜಿಸುತ್ತೇವೆ. ಅವರ ಮೇಲೆ ನಿಗಾ ವಹಿಸುವ ಕಾರ್ಯ ಈಗಲೂ ಚಾಲ್ತಿಯಲ್ಲಿದೆ' ಎಂದು ಅಡ್ಮಿರಲ್ ಕುಮಾರ್ ಹೇಳಿದರು.

ಕಳೆದ 10 ವರ್ಷಗಳಲ್ಲಿ 180 ಹಡಗುಗಳನ್ನು ಚೀನಾ ನೌಕಾಪಡೆ ನಿರ್ಮಿಸಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

ಭಾರತ ಸದ್ಯ 39 ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಭಾರತ ನಿರ್ಮಿಸುತ್ತಿದೆ. ಅವುಗಳಲ್ಲಿ 37 ಭಾರತೀಯ ಹಡಗುಕಟ್ಟೆಗಳಲ್ಲಿ ನಿರ್ಮಾಣವಾಗುತ್ತಿವೆ. ಕಳೆದ 7 ವರ್ಷಗಳಲ್ಲಿ 28 ಯುದ್ಧ ನೌಕೆಗಳು ಭಾರತೀಯ ನೌಕಾ ಪಡೆ ಸೇರಿವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT