ಶನಿವಾರ, ಡಿಸೆಂಬರ್ 3, 2022
20 °C

ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಈಸುದಾನ್‌ ಗಢವಿ ಕಂಭಾಲಿಯಾದಿಂದ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಗುಜರಾತ್‌ ಮುಖ್ಯಮಂತ್ರಿ ಹುದ್ದೆಯ ಎಎಪಿ ಅಭ್ಯರ್ಥಿ ಈಸುದಾನ್‌ ಗಢವಿ ಅವರು ತಮ್ಮ ತವರು ಜಿಲ್ಲೆ ದೇವಭೂಮಿ ದ್ವಾರಕಾದ ಕಂಭಾಲಿಯಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಭಾನುವಾರ ಘೋಷಿಸಿದ್ದಾರೆ. 

‘ರೈತರು, ನಿರುದ್ಯೋಗಿ ಯುವಜನರು, ಮಹಿಳೆಯರು ಉದ್ಯಮಿಗಳ ಪರವಾಗಿ ಇಷ್ಟು ವರ್ಷ ಧ್ವನಿ ಎತ್ತುತ್ತಿದ್ದ ಈಸುದಾನ್‌ ಗಢವಿ ಅವರು ಕಂಭಾಲಿಯಾದಿಂದ ಸ್ಪರ್ಧಿಸಲಿದ್ದಾರೆ. ಕೃಷ್ಣನ ಪವಿತ್ರ ನಾಡಿಗೆ ಹೊಸ ಮತ್ತು ಉತ್ತಮವಾದ ಮುಖ್ಯಮಂತ್ರಿ ದೊರೆಯಲಿದ್ದಾರೆ’ ಎಂದು ಕೇಜ್ರಿವಾಲ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ. 

ಈ ಟ್ವೀಟ್‌ಗೆ ಗಢವಿ ಅವರು ನೀಡಿದ ಪ್ರತಿಕ್ರಿಯೆ ಹೀಗಿದೆ: ‘ನೀವು ಮತ್ತು ಗುಜರಾತ್‌ನ ಜನರು ಇಟ್ಟಿರುವ ವಿಶ್ವಾಸದಿಂದಾಗಿ ಕೊನೆಯುಸಿರಿನ ತನಕ ಗುಜರಾತ್‌ ಜನರ ಸೇವೆ ಮಾಡುತ್ತೇನೆ’. ಸುದ್ದಿವಾಹಿನಿಯಲ್ಲಿ ನಿರೂಪಕರಾಗಿದ್ದ ಗಢವಿ ಅವರನ್ನು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ನ. 4ರಂದು ಘೋಷಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು