ಬುಧವಾರ, ಆಗಸ್ಟ್ 17, 2022
26 °C

58 ನಿಮಿಷಗಳಲ್ಲಿ 46 ಭಕ್ಷ್ಯಗಳು: ವಿಶ್ವದಾಖಲೆ ಬರೆದ ಬಾಲಕಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Cooking world record

ಚೆನ್ನೈ: ತಮಿಳುನಾಡು ಮೂಲದ ಬಾಲಕಿಯೊಬ್ಬಳು 58 ನಿಮಿಷಗಳಲ್ಲಿ 46 ತರಹದ ತಿಂಡಿ ತಿನಿಸು ತಯಾರಿಸುವ ಮೂಲಕ ಪಾಕಶಾಸ್ತ್ರದ ಯುನಿಕೋ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ ಎಂದು ಎಎನ್ಐ ಟ್ವೀಟ್ ಮಾಡಿದೆ.

‘ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಅಡುಗೆ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ನನ್ನ ತಾಯಿ ನನಗೆ ಅಡುಗೆ ಮಾಡುವುದನ್ನ ಹೇಳಿಕೊಟ್ಟರು. ಆ ಮೂಲಕ ನಾನು ಈ ಹೊಸ ಮೈಲಿಗಲ್ಲು ಸಾಧಿಸಿರುವುದು ಹೆಚ್ಚು ಸಂತಸವಾಗುತ್ತಿದೆ’ ಎಂದು ವಿಶ್ವ ದಾಖಲೆ ಬರೆದಿರುವ ಬಾಲಕಿ ಎಸ್.ಎನ್. ಲಕ್ಷ್ಮೀ ಸಾಯಿ ಶ್ರೀ ಹೇಳಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ನನ್ನ ಮಗಳು ಅಡುಗೆ ಮಾಡುವುದನ್ನು ಕಲಿಯಲು ಆರಂಭಿಸಿದಳು. ಅವಳು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾಳೆ, ಹೀಗಾಗಿ, ಅವರ ತಂದೆ ವಿಶ್ವ ದಾಖಲೆ ಪ್ರಯತ್ನ ಮಾಡುವಂತೆ ಸಲಹೆ ನೀಡಿದ್ದರು ಎಂದು ಲಕ್ಷ್ಮೀ ತಾಯಿ ಎನ್. ಕಲೈಮಗಳ್ ತಿಳಿಸಿದ್ದಾರೆ.

"ನಾನು ತಮಿಳುನಾಡಿನ ಸಾಂಪ್ರದಾಯಿಕ ಅಡುಗೆಗಳನ್ನು ಮಾಡುತ್ತೇನೆ. ಲಾಕ್ ಡೌನ್ ಸಂದರ್ಭ ಬಹುತೇಕ ಸಮಯವನ್ನು ನನ್ನ ಮಗಳು ನನ್ನ ಜೊತೆ ಅಡುಗೆ ಮನೆಯಲ್ಲಿ ಕಳೆದಿದ್ದಾಳೆ. ಅಡುಗೆ ಬಗ್ಗೆ ಅವಳ ಆಸಕ್ತಿ ಕುರಿತಂತೆ ನಾನು ನನ್ನ ಪತಿ ಜೊತೆ ಚರ್ಚಿಸಿದಾಗ, ಪಾಕಶಾಸ್ತ್ರ ವಿಭಾಗದಲ್ಲಿ ವಿಶ್ವದಾಖಲೆಗೆ ಪ್ರಯತ್ನಿಸುವಂತೆ ಸಲಹೆ ನೀಡಿದರು" ಎನ್ನುತ್ತಾರೆ ಕಲೈಮಗಳ್.

" ಪಾಕಶಾಸ್ತ್ರದ ದಾಖಲೆಗಳ ಬಗ್ಗೆ ಅಧ್ಯಯನ ನಡೆಸಿದ ಲಕ್ಷ್ಮೀ ತಂದೆಗೆ ಕೇರಳದ 10 ವರ್ಷದ ಬಾಲಕಿ ಸಾನ್ವಿ 30 ಅಡುಗೆ ಮಾಡಿದ ದಾಖಲೆ ಕಣ್ಣಿಗೆ ಬಿದ್ದಿದೆ. ತನ್ನ ಮಗಳು ಈ ದಾಖಲೆ ಮುರಿಯಬೇಕು ಎಂದು ನಿಶ್ಚಯಿಸಿದ ಅವರ ತಂದೆ ಈ ಪ್ರಯತ್ನಕ್ಕೆ ಪ್ರೇರೆಣೆಯಾದರು" ಎಂದು ಲಕ್ಷ್ಮೀ ತಾಯಿ ಕಲೈಮಗಳ್ ಹೇಳುತ್ತಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು