ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ 8ರಂದು ಮಹಾರಾಷ್ಟ್ರ ಬಜೆಟ್‌: ಕುಸಿದ ಆರ್ಥಿಕತೆ–ನಿರೀಕ್ಷೆಗಳ ಒತ್ತಡ

Last Updated 7 ಮಾರ್ಚ್ 2021, 11:54 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌–19 ಪಿಡುಗಿನಿಂದಾಗಿ ಕುಸಿದ ಆರ್ಥಿಕತೆ, ಆದಾಯ ಸಂಗ್ರಹದಲ್ಲಿ ಇಳಿಕೆ, ಏರುತ್ತಿರುವ ಸಾಲದ ಹೊರೆಯ ನಡುವೆಯೇ ಮಹಾರಾಷ್ಟ್ರದ ಮಹಾವಿಕಾಸ್‌ ಆಘಾಡಿ (ಎಂವಿಎ) ಸರ್ಕಾರ ಮಾರ್ಚ್‌ 8ರಂದು ತನ್ನ ಎರಡನೇ ಬಜೆಟ್‌ ಮಂಡಿಸಲಿದೆ.

ಸಂಪನ್ಮೂಲ ಕ್ರೋಡೀಕರಣ, ಆರೋಗ್ಯ ಕ್ಷೇತ್ರ, ಸಮಾಜ ಕಲ್ಯಾಣಕ್ಕೆ ಹೆಚ್ಚು ಅನುದಾನ ನೀಡಬೇಕಾದ ಒತ್ತಡವನ್ನೂ ಮೈತ್ರಿ ಸರ್ಕಾರ ಎದುರಿಸುತ್ತಿದೆ.

ಪೆಟ್ರೋಲ್‌, ಡೀಸೆಲ್‌ ಹಾಗೂ ಎಲ್‌ಪಿಜಿ ದರಗಳು ಹೆಚ್ಚುತ್ತಿರುವ ಈ ಸಮಯದಲ್ಲಿ, ಜನರಿಗೆ ಯಾವ ರೀತಿಯ ಪರಿಹಾರ ನೀಡುವರು ಎಂಬ ನಿರೀಕ್ಷೆಯ ಭಾರವೂ ಬಜೆಟ್‌ ಮಂಡಿಸುತ್ತಿರುವ ಉಪ ಮುಖ್ಯಮಂತ್ರಿ ಆಗಿರುವ ಹಣಕಾಸು ಸಚಿವ ಅಜಿತ್‌ ಪವಾರ್‌ ಮೇಲಿದೆ.

ರಾಜ್ಯದ ಆರ್ಥಿಕತೆ ಬೆಳವಣಿಗೆ ಶೇ (–) 8ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಚೆ ಹೇಳುತ್ತದೆ. ಕೃಷಿ ಕ್ಷೇತ್ರದ ಪ್ರಗತಿ ದರ ಶೇ 11.7ರಷ್ಟು ಇರಲಿದ್ದರೆ, ಕೈಗಾರಿಕೆ ಕ್ಷೇತ್ರದ ಬೆಳವಣಿಗೆ ಶೇ (–) 11.3, ಸೇವಾ ಕ್ಷೇತ್ರದ ಪ್ರಗತಿ ಶೇ (–) 9ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT