ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದೊಳಗೆ ಉಗ್ರರನ್ನು ನುಸುಳಿಸಲು ಪಾಕ್ ದುಸ್ಸಾಹಸ

Last Updated 9 ಡಿಸೆಂಬರ್ 2020, 11:20 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನವು ಗಡಿಯಲ್ಲಿ ಗುಂಡಿನ ದಾಳಿ ಮೂಲಕ ಭಾರತೀಯ ಸೇನೆಯನ್ನು ನಿರಂತರವಾಗಿ ಪ್ರಚೋದಿಸುತ್ತಿದೆ. ಭಾರತದೊಳಗೆ ಉಗ್ರರನ್ನು ನುಸುಳಿಸಲು ಪಾಕ್ ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದು, ಈ ವರ್ಷ ಗಡಿಯಾಚೆಗಿನ ಗುಂಡಿನ ಕಾಳಗದಲ್ಲಿ ಭಾರಿ ಏರಿಕೆಯಾಗಿದೆ. ಭಯೋತ್ಪಾದಕ ಒಳನುಸುಳುವಿಕೆ ಕಳೆದ ವರ್ಷಕ್ಕಿಂತಲೂ ಎರಡು ಪಟ್ಟು ಹೆಚ್ಚಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೇಳಿದೆ.

ಜಮ್ಮುವಿನಲ್ಲಿ ನಿಯೋಜಿಸಲಾಗಿರುವ ಹಿರಿಯ ಅಧಿಕಾರಿಗಳ ಪ್ರಕಾರ, ಭಯೋತ್ಪಾದಕರನ್ನು ಒಳನುಸುಳುವ ಮೂಲಕ ಭಾರತೀಯ ಭದ್ರತಾ ಪಡೆಯ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಬಿಎಸ್‌ಎಫ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಪಾಕಿಸ್ತಾನವು ಈ ವರ್ಷ ಅಕ್ಟೋಬರ್ ವರೆಗೆ ಗಡಿಯಲ್ಲಿ 314 ಗುಂಡಿನ ದಾಳಿಗಳಲ್ಲಿ ಭಾಗಿಯಾಗಿದೆ. ಇದಕ್ಕೆ ವ್ಯತರಿಕ್ತವಾಗಿ ಕಳೆದ ವರ್ಷ ಜಮ್ಮು ಗಡಿಯಲ್ಲಿ ಇಂತಹ ಘಟನೆಗಳ ಸಂಖ್ಯೆ 185 ಆಗಿತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ ಫೆಬ್ರವರಿಯಲ್ಲಿ ಮಾತ್ರ ಪಾಕಿಸ್ತಾನವು 36 ಗುಂಡಿನ ದಾಳಿಗಳಲ್ಲಿ ಭಾಗಿಯಾಗಿದೆ. ಕಳೆದ ಫೆಬ್ರವರಿಯಲ್ಲಿ ಈ ಸಂಖ್ಯೆ 23 ಆಗಿತ್ತು.

ಈ ವರ್ಷ ಜೂನ್‌ನಿಂದ ಪಾಕಿಸ್ತಾನವು ಗಡಿ ರೇಖೆಯ ಗುಂಡಿನ ದಾಳಿಯ ಮೂಲಕ ನಿರಂತರವಾಗಿ ಭಾರತೀಯ ಸೈನಿಕರನ್ನು ಹಾಗೂ ಸಾರ್ವಜನಿಕರನ್ನು ಗುರಿಯಾಗಿಸಿದ್ದು, ಬಿಎಸ್‌ಎಫ್ ಪ್ರತ್ಯುತ್ತರ ನೀಡುತ್ತಿದೆ ಎಂದು ಅಂಕಿಅಂಶಗಳು ತಿಳಿಸಿದೆ.

ಜೂನ್‌ನಲ್ಲಿ ಒಟ್ಟು 36 ಘಟನೆಗಳು ವರದಿಯಾಗಿದ್ದರು. ಕಳೆದ ವರ್ಷ ಇದೇ ತಿಂಗಳಲ್ಲಿ ಒಂಬತ್ತು ಘಟನೆಗಳು ನಡೆದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಜುಲೈ ತಿಂಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಜುಲೈ ತಿಂಗಳಲ್ಲಿ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದೆಗೆಟ್ಟಿದ್ದು, 65ಕ್ಕೆ ಬಂದು ತಲುಪಿದೆ. ಕಳೆದ ವರ್ಷ ಈ ಸಂಖ್ಯೆ 47 ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT