ಶುಕ್ರವಾರ, ಮಾರ್ಚ್ 24, 2023
31 °C

ಮಧ್ಯಂತರ ಚುನಾವಣೆ ಹೇಳಿಕೆ: ಉದ್ಧವ್‌ ಠಾಕ್ರೆ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಏಕನಾಥ ಶಿಂದೆ-ದೇವೇಂದ್ರ ಫಡಣವೀಸ್‌ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ ಎಂಬ ಹೇಳಿಕೆ ನಡುವೆಯೂ ಮಹಾರಾಷ್ಟ್ರ ಮಧ್ಯಂತರ ಚುನಾವಣೆಗೆ ಹೋಗುತ್ತಿದೆ ಎಂಬ ತಮ್ಮ ಹೇಳಿಕೆಯನ್ನು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಭಾನುವಾರ ಪುನರುಚ್ಚರಿಸಿದರು.

‘ಇದು ತುಂಬಾ ಸ್ಪಷ್ಟವಾಗಿದೆ. ಮಹಾರಾಷ್ಟ್ರವು ಮಧ್ಯಂತರ ಚುನಾವಣೆಗೆ ಸಾಗುತ್ತಿದೆ. ನಾನು ಹೇಳಿದ್ದಕ್ಕೆ ಕೆಲವು ಆಧಾರಗಳಿವೆ’ ಎಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಬಂಗಲೆ ಮಾತೋಶ್ರೀಯಲ್ಲಿ ಠಾಕ್ರೆ ಸುದ್ದಿಗಾರರಿಗೆ ತಿಳಿಸಿದರು.

‘ಇದ್ದಕ್ಕಿದ್ದಂತೆ ಮಹಾರಾಷ್ಟ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರೀತಿ ನೋಡುತ್ತೀರಿ. ಅವರು ರಾಜ್ಯಕ್ಕೆ ಎರಡು ಲಕ್ಷ ಕೋಟಿ ರೂಪಾಯಿ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಇವು ಗಾಳಿಯಲ್ಲಿವೆ. ಆದರೆ, ನೆಲದ ಮೇಲಿನ ಯೋಜನೆಗಳು ಗುಜರಾತ್ ಗೆ ಹೋಗುತ್ತವೆ’ ಎಂದು ಠಾಕ್ರೆ ಹೇಳಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಸಿದ್ಧರಾಗುವಂತೆ ಶನಿವಾರ ಠಾಕ್ರೆ ಅವರು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಹೇಳಿದ್ದರು.

ಬಿಜೆಪಿ ಮತ್ತು ಬಂಡಾಯ ಶಿವಸೇನಾ ಬಣವು ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಿದೆ ಮತ್ತು ಗುಂಪುನ್ನು ಒಟ್ಟಿಗೆ ಇರಿಸಲು ಠಾಕ್ರೆ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು