ಮಂಗಳವಾರ, ಮಾರ್ಚ್ 2, 2021
21 °C

ಸಂಪುಟ ವಿಸ್ತರಣೆ| ನಾಳೆ ಹಿರಿಯರ ಜತೆ ಚರ್ಚೆ ನಡೆಸಿ ಖಾತೆ ಹಂಚಿಕೆ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಂಗಳವಾರ ಸಂಜೆ ಹಿರಿಯ ಸಚಿವರ ಜತೆ ಚರ್ಚೆ ನಡೆಸಿ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಇವತ್ತು ಸಂಜೆ ಉಡುಪಿಗೆ ಹೊರಟಿದ್ದೇನೆ. ಮಂಗಳವಾರ ಮಧ್ಯಾಹ್ನ ವಾ‍ಪಾಸ್‌ ಬಂದ ನಂತರ ಹಿರಿಯ ಸಚಿವರ ಜತೆ ಚರ್ಚಿಸುತ್ತೇನೆ. ಆ ಬಳಿಕ ಸಂಜೆ ಅಥವಾ ಬುಧವಾರ ಯಾರಿಗೆ ಯಾವ ಖಾತೆ ಎಂಬುದನ್ನು ಪ್ರಕಟಿಸುತ್ತೇನೆ ಎಂದು ಅವರು ಹೇಳಿದರು.

ಇತ್ತೀಚೆಗೆ ನೂತನ ಏಳು ಸಚಿವರ ಸೇರ್ಪಡೆ ಆಗಿದ್ದು, ಅವರಿಗೆ ಖಾತೆಗಳನ್ನು ಹಂಚಬೇಕಾಗಿದೆ. ಅಲ್ಲದೆ, ಕೆಲವು ಸಚಿವರ ಖಾತೆಗಳೂ ಬದಲಾವಣೆ ಆಗುವ ಸಾಧ್ಯತೆ. ಇವರಲ್ಲಿ ಕೆಲವರು ಬದಲಿ ಖಾತೆಗಳನ್ನು ಕೇಳಿದ್ದಾರೆ. ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆ ಆದವರಲ್ಲಿ ಕೆಲವರು ಪ್ರಬಲ ಖಾತೆಗಳಿಗೆ ಲಾಬಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು