ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಲ್ಲಿ ಒಂದೇ ದಿನ 33 ಓಮೈಕ್ರಾನ್‌ ಪ್ರಕರಣಗಳು ಪತ್ತೆ

Last Updated 23 ಡಿಸೆಂಬರ್ 2021, 5:12 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನಲ್ಲಿ ಗುರುವಾರ 33 ಓಮೈಕ್ರಾನ್‌ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ನೆರೆಯ ರಾಜ್ಯವು ಓಮೈಕ್ರಾನ್‌ ಪ್ರಕರಣಗಳಲ್ಲಿ ದೊಡ್ಡ ಜಿಗಿತ ಕಂಡಿದೆ.

ಕೋವಿಡ್‌ಗೆ ಒಳಗಾದವರಿಂದ ಸಂಗ್ರಹಿಸಿದ್ದ ಮಾದರಿಗಳನ್ನು ವಂಶವಾಹಿ ಅಧ್ಯಯನಕ್ಕೆ (ಜಿನೊಮ್‌ ಸೀಕ್ವೆನ್ಸ್‌) ಕಳುಹಿಸಲಾಗಿತ್ತು. ಈ ವೇಳೆ 33 ಮಂದಿಗೆ ಕೊರೊನಾದ ರೂಪಾಂತರಿ ತಳಿ ಓಮೈಕ್ರಾನ್‌ನ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಸಚಿವ ಮ. ಸುಬ್ರಮಣಿಯನ್‌ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಈ 33 ಪ್ರಕರಣಗಳೊಂದಿಗೆ ತಮಿಳುನಾಡಿನ ಒಟ್ಟಾರೆ ಓಮೈಕ್ರಾನ್‌ ಸೋಂಕು ಪ್ರಕರಣಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT