ಶನಿವಾರ, ಜೂನ್ 25, 2022
25 °C

ಯಾವುದೇ ಮಸೀದಿ ಉತ್ಖನನ ನಡೆದರೂ ಅಲ್ಲಿ ಶಿವಲಿಂಗ ಸಿಗುತ್ತಿದೆ: ಬಿಜೆಪಿ ಮುಖ್ಯಸ್ಥ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ANI TWEET IMAGE

ಹೈದರಾಬಾದ್: ದೇಶದ ಯಾವುದೇ ಮಸೀದಿಯ ಉತ್ಖನನ ಕಾರ್ಯ ನಡೆಸಿ ನೋಡಿದರೂ ಅಲ್ಲಿ ಶಿವಲಿಂಗ ಪತ್ತೆಯಾಗುತ್ತಿದೆ ಎಂದು ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.

ನಾವು ತೆಲಂಗಾಣದಲ್ಲಿರುವ ಎಲ್ಲ ಮಸೀದಿಗಳ ಉತ್ಖನನ ಕಾರ್ಯ ನಡೆಸುತ್ತೇವೆ ಎಂದು ಓವೈಸಿ ಅವರಿಗೆ ಸವಾಲು ಹಾಕುತ್ತೇನೆ ಎಂದಿದ್ದಾರೆ.

ಮಸೀದಿಯಲ್ಲಿ ಹೆಣ ಸಿಕ್ಕರೆ ಅದು ನಿಮ್ಮದು. ಅದರ ಬದಲು, ಶಿವಲಿಂಗ ಸಿಕ್ಕರೆ ಅದು ನಮ್ಮದು. ನೀವು ಈ ಸವಾಲಿಗೆ ಸಿದ್ಧರಿದ್ದೀರಾ ಎಂದು ಬಂಡಿ ಪ್ರಶ್ನಿಸಿದ್ದಾರೆ.

ರಾಮ ರಾಜ್ಯ ಬಂದರೆ, ನಾವು ಉರ್ದು ಭಾಷೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತೇವೆ. ಮದರಸಾಗಳಲ್ಲಿ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ. ಅದರಿಂದಾಗಿ ದೇಶದಲ್ಲಿ ಬಾಂಬ್ ಸ್ಫೋಟಗಳು ನಡೆಯುತ್ತಿವೆ ಎಂದು ಬಂಡಿ ಹೇಳಿದ್ದಾರೆ.

ಬಿಜೆಪಿ ನಾಯಕರ ಈ ಹೇಳಿಕೆ ಕುರಿತು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು