ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1 ಸಾವಿರ ಕೋಟಿ ಮೌಲ್ಯದ ಹೆರಾಯಿನ್‌ ವಶ: ಇಬ್ಬರ ಬಂಧನ

Last Updated 22 ಜನವರಿ 2021, 9:58 IST
ಅಕ್ಷರ ಗಾತ್ರ

ನವದೆಹಲಿ: ಮಹತ್ವದ ಕಾರ್ಯಾಚರಣೆ ನಡೆಸಿರುವ ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ), ಶ್ರೀಲಂಕಾದ ಇಬ್ಬರನ್ನು ಬಂಧಿಸಿ ₹1,000 ಕೋಟಿ ಮೌಲ್ಯದ 100 ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

ಚೆನ್ನೆನಲ್ಲಿ ಎಂಎಂಎಂ ನವಾಸ್‌ ಮತ್ತು ಮೊಹಮ್ಮದ್‌ ಅಫ್ನಾಸ್‌ ಅವರನ್ನು ಬಂಧಿಸಲಾಗಿದೆ. ತಮ್ಮ ನೈಜ ಗುರುತು ಮುಚ್ಚಿಟ್ಟು ಇಬ್ಬರು ಆರೋಪಿಗಳು ಚೆನ್ನೈನಲ್ಲಿ ವಾಸಿಸುತ್ತಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಇವರ ಡ್ರಗ್ಸ್‌ ಜಾಲ ಪಾಕಿಸ್ತಾನ, ಅಫ್ಗಾನಿಸ್ತಾನ, ಇರಾನ್‌, ಶ್ರೀಲಂಕಾ, ಮಾಲ್ಡೀವ್ಸ್‌ ಮತ್ತು ಆಸ್ಟ್ರೇಲಿಯಾದವರೆಗೆಹಬ್ಬಿದೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಶ್ರೀಲಂಕಾದ ಮಾದಕ ವಸ್ತು ನಿಗ್ರಹ ದಳಗಳು ಜಂಟಿಯಾಗಿ 2020ರ ನವೆಂಬರ್‌ನಲ್ಲಿ ’ಶೆನಯಾ ದುವಾ’ ಹೆಸರಿನ ಹಡಗಿನಲ್ಲಿ ವಶಪಡಿಸಿಕೊಂಡಿದ್ದ ಹೆರಾಯಿನ್‌ ಪ್ರಕರಣದ ಕುರಿತು ತನಿಖೆ ಕೈಗೊಂಡಾಗ ಈ ಹೊಸ ಪ್ರಕರಣ ಪತ್ತೆಯಾಗಿದೆ.

‘ಈ ಇಬ್ಬರು ಆರೋಪಿಗಳು ಪಾಕಿಸ್ತಾನ ಮತ್ತು ಇರಾನ್‌ನಿಂದ ಬರುವ ಡ್ರಗ್ಸ್‌ ವಿತರಣೆ ಮಾಡುತ್ತಿದ್ದರು. ಇಬ್ಬರನ್ನು ಪತ್ತೆ ಮಾಡುವ ಕಾರ್ಯ ಆರಂಭಿಸಿದಾಗ ಶ್ರೀಲಂಕಾದಿಂದ ಪರಾರಿಯಾಗಿ ಚೆನ್ನೈಗೆ ಬಂದಿದ್ದರು’ ಎಂದು ಎನ್‌ಸಿಬಿ ಉಪ ನಿರ್ದೇಶಕ ಕೆ.ಪಿ.ಎಸ್‌. ಮಲ್ಹೋತ್ರಾ ತಿಳಿಸಿದ್ದರೆ.

‘ನವಾಸ್‌ ವಿರುದ್ಧ ಇಂಟರ್‌ಪೋಲ್‌ ಬಂಧನದ ವಾರಂಟ್‌ ಹೊರಡಿಸಲಾಗಿದೆ ಎನ್ನುವುದು ಸಹ ತಿಳಿದು ಬಂದಿದೆ’ ಎಂದು ತಿಳಿಸಿದ್ದಾರೆ.

ಅಫ್ಗಾನಿಸ್ತಾನ, ಪಾಕಿಸ್ತಾನ ಮತ್ತು ಇರಾನ್‌ನಿಂದ ಉತ್ಪಾದನೆಯಾಗುವ ಹೆರಾಯಿನ್‌ ಅನ್ನು ಮೀನುಗಾರಿಕೆ ಹಡಗುಗಳ ಮೂಲಕ ರವಾನೆ ಮಾಡಲಾಗುತ್ತಿತ್ತು. ಬಳಿಕ, ಅಲ್ಲಿಂದ ವಿವಿಧೆಡೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT