ಗುರುವಾರ , ಮಾರ್ಚ್ 23, 2023
21 °C

ಮೋದಿ ಸರ್ಕಾರ ಸಾರ್ವಜನಿಕರ ಬಗ್ಗೆ ಸಂವೇದನಾಶೀಲ ಹೃದಯ ಹೊಂದಬೇಕು: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೀಪಾವಳಿ ಆಚರಣೆ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಕುರಿತು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಮೋದಿ ಸರ್ಕಾರ ಜನರಿಗಾಗಿ ಸಂವೇದನಾಶೀಲ ಹೃದಯವನ್ನು ಹೊಂದಬೇಕು ಆಶಿಸುತ್ತೇನೆ‘ ಎಂದು ಹೇಳಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ‘ಇದು ದೀಪಾವಳಿ ಆಚರಿಸುವ ಸಮಯ. ಅಗತ್ಯ ವಸ್ತುಗಳ ಬೆಲೆಗಳು ಉತ್ತುಂಗದಲ್ಲಿವೆ. ಇದು ವ್ಯಂಗ್ಯದ ವಿಷಯವಲ್ಲ. ಮೋದಿ ಸರ್ಕಾರ, ಸಾರ್ವಜನಿಕರ ಬಗ್ಗೆ ಸೂಕ್ಷ್ಮ ಹೃದಯ ಹೊಂದಬೇಕೆಂದು ನಾನು ಬಯಸುತ್ತೇನೆ‘ ಎಂದು ಹೇಳಿದ್ದಾರೆ.

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರವನ್ನು ರಾಹುಲ್  ತೀವ್ರವಾಗಿ ಟೀಕಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ತೆರಿಗೆಯ ಹೆಸರಲ್ಲಿ ಸರ್ಕಾರ ಸುಲಿಗೆ ಮಾಡುತ್ತಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು