ಗುರುವಾರ , ಜನವರಿ 21, 2021
21 °C
ಕರಾಚಿ ಸ್ವೀಟ್ಸ್‌ ಮಳಿಗೆ ಹೆಸರು ಬದಲಿಸುವ ವಿಚಾರ

'ಕರಾಚಿ' ಮುಂದೊಂದು ದಿನ ಭಾರತದ ಭಾಗವಾಗಲಿದೆ: ದೇವೇಂದ್ರ ಫಡಣವಿಸ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬಿಜೆಪಿ ಮುಖಂಡ ದೇವೇಂದ್ರ ಫಡಣವಿಸ್‌

ಮುಂಬೈ: ತಮ್ಮ ಪಕ್ಷ 'ಅಖಂಡ ಭಾರತದಲ್ಲಿ' ನಂಬಿಕೆ ಇಟ್ಟಿರುವುದಾಗಿ ಹೇಳಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ದೇವೇಂದ್ರ ಫಡಣವಿಸ್‌, 'ಕರಾಚಿ' ಒಂದು ದಿನ ಭಾರತದ ಭಾಗವಾಗಲಿದೆ ಎಂದಿದ್ದಾರೆ.

ಬಾಂದ್ರಾದಲ್ಲಿರುವ 'ಕರಾಚಿ' ಸಿಹಿ ತಿನಿಸು ಮಳಿಗೆಗಳ ಹೆಸರು ಬದಲಿಸುವಂತೆ ಶಿವಸೇನಾ ಮುಖಂಡ ಅಂಗಡಿ ಮಾಲೀಕರನ್ನು ಒತ್ತಾಯಿಸಿರುವ ಘಟನೆಗೆ ಸಂಬಂಧಿಸಿದಂತೆ ಕೇಳಲಾಗಿರುವ ಪ್ರಶ್ನೆಗೆ ಫಡಣವಿಸ್‌ ಭಾನುವಾರ ಪ್ರತಿಕ್ರಿಯಿಸಿದ್ದಾರೆ.

'ಅಖಂಡ ಭಾರತದಲ್ಲಿ ನಮಗೆ ನಂಬಿಕೆ ಇದೆ. ಕರಾಚಿಯು ಮುಂದೊಂದು ದಿನ ಭಾರತದ ಭಾಗವಾಗಲಿದೆ ಎಂಬ ನಂಬಿಕೆ ಇದೆ' ಎಂದಿದ್ದಾರೆ.

ಫಡಣವಿಸ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ, ಶಿವಸೇನಾ ಸಂಸದ ಸಂಜಯ್‌ ರಾವತ್, 'ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಮೊದಲು ತನ್ನಿ. ಅನಂತರ ನಾವು ಕರಾಚಿ ಹೋಗಬಹುದು' ಎಂದು ಸವಾಲು ಹಾಕಿದ್ದಾರೆ.

ಶಿವಸೇನಾ ಮುಖಂಡ ನಿತಿನ್‌ ಮಧುಕರ್‌ ನಂದಗಾವಂಕರ್‌ ಅವರು ಕರಾಚಿ ಸಿಹಿ ತಿನಿಸು ಮಳಿಗೆಯ ಮಾಲೀಕರಿಗೆ ಮಳಿಗೆಯ ಹೆಸರು ಬದಲಿಸುವಂತೆ ತಾಕೀತು ಮಾಡಿರುವ ವಿಡಿಯೊ ಇತ್ತೀಚೆಗಷ್ಟೇ ವೈರಲ್‌ ಆಗಿತ್ತು. 'ನೀವು ಇದನ್ನು ಮಾಡಲೇಬೇಕು. ನಾವು ನಿಮಗೆ ಸಮಯ ಕೊಡುತ್ತಿದ್ದೇವೆ. ಕರಾಚಿ ಬದಲಾಗಿ ಮರಾಠಿಯಲ್ಲಿ ಯಾವುದೇ ಹೆಸರು ಇರಲಿ' ಎಂದು ನಿತಿನ್ ಮಧುಕರ್ ಹೇಳಿರುವುದು ವಿಡಿಯೊದಲ್ಲಿದೆ ಎಂದು ಎಎನ್‌ಐ ವರದಿ ಮಾಡಿದೆ.

ಆ ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಶಿವಸೇನಾ ಸಂಸದ ಸಂಜಯ್‌ ರಾವತ್, 'ಮಳಿಗೆಯ ಹೆಸರು ಬದಲಿಸಬೇಕೆಂಬುದು ಪಕ್ಷದ ಅಧಿಕೃತ ನಿಲುವಲ್ಲ' ಎಂದಿದ್ದರು.

'ಕರಾಚಿ ಬೇಕರಿ ಮತ್ತು ಕರಾಚಿ ಸ್ವೀಟ್ಸ್‌ ಕಳೆದ 60 ವರ್ಷಗಳಿಂದ ಮುಂಬೈನಲ್ಲಿದೆ. ಪಾಕಿಸ್ತಾನಕ್ಕೂ ಅದಕ್ಕೂ ಸಂಬಂಧವಿಲ್ಲ. ಈಗ ಅವುಗಳ ಹೆಸರು ಬದಲಿಸಬೇಕೆಂದು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಹೆಸರು ಬದಲಿಸಲು ಒತ್ತಾಯಿಸಿರುವುದು ಶಿವಸೇನೆಯ ಅಧಿಕೃತ ನಿಲುವಲ್ಲ' ಎಂದು ಸಂಜಯ್‌ ರಾವತ್ ಟ್ವೀಟಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು