ಬುಧವಾರ, ಮಾರ್ಚ್ 29, 2023
25 °C

ಜಾತಿ ರಾಜಕಾರಣ ತೊಲಗಬೇಕು : ಮಂತ್ರಾಲಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಭಾರತ ಜಾತ್ಯತೀತ ದೇಶವಾಗಿದೆ. ಜಾತಿ ರಾಜಕಾರಣ ತೊಲಗಬೇಕು. ಇಂತಹವರೇ ಪ್ರಮುಖ ಹುದ್ದೆ ಅಲಂಕರಿಸಬೇಕು ಎಂದು ಸಂವಿಧಾನದಲ್ಲಿ ಯಾವುದೇ ನಿರ್ಬಂಧ ಇಲ್ಲ. ಅಂಬೇಡ್ಕರ್ ಅವರು ಎಲ್ಲ ಜನಾಂಗಕ್ಕೂ ಸರಿಯಾದ ಅವಕಾಶ ನೀಡಿದ್ದಾರೆ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಮಂಗಳವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯ ಇನ್ನೊಂದು ಸಮಾಜದ ವಿರೋಧಿಯಲ್ಲ. ಎಲ್ಲರ ಕ್ಷೇಮ ಕೋರುವ ಸಮಾಜವಾಗಿದೆ ಎಂದರು.

ಒಂದು ಸಮುದಾಯದವರು ಯಾವುದೇ ಮುಖ್ಯ ಪದವಿ ಅಲಂಕರಿಸಬಾರದು. ಅದರಿಂದ ತೊಂದರೆಯಾಗುತ್ತದೆ ಎಂಬ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ಬ್ರಾಹ್ಮಣ ಸಮುದಾಯವನ್ನು ಯಾರೇ ನಿಂದಿಸಿದರೂ ಖಂಡಿಸುತ್ತೇವೆ. ಯಾರೇ ಆಗಲಿ, ಯಾವ ಸಮುದಾಯವನ್ನೂ ತೆಗಳಬಾರದು ಎಂದು ಸಲಹೆ ನೀಡಿದರು.

ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಜನರು, ಪಕ್ಷಗಳು ನಿರ್ಧರಿಸುತ್ತವೆ. ಒಬ್ಬ ವ್ಯಕ್ತಿ ಇಂತಹವರು ಮುಖ್ಯಮಂತ್ರಿಯಾಗಬಾರದು ಎಂದು ಹೇಳುವುದು ಸರಿಯಲ್ಲ. ಹಾಗೆ ಹೇಳುವುದು ಪ್ರಜಾಪ್ರಭುತ್ವ ಆಗಲ್ಲ, ನಿರಂಕುಶವಾಗುತ್ತದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

 ಹಿಂದುತ್ವ ವಿರೋಧಿಸುವುದು ಅರ್ಥಹೀನವಾಗಿದೆ. ಸಿದ್ದರಾಮಯ್ಯ ಅವರು ಹಿಂದೂ ಎನ್ನುತ್ತಾರೆ. ಆದರೆ, ಹಿಂದುತ್ವ ಒಪ್ಪುವುದಿಲ್ಲ. ತಾಯಿ ಅನ್ನೋದು, ನಂತರ ಟೀಕಿಸುವುದು ಅಪಹಾಸ್ಯವಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು