ಶುಕ್ರವಾರ, ಡಿಸೆಂಬರ್ 3, 2021
27 °C
ಸಾವಿಗೀಡಾದವರು ರಾಮದುರ್ಗ ತಾಲ್ಲೂಕಿನವರು

ಬಾಗಲಕೋಟೆ: ಘಟಪ್ರಭಾ ಬಲದಂಡೆ ಕಾಲುವೆಗೆ ಕಾರು ಉರುಳಿ ನಾಲ್ವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮುಧೋಳ ತಾಲ್ಲೂಕಿನ ಲೋಕಾಪುರ ಬಳಿಯ ಹಲಕಿ- ಮೆಟಗುಡ್ಡ ರಸ್ತೆ ಪಕ್ಕದಲ್ಲಿ ಹರಿಯುವ ಘಟಪ್ರಭಾ ಬಲದಂಡೆ ಕಾಲುವೆಗೆ ಗುರುವಾರ ತಡರಾತ್ರಿ ಕಾರು ಉರುಳಿ ಬಿದ್ದು ನಾಲ್ವರು ಸಾವಿಗೀಡಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಬೀಡಕಿ ಗ್ರಾಮದ ಸುನಿಲ್ ಸದಪ್ಪ ಆರೆಬಿಂಚಿ (24) ಗುಡಮ್ಮನಾಳ ಗ್ರಾಮದ ಮಹಾದೇವಗೌಡ ಶಂಕರಗೌಡ ಪಾಟೀಲ (27), ಮುದೇನಕೊಪ್ಪ ಗ್ರಾಮದ ಎರ್ರಿತಾತಾ ಮೌನೇಶ ಕಂಬಾರ (26), ರಾಮಾಪುರ ಗ್ರಾಮದ ವಿಜಯ ಶಿವಾನಂದ ಲಟ್ಟಿ (26) ಮೃತರು.

ಮುಧೋಳ ಕಡೆಯಿಂದ ಸಾಲಹಳ್ಳಿ ಕಡೆಗೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಲಕಿ ಹತ್ತಿರ ಕಾಲುವೆಗೆ ಉರುಳಿ ಬಿದ್ದಿದೆ. ಈ ವೇಳೆ ಚಾಲಕ ಸುನಿಲ್ ಸೇರಿ ನಾಲ್ವರು ಸ್ಧಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಅದೇ ಕಾರಿನಲ್ಲಿದ್ದ ಈರಣ್ಣಾ ಘಾಠಿ ಮತ್ತು ಫರಾನಾ ಅತ್ತಿಕಾ ಅವರಿಗೆ ಗಾಯಗಳಾಗಿದ್ದು, ಈಜಿಕೊಂಡು ದಡ ಸೇರಿದ್ದಾರೆ. ಗಾಯಾಳುಗಳು ಮುಧೋಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರೇನ್‌ ಸಹಾಯದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರು ಹಾಗೂ ಶವಗಳನ್ನು ಹೊರಗೆ ತೆಗೆದರು. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು