ಮಂಗಳವಾರ, ಜುಲೈ 5, 2022
21 °C

ದೇಶದ 33 ಜನರಿಗೆ ಓಮೈಕ್ರಾನ್‌ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದೆಹಲಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ರೂಪಾಂತರಿ ತಳಿ ‘ಓಮೈಕ್ರಾನ್‌’ ಸೋಂಕು ತಗುಲಿರುವುದು ದೃಢವಾಗಿದೆ. ಇದರಿಂದಾಗಿ, ದೇಶದಲ್ಲಿ ಓಮೈಕ್ರಾನ್‌ ಸೋಂಕಿತರ ಸಂಖ್ಯೆ 33ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಮೂರು ವರ್ಷದ ಮಗು ಸೇರಿ ಏಳು ಮಂದಿಗೆ ಶುಕ್ರವಾರ ಓಮೈಕ್ರಾನ್‌ ಸೋಂಕು ದೃಢಪಟ್ಟಿತ್ತು. 

ಮಹಾರಾಷ್ಟ್ರದಿಂದ ವರದಿ ಆಗಿರುವ ಏಳು ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಮುಂಬೈನಲ್ಲಿ ಪತ್ತೆ ಆಗಿವೆ ಮತ್ತು ನಾಲ್ಕು ಪ್ರಕರಣಗಳು ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್‌ ಪ್ರದೇಶದಲ್ಲಿ ಪತ್ತೆ ಆಗಿವೆ. ಮುಂಬೈನ ಮೂವರು ಸೋಂಕಿತರು ತಾಂಜಾನಿಯಾ, ಬ್ರಿಟನ್‌ ಮತ್ತು ದಕ್ಷಿಣ ಆಫ್ರಿಕದಿಂದ ಇತ್ತೀಚೆಗೆ ಮರಳಿದ್ದರು. 

ಓಮೈಕ್ರಾನ್‌ ಸೋಂಕಿತ ದೆಹಲಿಯ 35 ವರ್ಷ ವಯಸ್ಸಿನ ವ್ಯಕ್ತಿ ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು