ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update| 24 ಗಂಟೆಯಲ್ಲಿ ಮುಂಬೈನಲ್ಲಿ 940 ಪ್ರಕರಣ, 18 ಜನ ಸಾವು

ಮಹಾರಾಷ್ಟ್ರದಲ್ಲಿ ಆಂಧ್ರ ಪ್ರದೇಶದಲ್ಲಿ 620 ಹೊಸ ಪ್ರಕರಣ
Last Updated 29 ನವೆಂಬರ್ 2020, 16:23 IST
ಅಕ್ಷರ ಗಾತ್ರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 41,810 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 496 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 93,92,920ಕ್ಕೆ ಏರಿಕೆಯಾಗಿದ್ದರೆ, ಸಾವಿನ ಸಂಖ್ಯೆ 1,36,696ಕ್ಕೆ ಏರಿಕೆಯಾಗಿದೆ.

ಸದ್ಯ ದೇಶದಲ್ಲಿ 4,53,956 ಸಕ್ರಿಯ ಪ್ರಕರಣಗಳಿದ್ದು, 88,02,267 ಮಂದಿ ಈ ವರೆಗೆ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 42,298 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 12,83,449 ಮಾದರಿಗಳನ್ನು ಪರೀಕ್ಷಿಸಲಾಗಿದೆ. ದೇಶದಲ್ಲಿ ಒಟ್ಟು 13,95,03,803 ಮಾದರಿಗಳನ್ನು ಈ ವರೆಗೆ ಪರೀಕ್ಷೆ ಮಾಡಲಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಅಧ್ಯಯನ ಸಂಸ್ಥೆ ತಿಳಿಸಿದೆ.

ಮಹಾರಾಷ್ಟ್ರ: 5,544 ಹೊಸ ಪ್ರಕರಣ

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಹೊಸದಾಗಿ 5,544 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 4,362 ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 85 ಜನರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 18,20,059ಕ್ಕೆ ಏರಿಕೆಯಾಗಿದ್ದು, 16,80,926 ಜನರು ಗುಣಮುಖರಾಗಿದ್ದಾರೆ. ಈವರೆಗೆ 47,071 ಜನರು ಸಾವಿಗೀಡಾಗಿದ್ದಾರೆ.

ಮುಂಬೈನಲ್ಲಿಂದು 940 ಹೊಸ ಪ್ರಕರಣ ಪತ್ತೆಯಾಗುವುದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 2,82,814ಕ್ಕೆ ತಲುಪಿದೆ. ಈ ಪೈಕಿ 2,55,860 ಜನರು ಗುಣಮುಖರಾಗಿದ್ದು, 10,791 ಜನರು ಮೃತಪಟ್ಟಿದ್ದಾರೆ. 13,157 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 18 ಜನರು ಸಾವಿಗೀಡಾಗಿದ್ದು, 515 ಜನರು ಚೇತರಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ 620 ಹೊಸ ಪ್ರಕರಣ

ಆಂಧ್ರ ಪ್ರದೇಶದಲ್ಲಿ ಈವರೆಗೆ 8,67,683 ಜನರಿಗೆ ಸೋಂಕು ತಗುಲಿದ್ದರೆ, 8,52,298 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಪೈಕಿ 8,397 ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ 6,988 ಜನರು ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 620 ಹೊಸ ಪ್ರಕರಣಗಳೊಂದಿಗೆ 3,787 ಜನರು ಗುಣಮುಖರಾಗಿದ್ದಾರೆ ಮತ್ತು 7 ಜನರು ಸಾವಿಗೀಡಾಗಿದ್ದಾರೆ.

ತಮಿಳುನಾಡಿನಲ್ಲಿ 7,57,750 ಜನ ಗುಣಮುಖ

ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,459 ಜನರಿಗೆ ಸೋಂಕು ತಗುಲಿದೆ. ಇದೇ ವೇಳೆ 1,471 ಜನರು ಗುಣಮುಖರಾಗಿದ್ದರೆ, 9 ಜನರು ಮೃತಪಟ್ಟಿದ್ದಾರೆ. ಮೂಲಕ ಸೋಂಕಿತರ ಸಂಖ್ಯೆ 7,80,505ಕ್ಕೆ ಏರಿಕೆಯಾಗಿದ್ದು, 11,703 ಜನರು ಈವರೆಗೆ ಸಾವಿಗೀಡಾಗಿದ್ದಾರೆ. ಸದ್ಯ 11,052 ಸಕ್ರಿಯ ಪ್ರಕರಣಗಳಿವೆ ಮತ್ತು 7,57,750 ಜನರು ಗುಣಮುಖರಾಗಿದ್ದಾರೆ.

ರಾಜಸ್ತಾನ ಮತ್ತು ಪಂಜಾಬ್‌ನಲ್ಲಿ ಕ್ರಮವಾಗಿ ಕಳೆದ 24 ಗಂಟೆಗಳಲ್ಲಿ 2,581 ಮತ್ತು 741 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ ರಾಜಸ್ತಾನದಲ್ಲಿ ಒಟ್ಟಾರೆ 2,65,386 ಸೋಂಕಿತರಿದ್ದರೆ, ಪಂಜಾಬ್‌ನಲ್ಲಿ 1,51,538 ಜನರಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT