ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-‌19: ಮುಂಬೈಗೆ 99,000 ಡೋಸ್‌ ಕೋವಿಶೀ‌ಲ್ಡ್

Last Updated 10 ಏಪ್ರಿಲ್ 2021, 14:51 IST
ಅಕ್ಷರ ಗಾತ್ರ

ಮುಂಬೈ: ಬೃಹನ್‌ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಶನಿವಾರ99,000 ಡೋಸ್‌ನಷ್ಟು ಕೋವಿಶೀಲ್ಡ್‌ ಲಸಿಕೆ ಪಡೆದುಕೊಂಡಿರುವುದಾಗಿ ತಿಳಿಸಿದೆ.ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎಂದುಬಿಎಂಸಿ ಮಾಹಿತಿ ನೀಡಿದೆ.

ಲಸಿಕೆ ಕೊರತೆಯಿಂದಾಗಿ ನಗರದ ಸುಮಾರು75ಕೇಂದ್ರಗಳಲ್ಲಿ ಲಸಿಕೆ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಶುಕ್ರವಾರ ಮುಂಬೈನಲ್ಲಿಒಟ್ಟು 9,200 ಕೋವಿಡ್-‌19 ಪ್ರಕರಣಗಳು ವರದಿಯಾಗಿದ್ದು, 35 ಸಾವು ವರದಿಯಾಗಿದ್ದವು. ಸದ್ಯ ಇಲ್ಲಿ 90,333 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಲಸಿಕೆ ಕೊರತೆ ಇರುವ ಬಗ್ಗೆ ಮಹಾರಾಷ್ಟ್ರದ ಸಚಿವ ಅಸ್ಲಾಮ್‌ ಶೇಕ್‌ ಹೇಳಿದ್ದರು. ಅವರು, ʼಲಸಿಕೆ ವಿತರಣೆ ವಿಚಾರದಲ್ಲಿಕೇಂದ್ರವು ರಾಜಕೀಯ ಮಾಡುತ್ತಿದೆ. ಈ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ವಿತರಣಾ ಕೇಂದ್ರಗಳನ್ನು ತೆರೆಯಲಾಯಿತು. ಸಾಧ್ಯವಾದಷ್ಟು ಗರಿಷ್ಠ ಪ್ರಮಾಣದಲ್ಲಿ ಜನರಿಗೆ ಲಸಿಕೆ ವಿತರಿಸಲಾಗುವುದು ಎಂದು ನಾವು ಹೇಳಿದ್ದೆವು. ಆದರೆ, ಮಹಾರಾಷ್ಟ್ರಕ್ಕೆ ಕನಿಷ್ಠ ಪ್ರಮಾಣದಲ್ಲಿ ಲಸಿಕೆ ಪೂರೈಸಲಾಗಿದೆ. ಇಂದು ರಾಜ್ಯದಾದ್ಯಂತ ಇರುವ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಕೊರತೆ ಇದ್ದು, ಮುಚ್ಚುವ ಸ್ಥಿತಿಯಲ್ಲಿವೆʼ ಎಂದು ಮಾಧ್ಯಮದವರಿಗೆ ಹೇಳಿದ್ದರು.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಇಂದು ಸರ್ವಪಕ್ಷಗಳ ಸಭೆ ನಡೆಸಿ ಕೋವಿಡ್-‌19 ರಾಜ್ಯದಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದರು.

ಮಹಾರಾಷ್ಟ್ರದಲ್ಲಿ ಶುಕ್ರವಾರ ಒಟ್ಟು58,993 ಹೊಸ ಪ್ರಕರಣಗಳು ವರದಿಯಾಗಿದ್ದವು. ಅದೇ ವೇಳೆ45,391 ಸೋಂಕಿತರು ಗುಣಮುಖರಾಗಿ301 ಮಂದಿ ಮೃತಪಟ್ಟಿದ್ದರು.ರಾಜ್ಯದಲ್ಲಿ ವಾರಾಂತ್ಯದ ಲಾಕ್‌ಡೌನ್‌ ಘೋಷಿಸಲಾಗಿದ್ದು, ಶುಕ್ರವಾರ ರಾತ್ರಿಯಿಂದಸೋಮವಾರ ಬೆಳಗ್ಗೆ 7ರವರೆಗೆ ಜಾರಿಯಲ್ಲಿದೆ. ಅತ್ಯವಶ್ಯಕ ಸೇವೆಗಳು ಮಾತ್ರವೇದೊರೆಯಲಿವೆ.

ಮುಂದಿನ ಕೆಲವು ದಿನಗಳಿಗಷ್ಟೇ ಲಸಿಕೆ ಸಾಕಾಗುತ್ತದೆ ಎಂದುಹಲವು ರಾಜ್ಯಗಳ ಮುಖ್ಯಮಂತ್ರಿಗಳು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT