ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ವಿಧಾನಸಭೆ ಚುನಾವಣೆ: ಕಾಂಗ್ರೆಸ್‌ ಸೇರಿದ ಶರದ್ ಯಾದವ್ ಪುತ್ರಿ ಸುಭಾಷಿಣಿ

Last Updated 14 ಅಕ್ಟೋಬರ್ 2020, 18:22 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ರಾಜಕಾರಣಿ ಶರದ್ ಯಾದವ್ ಅವರ ಪುತ್ರಿ,ಸಾಮಾಜಿಕ ಕಾರ್ಯಕರ್ತೆ ಸುಭಾಷಿಣಿ ಯಾದವ್ ಅವರು ಬುಧವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಮಹಾಮೈತ್ರಿ ತ್ಯಜಿಸಿದ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದಿಂದ ಹೊರಬಂದಶರದ್ ಯಾದವ್, ಎರಡು ವರ್ಷಗಳ ಹಿಂದೆ ಲೋಕತಾಂತ್ರಿಕ ಜನತಾದಳ ಪಕ್ಷ ಕಟ್ಟಿದ್ದರು. ನಿತೀಶ್ ಅವರು ಆರ್‌ಜೆಡಿ, ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಜತೆ ಕೈಜೋಡಿಸಿದ್ದು ಯಾದವ್ ಅವರಿಗೆ ಸರಿಬಂದಿರಲಿಲ್ಲ.

‘ಕಾಂಗ್ರೆಸ್ ಸೇರಲು ಅವಕಾಶ ನೀಡಿದ ಸೋನಿಯಾ ಗಾಂಧಿ, ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಧನ್ಯವಾದ. ಶರದ್ ಯಾದವ್ ಅವರು ಬಿಹಾರ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿಲ್ಲ. ಅವರ ಆರೋಗ್ಯ ಚೆನ್ನಾಗಿಲ್ಲ. ಅವರು ‘ಮಹಾಘಟಬಂಧನ’ವನ್ನು ಸದಾ ಬೆಂಬಲಿಸುತ್ತಿದ್ದರು. ಈ ಜವಾಬ್ದಾರಿ ನನ್ನ ಮೇಲಿದೆ’ ಎಂದು ಸುಭಾಷಿಣಿ ಹೇಳಿದ್ದಾರೆ.

ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಮದನ್ ಮೋಹನ್ ಝಾ ಮತ್ತು ಎಐಸಿಸಿ ಕಾರ್ಯದರ್ಶಿ (ಬಿಹಾರ) ದೇವೇಂದ್ರ ಯಾದವ್ ಸುಭಾಷಿಣಿ ಮತ್ತು ಕಾಳಿ ಪಾಂಡೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಇದಕ್ಕೂಮುನ್ನ ತಮ್ಮ ತಂದೆ ಆಸ್ಪತ್ರೆ ಸೇರಿರುವ ಕುರಿತು ಸುಭಾಷಿಣಿ ನೀಡಿದ್ದ ಹೇಳಿಕೆಯು ಶರದ್ ಯಾದವ್ ಅವರ ರಾಜಕೀಯ ನಡೆಯ ಬಗ್ಗೆ ಕುತೂಹಲ ಹುಟ್ಟುಹಾಕಿತ್ತು. ‘ತಮ್ಮ ಕುಟುಂಬದ ಜತೆ ನಿರಂತರವಾಗಿ ಸಂಪರ್ಕದಲ್ಲಿರುವ ಹಾಗೂ ಶರದ್ ಯಾದವ್ ಅವರ ಆರೋಗ್ಯದ ಮಾಹಿತಿ ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಸುಭಾಷಿಣಿ ಹೇಳಿಕೆ ನೀಡಿದ್ದರು.

ಎಲ್‌ಜೆಪಿ ಮುಖಂಡ ಹಾಗೂ ಮಾಜಿ ಸಂಸದ ಎಂ.ಕೆ. ಕಾಳಿಪ್ರಸಾದ್, ನಾನು ನನ್ನ ಮನೆಗೆ ಮರಳಿದ ಭಾವನೆ ಉಂಟಾಗುತ್ತಿದೆ. ರಾಜೀವ್‌ಗಾಂಧಿ ಅವರು ಪ್ರಧಾನಿಯಾಗಿದ್ದಾಗ ನಾನು ಪಕ್ಷೇತರನಾಗಿ ಲೋಕಸಭೆಗೆ ಆಯ್ಕೆಯಾಗಿದ್ದೆ. ಇದು ನನ್ನ ಹಳೆಯ ಮನೆ. ಇಲ್ಲಿಗೆ ವಾಪಸಾಗುತ್ತಿರುವುದು ಖುಷಿಯ ವಿಚಾರ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

1980ರಲ್ಲಿ ಪಾಂಡೆ ಅವರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 1984ರಲ್ಲಿ ಗೋಪಾಲ್‌ಗಂಜ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಶತ್ರುಘ್ನ ಪುತ್ರ, ಶರದ್ ಪುತ್ರಿಗೆ ಟಿಕೆಟ್?

ಪಟ್ನಾ: ಮಾಜಿ ಸಂಸದ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ ಸಿನ್ಹಾ ಮತ್ತು ಶರದ್ ಯಾದವ್ ಅವರ ಪುತ್ರಿ ಸುಭಾಷಿಣಿ ಯಾದವ್ ಅವರನ್ನು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.

ಸುಭಾಷಿಣಿ ಯಾದವ್ ಅವರಿಗೆ ಮಾಧೇಪುರದ ಬಿಹಾರ್‌ಗಂಜ್ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವ ಸಾಧ್ಯತೆಯಿದೆ. ಲವ ಸಿನ್ಹಾ ಅವರು ಪಟ್ನಾದ ಬಂಕೀಪುರಕ್ಷೇತ್ರದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಲವ ಅವರು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಲವ ಅವರು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ, ಆ ಸಿನಿಮಾಗಳು ಯಶಸ್ಸು ಕಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT