ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಜ್ವರ ಭೀತಿ: ಜ.26ರವರೆಗೆ ಕೆಂಪುಕೋಟೆ ಪ್ರವೇಶ ನಿಷೇಧ

Last Updated 19 ಜನವರಿ 2021, 11:08 IST
ಅಕ್ಷರ ಗಾತ್ರ

ನವದೆಹಲಿ‌: ಇಲ್ಲಿನ ಐತಿಹಾಸಿಕ ಕೆಂಪುಕೋಟೆ ಸಮೀಪದಲ್ಲಿ ಸತ್ತು ಬಿದ್ದಿದ್ದ ಕಾಗೆ ಮಾದರಿಯಲ್ಲಿ ‘ಹಕ್ಕಿ ಜ್ವರ‘ ಸೋಂಕು ದೃಢಪಟ್ಟ ಕಾರಣ, ಜನವರಿ 26ರವರಗೆ ಈ ಸ್ಮಾರಕಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಕೆಲವು ದಿನಗಳ ಹಿಂದೆ ಕೆಂಪು ಕೋಟೆಯ ಸಮೀಪದಲ್ಲಿ 15 ಕಾಗೆಗಳು ಸತ್ತುಬಿದ್ದಿದ್ದವು. ಅವುಗಳ ಮಾದರಿಯನ್ನು ಜಲಂಧರ್ ಮೂಲದ ಪ್ರಯೋಗಾಲಯಕ್ಕೆ ಕಳಹಿಸಲಾಗಿತ್ತು ಎಂದು ದೆಹಲಿಯ ಪಶುವೈದ್ಯಕೀಯ ವಿಭಾಗದ ನಿರ್ದೇಶಕ ರಾಕೇಶ್ ಸಿಂಗ್ ತಿಳಿಸಿದ್ದಾರೆ.

ಸತ್ತೆ ಕಾಗೆ ಮಾದರಿಯಲ್ಲಿ ಹಕ್ಕಿ ಜ್ವರದ ಸೋಂಕು ದೃಢಪಟ್ಟ ಕಾರಣ, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಶನಿವಾರದಂದು ದೆಹಲಿಯ ಮೃಗಾಲಯದಲ್ಲಿ ಸತ್ತ ಗೂಬೆಯ ಮಾದರಿಯಲ್ಲಿ ಹಕ್ಕಿ ಜ್ವರದ ಸೋಂಕು ತಗಲಿರುವುದು ದೃಢಪಟ್ಟಿತ್ತು. ಕಳೆದ ವಾರ ದೆಹಲಿಯ ಉದ್ಯಾನಗಳಲ್ಲಿನ ಬಾತುಕೋಳಿ, ಕಾಗೆಗಳ ಮಾದರಿಯಲ್ಲಿ ಹಕ್ಕಿ ಜ್ವರದ ಸೋಂಕು ಪತ್ತೆಯಾದ ಕಾರಣ, ಪಶ್ಚಿಮ ದೆಹಲಿಯಲ್ಲಿರುವ ಗಾಜಿಪುರದ ಕೋಳಿ ಮಾರುಕಟ್ಟೆಯಿಂದ ಹತ್ತು ದಿನಗಳ ಕಾಲ ಸಂಸ್ಕರಿಸಿದ ಚಿಕನ್‌ ಖರೀದಿಸಿ ತರುವುದನ್ನು ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT